ಮುಳಿಯ ತಿಮ್ಮಪ್ಪಯ್ಯ

Home/Birthday/ಮುಳಿಯ ತಿಮ್ಮಪ್ಪಯ್ಯ
Loading Events
This event has passed.

೩.೩.೧೮೮೮ ೧೬.೧.೧೯೫೦ ಕವಿ, ವಿಮರ್ಶಕ ಮುಳಿಯ ತಿಮ್ಮಪ್ಪಯ್ಯನವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ. ತಂದೆ ಕೇಶವಭಟ್ಟರು, ತಾಯಿ ಮೂಕಾಂಬಿಕಾ. ಪ್ರಾರಂಭಿಕ ಶಿಕ್ಷಣ ಮುಳಿಯ ಹಾಗೂ ವಿಟ್ಲದಲ್ಲಿ. ಮನೆಯಲ್ಲಿಯೇ ಕುಳಿತು ಕಲಿತದ್ದು ಸಂಸ್ಕೃತ. ಸಂಸ್ಕೃತಾಭ್ಯಾಸವನ್ನು ಮುಂದುವರೆಸಲು ತಿರುವಾಂಕೂರು, ಹಾಗೂ ಮೈಸೂರಿಗೆ ಪ್ರಯಾಣ. ಮೈಸೂರಿನ ಸಂಸ್ಕೃತ ಕಾಲೇಜಿನಲ್ಲಿ  ವ್ಯಾಸಂಗ. ಇಲ್ಲೆ ಕೆಲಕಾಲ ಸಂಗೀತಾಭ್ಯಾಸವನ್ನೂ ಮಾಡಿದರು. ಮಂಡ್ಯ ಮತ್ತು ಮಂಗಳೂರಿನಲ್ಲಿ ಕನ್ನಡ ಸಾಹಿತ್ಯದ ಪ್ರೌಢಶಿಕ್ಷಣ ಪಡೆದು ವಿದ್ವಾನ್ ಪದವಿ ಗಳಿಸಿದರು. ೧೯೧೧ರಲ್ಲಿ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಉದ್ಯೋಗ ಪ್ರಾರಂಭ. ನಂತರ ೧೯೧೮ರಲ್ಲಿ ಸೇಯಿಂಟ್ ಅಲೋಷಿಯಸ್ ಕಾಲೇಜಿನಲ್ಲಿ ಅಧ್ಯಾಪಕವೃತ್ತಿ. ೧೯೪೮ರಲ್ಲಿ ನಿವೃತ್ತಿ. ಸಂಶೋಧನೆ ಹಾಗೂ ವಿಮರ್ಶಾ ಕ್ಷೇತ್ರದಲ್ಲಿ ಆಸಕ್ತಿ ಗಳಿಸಿಕೊಂಡು ಪಡೆದ ಪರಿಣತಿ. ಮುದ್ದಣನ ರಾಮಾಶ್ವಮೇಧ ಚೌಕಟ್ಟಿನಲ್ಲಿ ಮೂಡಿ ಬಂದ ಕೃತಿ ‘ಚಂದ್ರಾವಳಿ ವಿಲಾಸ.’ ಭಾಗವತದಲ್ಲಿ ಬರುವ ಶಂಭಾಸುರನ ಕಥೆಯಾಧಾರಿತ ಹಳೆಗನ್ನಡದ ಛಂದಸ್ಸಿನಲ್ಲಿ ಮೂಡಿ ಬಂದದ್ದು ‘ಸೊಬಗಿನ ಬಳ್ಳಿ.’ ಕರ್ಣನ ಕುರಿತಾದ ಗದ್ಯ ಕಥನ ನಡೆಯನಾಡು-ಮಹಾಭಾರತದ ಕಥೆ ಆಧಾರಿತ. ಪ್ರೇಮಪಾಶವೆಂಬ ಮತ್ತೊಂದು ಕೃತಿ, ನೀತಿ ವಾಕ್ಯ ಆಧಾರಿತ ಕಾಲ್ಪನಿಕ ಕಥನ ಕಾವ್ಯ. ಬಾಲ್ಯದಿಂದಲೇ ತೊರವೆ ರಾಮಾಯಣಕ್ಕೆ ಮಾರು ಹೋಗಿ ರಚಿಸಿದ ಕೃತಿ ‘ನವನೀತ ರಾಮಾಯಣ’. ಪಶ್ಚಾತ್ತಾಪ ಮತ್ತು ವೀರ ಬಂಕೇಯ ಎಂಬ ಎರಡು ಕಾದಂಬರಿ ರಚನೆ. ಪಶ್ಚಾತ್ತಾಪ ಸಾಮಾಜಿಕ ಕಾದಂಬರಿ. ವೀರ ಬಂಕೇಯ ಐತಿಹಾಸಿಕ ವಸ್ತುವುಳ್ಳ ಕಾದಂಬರಿ. ದಕ್ಷಿಣ ಕನ್ನಡ ಜಿಲ್ಲೆಯವರಾದ್ದರಿಂದ ಯಕ್ಷಗಾನ ಸೆಳೆತದಿಂದ ತಪ್ಪಿಸಿಕೊಳ್ಳಲಾಗಿಲ್ಲ. ಪಾರ್ತಿಸುಬ್ಬ ಯಕ್ಷಗಾನ ವಿಮರ್ಶಾ ಗ್ರಂಥ ರಚನೆ. ‘ ‘ಸೂರ‍್ಯಕಾಂತಿ ಕಲ್ಯಾಣ’ ಯಕ್ಷಗಾನ ಪ್ರಸಂಗ ಕೃತಿ. ‘ಹಗಲಿರುಳು’ ಇವರು ರಚಿಸಿದ ನಾಟಕ.  ಪ್ರಕಟಿಸಿದ ಮತ್ತೆರಡು ಕೃತಿ ‘ಆದಿಪುರಾಣ ಸಂಗ್ರಹ’ ಮತ್ತು ‘ಸಮಸ್ತ ಭಾರತ’ ಸಾರ. ಪಂಪನನ್ನು ಕುರಿತ ಸಂಶೋಧನಾ ಕೃತಿ ‘ನಾಡೋಜ ಪಂಪ.’ ಇದರ ಜೊತೆಗೆ ಇವರ ಉಪನ್ಯಾಸಗಳು ಹಾಗೂ ಲೇಖನಗಳು ಗ್ರಂಥ ರೂಪದಲ್ಲಿ  ಪ್ರಕಟಗೊಂಡಿವೆ. ಕನ್ನಡದ ಏಳಿಗೆಗಾಗಿ ಮಾಡಿದ ಮತ್ತೊಂದು ಪ್ರಯತ್ನ ‘ಕನ್ನಡ ಕೋಗಿಲೆ’ ಎಂಬ ಪತ್ರಿಕೆಯನ್ನು ಹೊರತಂದುದು. ಸುಮಾರು ಐದು ವರ್ಷಕಾಲ ಅದರ ಸಂಪಾದಕತ್ವ. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗ ನಿಕಟ ಸಂಪರ್ಕ. ೧೯೩೧ರಲ್ಲಿ ಕಾರವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ. ನಿಧನರಾದದ್ದು ೧೬.೧.೧೯೫೦.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಜಿ. ವೆಂಕಟೇಶಯ್ಯ – ೧೯೦೨ ಜಿ.ಎಸ್. ಗಾಯಿ – ೧೯೧೭ ಎಂ. ಅಕಬರ ಅಲಿ – ೧೯೨೫ ಸರೋಜಿನಿ ಮಹಿಷಿ – ೧೯೩೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top