ರಾಜಶೇಖರ ಭೂಸನೂರ ಮಠ

Home/Birthday/ರಾಜಶೇಖರ ಭೂಸನೂರ ಮಠ
Loading Events
This event has passed.

೧೬-೧-೧೯೩೮ ಹುಟ್ಟಿದ್ದು ಹುಬ್ಬಳ್ಳಿ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಹುಬ್ಬಳ್ಳಿ. ಹೈಸ್ಕೂಲು ಓದಿದ್ದು ಬೆಳಗಾವಿ. ಬಿ.ಎಸ್‌ಸಿ. ಪದವಿ ಪಡೆದದ್ದು ಮುಂಬೈ. ಬನಾರಸ್ ಹಿಂದೂ ಯೂನಿವರ್ಸಿಟಿಯಿಂದ ಎಂ.ಎಸ್‌ಸಿ. ಪದವಿ. ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭ. ವೈಜ್ಞಾನಿಕ ಕಥೆಗಳ ನಿರಾಯಾಸ ಬರವಣಿಗೆ. ಮಕ್ಕಳಿಗಾಗಿ ಹಲವಾರು ವೈಜ್ಞಾನಿಕ ಕಥೆಗಳ ಪ್ರಕಟಣೆ. ನಿಯತಕಾಲಿಕಗಳಲ್ಲಿ ಲೇಖನಗಳು ಪ್ರಕಟಿತ. ಹಲವಾರು ಕಥೆ, ಕಾದಂಬರಿ, ನಾಟಕಗಳ ಸಂಪಾದನೆ. ಪ್ರಾಥಮಿಕ ಶಾಲಾಮಟ್ಟದಿಂದ ಸ್ನಾತಕೋತ್ತರ ಮಟ್ಟದವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಪಠ್ಯಪುಸ್ತಕ ರಚನೆ. ವೈಜ್ಞಾನಿಕ ಕಾದಂಬರಿಗಳು ಹಲವಾರು ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಿತ. ಸುಧಾ ವಾರಪತ್ರಿಕೆಯಲ್ಲಿ ಏರ‍್ಪಡಿಸಿದ್ದ  ಸ್ಪರ್ಧೆಯಲ್ಲಿ ‘ಮನ್ವಂತರ’ ಕಾದಂಬರಿಗೆ ಬಹುಮಾನ. ಮಹಾವಿಜಯ ಬಾನುಲಿಯಲ್ಲಿ ಬಹುಮಾನ ಪಡೆದು ಬಿತ್ತರಗೊಂಡ ನಾಟಕ. ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ನೂರಾರು ಗೋಷ್ಠಿ, ಕಮ್ಮಟ, ಸಮ್ಮೇಳನಗಳಲ್ಲಿ ಭಾಗಿ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳು. ಹಲವಾರು ವೈಜ್ಞಾನಿಕ ಕಾದಂಬರಿಗಳ ರಚನೆ. ವಿಜ್ಞಾನ ದೃಷ್ಟಿಯಲ್ಲಿ ಸೃಷ್ಟಿ, ರಾಕ್ಷಸದ್ವೀಪ, ಶತಮಾನದಾಚೆ, ಝಿಯಾನ್ ಸಾಹಸಗಳು ಮಾಲಿಕೆಯಲ್ಲಿ ಶುಕ್ರಗ್ರಹದ ಝಿಯಾನ್. ಆಪರೇಷನ್ ಯು.ಎಫ್.ಒ., ಮಾಯ, ಮುಂತಾದ ಕಾದಂಬರಿಗಳು. ವೈಜ್ಞಾನಿಕ ಕಥಾಮಾಲಿಕೆಯಲ್ಲಿ ಸಿಗ್ನಿ ಸಂಗೀತ, ಟಚೀರಮಾ, ಕಿರಣ ಮುಂತಾದುವು. ಆಧುನಿಕ ಅಮರಾವತಿ, ಓಂಕಾರ, ನಾಟಕಗಳು. ಮಂಗಳ-ಕಥೆಗಳು ಮತ್ತು ಕಿರುಕಾದಂಬರಿ. ‘.೦೦೭ ಮತ್ತು ಇತರರು’ ನಗೆನಾಯಕನ ಹುಚ್ಚು ಸಾಹಸಗಳು. ಪ್ರೌಢದೇವರಾಯನ ಕಾವ್ಯಕಥಾ ಸಂಗ್ರಹ-ಸಾಹಿತ್ಯಕೃತಿ ರಚನೆ. ಭೌತಶಾಸ್ತ್ರ ಪ್ರವೇಶಿಕ-ಇಂಗ್ಲಿಷ್ ಕೃತಿ ರಚನೆ. ಸುಮಾರು ನಲವತ್ತಕ್ಕೂ ಮಿಕ್ಕು ಕೃತಿ ರಚಿಸಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top