ಯಮುನಾಮೂರ್ತಿ

Home/Birthday/ಯಮುನಾಮೂರ್ತಿ
Loading Events
This event has passed.

೦೧.೦೬.೧೯೩೩ ಸಂಪ್ರದಾಯಶೀಲ ಪಾತ್ರಗಳಿಗ ತಮ್ಮದೇ ಆದ ವಿಶಿಷ್ಟ ರೂಪಕೊಟ್ಟು ನಟನೆಯಲ್ಲಿ ಅಗ್ರಗಣ್ಯರೆನಿಸಿರುವ ಯಮುನಾಮೂರ್ತಿಯವರು ಹುಟ್ಟಿದ್ದು ಬೆಂಗಳೂರು. ಇಂಗ್ಲಿಷ್ ನಾಟಕಗಳಲ್ಲಿ ಪಾತ್ರವಹಿಸುತ್ತಿದ್ದ ತಂದೆ ಎಸ್.ಪಿ. ರಂಗರಾವ್, ಸಂಗೀತಗಾರ್ತಿ ತಾಯಿ ವೆಂಕಮ್ಮ. ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ಮನಸ್ಸು. ಏಳನೆಯ ವಯಸ್ಸಿನಲ್ಲಿಯೇ ಸತ್ಯವಾನ್ ಸಾವಿತ್ರಿ ನಾಟಕದಲ್ಲಿ ಸತ್ಯವಾನ ಮತ್ತು ನಾರದ ಎರಡು ಪಾತ್ರಗಳನ್ನೂ ನಿರ್ವಹಿಸಿ ಪಡೆದ ಮೆಚ್ಚುಗೆ. ಬಿ.ಎಸ್ಸಿ. ವಿಜ್ಞಾನ ಪದವಿಧರೆಯಾದರೂ ವಾಲಿದ್ದು ರಂಗಭೂಮಿ ಕಡೆಗೆ. ತಂದೆ ತಾಯಿಗಳಿಂದ ದೊರೆತ ಪ್ರೋತ್ಸಾಹ. ಪಿ. ಕಾಳಿಂಗ ರಾಯರ ಸೋದರ ಬಿ. ದಾಸಪ್ಪನವರ ನಿರ್ದೇಶನದಲ್ಲಿ ಹವ್ಯಾಸಿ ನಟಿಯಾಗಿ ಮೊದಲು ಅಭಿನಯಿಸಿದ ನಾಟಕ ’ಮಾಯಾ’. ೧೯೪೫ ರಲ್ಲಿ ಛಾಯಾ ಕಲಾವಿದರು ತಂಡಕ್ಕೆ ಸೇರ‍್ಪಡೆ. ಪರ್ವತವಾಣಿಯವರ ’ಬಹದ್ದೂರ್‌ ಗಂಡ’ ನಾಟಕದ ’ಸರೋಜಳಾಗಿ’ ವಹಿಸಿದ ಮುಖ್ಯ ಪಾತ್ರ. ನೂರೈವತ್ತಕ್ಕೂ ಹೆಚ್ಚು ಪ್ರದರ್ಶನ ಕಂಡು ಹವ್ಯಾಸಿ ರಂಗಭೂಮಿಗೆ ಹೆಸರು ತಂದ ನಾಟಕ. ಮಾತೃಭಾಷೆ ಮರಾಠಿ, ಕಲಿತದ್ದು ಇಂಗ್ಲಿಷ್, ಆದರೆ ಕನ್ನಡ ಕಲಿತು ಸಂದದ್ದು ಕನ್ನಡ ರಂಗಭೂಮಿಗೆ, ಹಲವಾರು ನಾಟಕಗಳನ್ನು ರಚಿಸಿ ಆಕಾಶವಾಣಿ ಮತ್ತು ದೂರದರ್ಶನಕ್ಕಾಗಿ ನಿರ್ದೇಶನ. ಪರ್ವತವಾಣಿಯವರ ಉಂಡಾಡಿಗುಂಡ, ತಿರುಮಂತ್ರ, ಚಂಚಲ, ವಿಶ್ವರಂಗ, ವಸಂತಸೇನೆ, ಭೂತಗಳು, ಸುಂದ್ರೋಪಸುಂದ್ರು’ ಮುಂತಾದುವುಗಳಲ್ಲಿ ಮುಖ್ಯ ಪಾತ್ರ. ಭರತನಾಟ್ಯ ಮತ್ತು ಕಥಕ್ಕಳಿ ನೃತ್ಯ ಪ್ರಕಾರಗಳಲ್ಲೂ ಪಡೆದ ಪ್ರಾವೀಣ್ಯತೆ, ಚೀನಾದ ನಿಯೋಗ, ಮಾರ್ಷಲ್ ಟಿಟೋ, ವಿಯಟ್ನಾಂ ನಿಯೋಗ ಮುಂತಾದ ನಿಯೋಗಗಳಿಗಾಗಿ ನೃತ್ಯ ಪ್ರದರ್ಶನ. ಧಾರವಾಡ ಮತ್ತು ಬೆಂಗಳೂರು ಆಕಾಶವಾಣಿ ನಿಲಯಗಳಲ್ಲಿ ನಾಟಕ ನಿರ್ದೇಶಕಿಯಾಗಿ ಸಲ್ಲಿಸದ ಸೇವೆ. ಉತ್ತಮ ನಿರ್ದೇಶನಕ್ಕಾಗಿ ಆಕಾಶವಾಣಿಯ ರಾಷ್ಟ್ರೀಯ ಜಾಲದಲ್ಲಿ ಹಲವಾರು ಬಾರಿ ಪಡೆದ ಬಹುಮಾನಗಳು. ದಲಿತ ದುಂಧುಬಿ, ಅಪೂರ್ಣ ರಾಮಾಯಣ, ಹಳೆಬೇರು ಹೊಸ ಚಿಗುರು, ನಿಸರ್ಗ ನಿನಾದ, ಜೀವನ ಯೋಗ ತರಂಗ, ಕುರಿಗಳು. ಕುರಿಗಳು ಮುಂತಾದ ನಾಟಕಗಳಿಗೆ ದೊರೆತ ಬಹುಮಾನ. ೧೯೯೧ ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಹೆಸರಾಂತ ನಿರ್ದೇಶಕರ ಧಾರಾವಾಹಿಗಳಾದ ಮಾಯಾಮೃಗ, ಮೂಡಲಮನೆ, ಪ್ರತಿಬಿಂಬ, ಚಂದ್ರಬಿಂಬ, ಯಾವಜನ್ಮದ ಮೈತ್ರಿ, ಸಂಜೆ ಮಲ್ಲಿಗೆ, ಯದ್ವಾ-ತದ್ವಾ, ಪಾಪಪಾಂಡು ಮುಂತಾದ ಧಾರಾವಾಹಿಗಳ ನಟಿ. ಟಿ.ವಿ. ಧಾರಾವಾಹಿ, ನಾಟಕದ ಪಾತ್ರಗಳಿಗೆ ವಿಭಿನ್ನ ರೀತಿಯ ಧ್ವನಿ ಏರಿಳಿತಗಳನ್ನುಪಯೋಗಿಸಿ ಪಾತ್ರಗಳಿಗೆ ಜೀವ ತುಂಬುವುದರಲ್ಲಿ ಅಗ್ರಗಣ್ಯರು.   ಇದೇದಿನಹುಟ್ಟಿದಕಲಾವಿದರು: ಎನ್.ವಿ.ಗೋಪಿನಾಥ್ – ೧೯೩೯ ನೀರ್ನಳ್ಳಿ ಗಣಪತಿ – ೧೯೫೧ ಬಸವರಾಜ ಹಿರೇಮಠ – ೧೯೬೧ ರವೀಂದ್ರ ಸೋರೆಗಾಂವಿ – ೧೯೬೭.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top