Loading Events

« All Events

  • This event has passed.

ಮೈಸೂರು ಎಂ. ಮಂಜುನಾಥ್

October 5, 2023

೦೫.೧೦.೧೯೬೯ ಅತಿ ಕಿರಿಯ ವಯಸ್ಸಿನಲ್ಲೇ ಕರ್ನಾಟಕ ಸಂಗೀತದ ಪರಂಪರೆಯನ್ನು ವಿದೇಶಿಯರಿಗೆ ಪರಿಚಯಿಸಿದ ಮಂಜುನಾಥ್‌ ಹುಟ್ಟಿದ್ದು ಮೈಸೂರು. ತಂದೆ ಪ್ರೊ. ಎಸ್‌. ಮಹಾದೇವಪ್ಪ, ತಾಯಿ ಕಮಲಮ್ಮ. ತಂದೆ ಮತ್ತು ಅಣ್ಣ ಎಂ. ನಾಗರಾಜ್‌ರವರಿಂದ ಸಂಗೀತದ ಪ್ರಥಮ ಶಿಕ್ಷಣ. ಎಂಟನೆಯ ವಯಸ್ಸಿನಲ್ಲೇ ಕಚೇರಿ ನಡೆಸಿ ಸಂಗೀತಗಾರರ, ಸಂಗೀತ ಪ್ರೇಮಿಗಳ ಮನಗೆದ್ದು ತೋರಿದ ಅದ್ಭುತ ಬಾಲ ಪ್ರತಿಭೆ. ಮೈಸೂರು ವಿಶ್ವವಿದ್ಯಾಲಯದಿಂದ ನಾಲ್ಕು ಚಿನ್ನದ ಪದಕಗಳೊಡನೆ ಸಂಗೀತದಲ್ಲಿ ಪಡೆದ ಸ್ನಾತಕೋತ್ತರ ಪದವಿ. ‘ಶಾಸ್ತ್ರೀಯ ಸಂಗೀತದಲ್ಲಿ ಪಿಟೀಲಿನ ಪಾತ್ರ’ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ದೊರೆತ ಪಿಎಚ್‌.ಡಿ. ಪದವಿ. ಕಲಾವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸಲ್ಲಿಸುತ್ತಿರುವ ಸೇವೆ. ಮೈಸೂರು ನಾಗರಾಜರೊಡನೆ(ಅಣ್ಣ) ನಡೆಸಿಕೊಟ್ಟ ದ್ವಂದ್ವ ಪಿಟೀಲು ವಾದನ ಕಚೇರಿ. ರಾಷ್ಟ್ರಮಟ್ಟದ ಖ್ಯಾತಿಯ ಸಂಗೀತಗಾರರಾದ ವಿ.ಜಿ.ಜೋಗ್‌, ಪಂ. ವಿಶ್ವಮೋಹನ ಭಟ್‌, ಡಾ. ಎಂ.ಬಾಲಮುರಳಿ ಕೃಷ್ನ, ತೇಜೇಂದ್ರ ನಾರಾಯಣ ಮಜುಮದಾರ್‌, ಕೋನು ಮಜುಮದಾರ್‌ ಮುಂತಾದವರಿಗೆ ನೀಡಿದ ಪಿಟೀಲು ವಾದನದ ಸಹಕಾರ. ಅಮೆರಿಕಾದ ಓರೆಗಾನ್‌, ಇಂಗ್ಲೆಂಡಿನ ಸಾಂಸ್ಕೃತಿಕ ಉತ್ಸವ, ಸಿಡ್ನಿಯ ಒಪೇರಾ ಹೌಸ್‌, ಆಸ್ಟ್ರೇಲಿಯಾ, ಅಮೆರಿಕಾದ ಅಂತಾರಾಷ್ಟ್ರೀಯ ಪಿಟೀಲು ವಾದಕರ ಸಮ್ಮೇಳನ, ಕೌಲಾಲಂಪುರ್‌, ಮಲೇಷಿಯಾ, ಮೆಲ್ಬೊರನ್‌, ನಮಿಬಿಯಾ ಅಧ್ಯಕ್ಷರ ಮುಂದೆ ವಿಶೇಷ ಕಾರ್ಯಕ್ರಮ. ಪ್ಯಾರಿಸ್‌, ಅಮೆರಿಕಾದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಪ್ರಾತ್ಯಕ್ಷಿಕೆ, ಕಚೇರಿ, ಕಾರ್ಯಕ್ರಮಗಳು. ಮ್ಯೂಸಿಕ್‌ ಅಕಾಡೆಮಿಯಿಂದ ಅತ್ಯುತ್ತಮ ಪಿಟೀಲು ವಾದಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅಮೆರಿಕದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಸ್ಥೆಯಿಂದ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು.   ಇದೇದಿನಹುಟ್ಟಿದಕಲಾವಿದರು ಪಿಟೀಲು ವೆಂಕಟಸುಬ್ಬಯ್ಯ – ೧೮೮೫ ಪ್ರಹ್ಲಾದ್‌. ಎಸ್‌- ೧೯೪೧

* * *

Details

Date:
October 5, 2023
Event Category: