Loading Events

« All Events

  • This event has passed.

ರಾಜೀವ್‌ ತಾರಾನಾಥ್‌

October 17, 2023

೧೭.೧೦.೧೯೩೨ ಸುಪ್ರಸಿದ್ಧ ಸರೋದ್‌ ವಾದಕರಾದ ರಾಜೀವ ತಾರಾನಾಥರು ಹುಟ್ಟಿದ್ದು ಬೆಂಗಳೂರು. ತಂದೆ ವೈದ್ಯ, ಸಾಹಿತಿ, ಸಂಗೀತಾರಾಧಕರಾದ ಪಂಡಿತ ತಾರಾನಾಥರು, ತಾಯಿ ಸುಮತಿ. ತಂದೆ ತಾಯಿಯಿಂದಲೇ ಪ್ರಾರಂಭಿಕ ಶಿಕ್ಷಣ. ಬೆಂಗಳೂರು ಸೆಂಟ್ರಲ್‌ಕಾಲೇಜಿನಿಂದ ಬಿ.ಎ (ಆನರ್ಸ್) ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪ್ರಥಮ ರ‍್ಯಾಂಕ್‌, ಕೆಲಕಾಲ ಅಧ್ಯಾಪಕ ವೃತ್ತಿ, ಪೂರ್ಣಪ್ರಮಾಣದ ಸರೋದ್‌ ವಾದಕರು, ಪೊಯೆಟ್ರಿ ಆಫ್‌ ಈಲಿಯೆಟ್‌ ಮಹಾಪ್ರಬಂಧಕ್ಕೆ ಡಾಕ್ಟರೇಟ್‌ಪದವಿ. ಸವಣೂರು ಕೃಷ್ಣಾಚಾರ್ಯರಲ್ಲಿ ಸಂಗೀತದ ಪ್ರಾರಂಭಿಕ ಶಿಕ್ಷಣ. ಒಂಭತ್ತನೇ ವಯಸ್ಸಿನಲ್ಲೇ ಕಚೇರಿ ಮಾಡಿ ಬಾಗೇಶ್ರೀ ರಾಗ ಹಾಡಿ ಪಡೆದ ಪ್ರಶಂಸೆ. ಶಂಕರಜೋಶಿ ದೇವಗಿರಿ, ವೆಂಕಟರಾವ್‌ ರಾಮದುರ್ಗಾಕರ, ಪಂಚಾಕ್ಷರಿ ಬುವಾರವರಲ್ಲಿ ಹೆಚ್ಚಿನ ಶಿಕ್ಷಣ. ಉಸ್ತಾದ್‌ ಅಲಿ ಅಕಬರ್‌ ಅಲಿಖಾನ್‌ರವರಲ್ಲಿ ಸರೋದ್‌ ಅಭ್ಯಾಸ. ಪಂ. ರವಿಶಂಕರ್‌, ನಿಖಿಲ್‌ಬ್ಯಾನರ್ಜಿ ಮತ್ತು ಅಕಬರರ ತಂಗಿ ಅನ್ನಪೂರ್ಣದೇವಿಯವರ ಮಾರ್ಗದರ್ಶನ. ದೇಶಾದ್ಯಂತ ನೀಡಿದ ಸರೋದ್‌ ಕಚೇರಿಗಳು. ಕೋಲ್ಕತ್ತಾದ ಅಖಿಲ ಭಾರತ ಸಂಗೀತೋತ್ಸವ, ಮುಂಬಯಿಯ ಭಾತ್‌ಖಂಡೆ ಸಂಗೀತ ಸಮ್ಮೇಳನ, ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವ, ಗ್ವಾಲಿಯರ್‌ನ ತಾನಸೇನ ಸಮಾರೋಹ, ಆಕಾಶವಾಣಿ, ದೂರದರ್ಶನಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ವಿದೇಶಗಳಲ್ಲೂ ಕಾರ್ಯಕ್ರಮಗಳು. ಸಿಡ್ನಿ, ಮೆಲ್ಬೊರನ್‌, ಅಡಿಲೈಡ್‌, ಕ್ಯಾನ್‌ಬೆರ‍್ರಾ ಮುಂತಾದೆಡೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾಧ್ಯಪಕರಾಗಿ ಕೆಲಕಾಲ. ಸಂಸ್ಕಾರ, ಪಲ್ಲವಿ, ಪೇಪರ್‌ಬೋಟ್ಸ್‌, ಬಂತಿದೋ ಶೃಂಗಾರ ಮಾಸ(ಕನ್ನಡ) ಕಾಂಚನಸೀತಾ, ಕಡಪು(ಮಲಯಾಳಂ) ಚಿತ್ರಗಳಿಗೆ ನೀಡಿದ ಸಂಗೀತ ನಿರ್ದೇಶನ, ಕೆಲವಕ್ಕೆ ರಾಜ್ಯ ಪ್ರಶಸ್ತಿ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಟಿ.ಚೌಡಯ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇದಿನಹುಟ್ಟಿದಕಲವಿದರು: ಟಿ.ಎಸ್‌.ಸತ್ಯವತಿ – ೧೯೫೫ ಸುನೀತಾ ಸೂರ‍್ಯನಾರಾಯಣ – ೧೯೭೬

* * *

Details

Date:
October 17, 2023
Event Category: