ಮೂಗೂರು ಜೇಜಮ್ಮ

Home/Birthday/ಮೂಗೂರು ಜೇಜಮ್ಮ
Loading Events
This event has passed.

೧೨.೦.೧೮೯೯ ೧೫.೦.೧೯೮೩ ಮೂಗೂರು ಅಮೃತ್ತಪ್ಪನವರಿಂದ ಕಟ್ಟುನಿಟ್ಟಾಗಿ ವ್ಯವಸ್ಥೆಗೊಳಿಸಿ, ನೃತ್ಯಕ್ಕೊಂದು ಕ್ರಮಬದ್ಧ ಪದ್ಧತಿಯನ್ನು ರೂಢಿಗೆ ತಂದು ಮೂಗೂರು ಶೈಲಿ ಎಂದೇ ಒಂದು ಪರಂಪರೆಯನ್ನೇ ನಿರ್ಮಿಸಿದ ವಂಶದ ಕುಡಿಯಾದ ಜೇಜಮ್ಮನವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಮೂಗೂರು ಎಂಬಲ್ಲಿ. ತಾಯಿ ಗೌರಮ್ಮ. ತಾತ ಅಮೃತಪ್ಪನವರಿಂದಲೇ ಪ್ರಾರಂಭಿಕ ನೃತ್ಯ ಶಿಕ್ಷಣ. ನಂತರ ತಾಯಿಯಿಂದ ಮುಂದುವರಿಕೆ. ಸಂಗೀತ ವಿದ್ವಾನ್ ಮಳವಳ್ಳಿ ಸುಬ್ಬಣ್ಣ ನವರಿಂದ ಸಂಗೀತ ಹಾಗೂ ಮರಿಯಾಲ ಮಠದ ಮಹಾಂತ ಸ್ವಾಮಿಗಳಲ್ಲಿ ಸಂಸ್ಕೃತಾಭ್ಯಾಸ. ೧೯೩೦ ರಲ್ಲಿ ಸ್ತ್ರೀನಾಟಕ ಮಂಡಲಿಯ ಸ್ಥಾಪನೆ – ಮಹಿಳೆಯೊಬ್ಬರಿಂದ ಸ್ಥಾಪಿತವಾದ ವೃತ್ತಿ ನಾಟಕ ಸಂಸ್ಥೆ ಎಂಬ ಹೆಗ್ಗಳಿಕೆ. ನಾಟಕ ಮಂಡಲಿಯಲ್ಲಿ ಆಡಳಿತದಾರರಾಗಿ, ಪಾತ್ರಧಾರಿಯಾಗಿ ವಹಿಸಿದ ಜವಾಬ್ದಾರಿಗಳು. ಮಂಡಲಿಯಲ್ಲಿ ಅಭಿನಯಿಸುತ್ತಿದ್ದ ಪ್ರಹ್ಲಾದ ಚರಿತ್ರೆಯಲ್ಲಿ ಹಿರಣ್ಯ ಕಶಿಪುವಾಗಿ, ಗುಲೇಬ ಕಾವಲಿಯಲ್ಲಿ ಮಂದಾರವಲ್ಲಿಯಾಗಿ ತೋರಿದ ನಟನಾ ಸಾಮರ್ಥ್ಯ. ಹಲವಾರು ವಿದ್ಯಾರ್ಥಿಗಳಿಗೆ ನೀಡಿದ ನೃತ್ಯ ಶಿಕ್ಷಣ. ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ಗಣ್ಯರ ಮನೆಯ ಶುಭ ಸಮಾರಂಭಗಳಲ್ಲಿ, ಸಾಂಸ್ಕೃತಿಕ ಉತ್ಸವದ ಸಂದರ್ಭಗಳಲ್ಲಿ ನೀಡುತ್ತಿದ್ದ ಕಾರ್ಯಕ್ರಗಳು. ೧೯೫೬ ರಿಂದ ಹತ್ತು ವರ್ಷ ಕಾಲ ಕೊಡಗು ಸಂಗೀತ ನಾಟಕ ಅಕಾಡೆಮಿಯಲ್ಲಿ ಭರತ ನಾಟ್ಯ ಶಿಕ್ಷಕಿಯಾಗಿ ಹಲವಾರು ವಿದ್ಯಾರ್ಥಿಗಳಿಗೆ ನೀಡಿದ ನೃತ್ಯ ಶಿಕ್ಷಣ. ಆರ್ಥಿಕ ದೃಷ್ಟಿಯಿಂದ ಅಶಕ್ತರಾಗಿ, ನೃತ್ಯ ಕಲಿಯುವ ಆಸೆಯಿಂದ ಬಂದವರಿಗೆ ನೀಡಿದ ಊಟ, ವಸತಿ ಸೌಕರ್ಯ. ತಾತನವರು ಕಲಿಸಿದ ನೃತ್ಯ ಪದ್ಧತಿಯಲ್ಲಿ, ಪ್ರಾರಂಭದಲ್ಲಿ ಆರಭಿಯಲ್ಲಿ ಚೂರ್ಣಿಕ, ಮೇಳ ಪ್ರಾಪ್ತಿ, ಜಪಿತ, ನಂತರ ನಾಟ ರಾಗದಲ್ಲಿ ಮಂಗಳ ಆ ಮೇಲೆ ಕಲಾವಿದೆಯ ಪ್ರವೇಶ, ಪುಷ್ಪಾಂಜಲಿ, ಗೀತೆ, ಅಲರಿಪುಯಿಂದ ಹಿಡಿದು ತಿಲ್ಲಾನದವರೆಗೆ ನೃತ್ಯ ಬಂಧಗಳು. ಇವು ಜೇಜಮ್ಮನವರು ಕಲಿಸುತ್ತಿದ್ದ ರೀತಿ. ೧೯೬೩ ರಲ್ಲಿ ಮೈಸೂರು ಸಂಗೀತ ನಾಟಕ ಅಕಾಡೆಮಿಯು ಈ ಹಿರಿಯ ಕಲಾವಿದೆಗೆ ತೊಡಿಸಿದ ಪ್ರಶಸ್ತಿ, ಗೌರವಗಳು. ೧೯೭೦ ರಲ್ಲಿ ನಾಡಿನ ಹಿರಿಯ ಸಂಗೀತ ಕಲಾವಿದರಾಗಿದ್ದ ಆಸ್ಥಾನ ವಿದ್ವಾನ್ ಬಿ. ದೇವೇಂದ್ರಪ್ಪನವರು ತಮ್ಮ ಮಾರುತಿ ಮಂದಿರದಲ್ಲಿ, ವಿದ್ವತ್ ಸಭೆಯಲ್ಲಿ ’ಭರತ ನಾಟ್ಯ ಪ್ರವೀಣೆ’ ಬಿರುದು ನೀಡಿ ಮಾಡಿದ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು ದ್ವಾರಕಾನಾಥ್‌. ಟಿ.ವಿ. – ೧೯೨೬ ಬಸವರಾಜು. ತು.ಮ – ೧೯೩೮ ಶ್ರೀನಿವಾಸನ್. ಟಿ.ಟಿ – ೧೯೪೯ ಕುಮಾರದಾಸ – ೧೯೫೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top