ರಂ.ಶ್ರೀ. ಮುಗಳಿ

Home/Birthday/ರಂ.ಶ್ರೀ. ಮುಗಳಿ
Loading Events

೧೫-೭-೧೯೦೬ ೨೦-೨-೧೯೯೩ ರಸಿಕರಂಗ ಎಂಬ ಕಾವ್ಯನಾಮದಿಂದ ಪರಿಚಿತರಾಗಿರುವ ರಂಗನಾಥ ಶ್ರೀನಿವಾಸ ಮುಗಳಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ. ತಂದೆ ಶ್ರೀನಿವಾಸರಾಯರು, ತಾಯಿ ಕಮಲಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಬಾಗಲಕೋಟೆ, ಬಿಜಾಪುರಗಳಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಸಂಸ್ಕೃತ ಆನರ್ಸ್), ಎಂ.ಎ. (ಕನ್ನಡ) ಪದವಿ. ಬಿ.ಟಿ. ಪರೀಕ್ಷೆಯಲ್ಲೂ ತೇರ್ಗಡೆ. ಉದ್ಯೋಗ ಪ್ರಾರಂಭಿಸಿದ್ದು ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ. ನಂತರ ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿ ಪ್ರಿನ್ಸಿಪಾಲರಾಗಿ ನಿವೃತ್ತಿ. ಕೆಲಕಾಲ ಕರ್ನಾಟಕ ಸರಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಜವಾಬ್ದಾರಿ. ೧೯೬೭-೭೦ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ. ರಚಿಸಿದ ಕೃತಿಗಳು ಹಲವಾರು. ಕಾದಂಬರಿ-ಅನ್ನ, ಬಾಳುರಿ, ಕಾರಣ ಪುರುಷ. ಕವನ ಸಂಕಲನ-ಬಾಸಿಗ, ಅಪಾರ ಕರುಣೆ, ಓಂ ಅಶಾಂತಿಃ, ನಾಟಕ-ಎತ್ತಿದ ಕೈ (ಹತ್ತು ಏಕಾಂಕಗಳ ಸಂಗ್ರಹ), ನಾಮಧಾರಿ, ಮನೋರಾಜ್ಯ, ಧನಂಜಯ (ದೊಡ್ಡ ನಾಟಕಗಳು). ವಿಮರ್ಶೆ-ರನ್ನನ ಕೃತಿರತ್ನ, ತವನಿ ಮತ್ತು ‘ಕನ್ನಡ ಸಾಹಿತ್ಯದ ಮೈಲಿಗಲ್ಲು’ ‘ಕನ್ನಡ ಸಾಹಿತ್ಯ ಚರಿತ್ರೆ.’ ಲಭಿಸಿದ ಸನ್ಮಾನಗಳು ಹಲವಾರು. ೧೯೪೧ರಲ್ಲಿ ಹೈದರಾಬಾದಿನಲ್ಲಿ. ಕನ್ನಡ ಸಾಹಿತ್ಯ ಸಮ್ಮೇಳನದ ನಾಟಕಗೋಷ್ಠಿ ಅಧ್ಯಕ್ಷತೆ, ೧೯೫೫ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವಿಮರ್ಶಾಗೋಷ್ಠಿ ಅಧ್ಯಕ್ಷತೆ, ೧೯೬೩ರಲ್ಲಿ ತುಮಕೂರಿ(ಸಿದ್ಧಗಂಗಾ)ನಲ್ಲಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ೧೯೬೪ರಲ್ಲಿ ಇಂಕ್ಲಾ ಸಂಸ್ಥೆಯ ಪರವಾಗಿ ಫ್ರಿಬುವಿನಲ್ಲಿ ನಡೆದ ಜಾಗತಿಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಪುಣೆ ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿ. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ರಸಿಕರಂಗ’ ಮತ್ತು ‘ರಸಿಕ ರಂಗದರ್ಶನ.’   ಇದೇ ದಿನ ಹುಟ್ಟಿದ ಸಾಹಿತಿಗಳು : ರಾ.ಯ. ಧಾರವಾಡಕರ್ – ೧೯೧೯-೧೨.೪.೯೧ ಎಂ.ಎಸ್.ಕೆ. ಪ್ರಭು – ೧೯೩೮-೨೫.೧.೨೦೦೦ ಚಂದ್ರಶೇಖರ್. ಪ.ವಿ. – ೧೯೩೩ ಎಂ. ನಾಗರಾಜರಾವ್ – ೧೯೨೩ ಮನೋರಮಾ. ಎಂ. ಭಟ್ – ೧೯೩೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top