ರಾಜಮ್ಮ ಕೇಶವಮೂರ್ತಿ

Home/Birthday/ರಾಜಮ್ಮ ಕೇಶವಮೂರ್ತಿ
Loading Events
This event has passed.

೨೮.೦೪.೧೯೨೯ ಕರ್ನಾಟಕ ಸಂಗೀತದ ಅಭಿನವ ಶಾರದೆ ಎಂದೇ ಪ್ರಸಿದ್ಧರಾಗಿರುವ ರಾಜಮ್ಮನವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ. ತಂದೆ ಲಕ್ಷ್ಮೀ ಕಾಂತಯ್ಯ, ತಾಯಿ ಗುಂಡಮ್ಮ, ಸರಕಾರಿ ಕೆಲಸದಲ್ಲಿದ್ದ ತಂದೆಗೆ ಭದ್ರಾವತಿಗೆ ವರ್ಗ. ಅಲ್ಲಿ ಆಸ್ಥಾನ ವಿದ್ವಾನ್ ದೇವೇಂದ್ರಪ್ಪ, ಬಿ. ಶೇಷಪ್ಪ, ರಾಮಾಜೋಯಿಸ್, ಕೆ.ಎಸ್. ರಾಮಚಂದ್ರನ್‌ರವರಲ್ಲಿ ಪ್ರಾರಂಭಿಕ ಶಿಕ್ಷಣ. ೧೯೪೭ ರಲ್ಲಿ ಸಂಗೀತದ ಸೀನಿಯರ್‌ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆ. ಮದುವೆಯ ನಂತರ ಮೈಸೂರಿಗೆ ತೆರಳಿ ಆರ್‌.ಕೆ. ನಾರಾಯಣಸ್ವಾಮಿ, ಆರ್‌.ಕೆ. ಶ್ರೀಕಂಠನ್ ರವರಲ್ಲಿ ಪ್ರೌಢಶಿಕ್ಷಣ. ವಿದ್ವತ್ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ. ಉದ್ಯೋಗಕ್ಕೆ ಸೇರಿದ್ದು ಸರಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ. ೩೦ ವರ್ಷಕ್ಕೂ ಹೆಚ್ಚು, ಸಂಗೀತದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಕರ್ನಾಟಕ ಸರಕಾರದ ಪರೀಕ್ಷಾ ಮಂಡಲಿಯ ವಿದ್ವತ್ ಪರೀಕ್ಷೆಯ ಪರೀಕ್ಷಕಳಾಗಿ, ಅಧ್ಯಕ್ಷಿಣಿಯಾಗಿ ಸಲ್ಲಿಸಿದ ಸೇವೆ. ಪಿ.ಯು. ಮತ್ತು ಬಿ.ಎ. ತರಗತಿಗಳ ಐಚ್ಛಿಕ ಸಂಗೀತ ವಿದ್ಯಾರ್ಥಿಗಳಿಗೆ ಸಂಗೀತ ಪಾಠ – ಮಾರ್ಗದರ್ಶನ. ರಾಜ್ಯದ ಹಲವಾರು ಕಡೆ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಗಳು. ಬೆಂಗಳೂರು ಗಾಯನ ಸಮಾಜ, ಮಲ್ಲೇಶ್ವರಂ ಸಂಗೀತ ಸಭೆ, ಕರ್ನಾಟಕ ಗಾನ ಕಲಾ ಪರಿಷತ್ತು. ತ್ಯಾಗರಾಜ ಗಾನಸಭಾ, ರಾಜಾಜಿನಗರ ಸಂಗೀತ ಸಭಾ, ಶ್ರೀಕೃಷ್ಣ ಸಂಗೀತ ಸಭಾ ಮುಂತಾದುವುಗಳಲ್ಲಿ. ಹೊರ ರಾಜ್ಯಗಳಲ್ಲೂ ನಡೆಸಿಕೊಟ್ಟ ಕಾರ್ಯಕ್ರಮಗಳು. ಅನಂತಪುರದ ಸಂಗೀತ ಸಭಾ (ಆಂಧ್ರ) ತಮಿಳುನಾಡು, ಮುಂಬಯಿ ಕರ್ನಾಟಕ ಸಂಘ, ಮುಂತಾದೆಡೆ, ಆಕಾಶವಾಣಿ, ದೂರದರ್ಶನ ಕೇಂದ್ರದಿಂದಲೂ ಗಾಯನ ಕಾರ್ಯಕ್ರಮಗಳ ಪ್ರಸಾರ. ದಕ್ಷಿಣ ವಲಯ ಸಂಗೀತ ಕಾರ್ಯಕ್ರಮದಲ್ಲಿ ಭಾಗಿ. ಸಂದ ಪ್ರಶಸ್ತಿ ಗೌರವಗಳು: ಚಿಕ್ಕಮಗಳೂರಿನ ೪ನೇ ಭಾರತೀಯ ಧರ್ಮ ಸಮ್ಮೇಳನದಲ್ಲಿ ಸಂಗೀತ ರತ್ನ ಬಿರುದು- ಸುವರ್ಣ ಪದಕ, ಬೆಂಗಳೂರಿನ ಗಾಯನ ಸಮಾಜ, ರಾಜಾಜಿನಗರದ ಶಂಕರ ಜಯಂತಿ ಸಂದರ್ಭದ ಸಂಗೀತ ಸಮ್ಮೇಳನದ ಅಧ್ಯಕ್ಷತೆ – ಸಂಗೀತ ವಿಶಾರದೆ ಬಿರುದು ಸನ್ಮಾನ, ಪುರಂದರ – ತ್ಯಾಗರಾಜರ ಆರಾಧನಾ ಮಹೋತ್ಸವ ಸಂದರ್ಭದಲ್ಲಿ ಮೈಸೂರಿನಲ್ಲಿ ಸಂಗೀತ ಕಲಾ ತಪಸ್ವಿ, ಶೇಷ ಗಣಪತಿ ಮಹಿಳಾ ಸಂಘದವರಿಂದ ಅಭಿನವ ಶಾರದೆ,  ೧೯೭೭ ರಲ್ಲಿ ಸ್ವರಭೂಷಿಣಿ ಬಿರುದು – ತೋಡ. ಮುತ್ತಿನಹಾರ ದೊಡನೆ ಸನ್ಮಾನ. ಕರ್ನಾಟಕ ಸಂಗೀತ, ನೃತ್ಯ ಅಕಾಡಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇದಿನಹುಟ್ಟಿದಕಲಾವಿದರು: ಬಂಕಾಪುರ. ಸಿ.ಎಸ್.- ೧೯೨೯ ಅಕ್ಕಮಹಾದೇವಿ ಹಿರೇಮಠ – ೧೯೫೬ ಕಬೀರ್‌ ದಾಸ್ – ೧೯೬೯ ಪುಲಿಕೇಶಿ ಕೆ.ಆರ್‌.ವಿ.- ೧೯೭೦.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top