Loading Events

« All Events

  • This event has passed.

ರಾಧಾ ಶ್ರೀಧರ್

September 9

೦೯.೦೯.೧೯೩೮ ಭರತನಾಟ್ಯ, ಹಾಡುಗಾರಿಕೆ, ವಾದ್ಯವಾದನ ಮುಂತಾದ ಎಲ್ಲ ಕಲೆಗಳಲ್ಲೂ ಪರಿಣತಿ ಪಡೆದಿರುವ, ರಾಧಾ ಶ್ರೀಧರ್‌ರವರು ಹುಟ್ಟಿದ್ದು ತುಮಕೂರು. ತಂದೆ ಅಪ್ಪಣ್ಣಯ್ಯ ಸೆಟ್ಲೂರ್‌, ತಾಯಿ ಗೋದಾಬಾಯಿ ಸೆಟ್ಲೂರ್‌. ನೃತ್ಯದಲ್ಲಿ ಆಸಕ್ತಿ ಹೊಂದಿ ಕೇಶವ ನೃತ್ಯಶಾಲೆಯ ಎಚ್‌.ಆರ್. ಕೇಶವಮೂರ್ತಿ, ಮಹಾಮಾಯಾ ಶಾಲೆಯ ಚಂದ್ರಭಾಗಾದೇವಿ ಮತ್ತು ಯು.ಎಸ್. ಕೃಷ್ಣರಾವ್, ಪಂದನಲ್ಲೂರು ಮುತ್ತಯ್ಯ ಪಿಳ್ಳೆ, ಡಾ. ಕೆ. ವೆಂಕಟಲಕ್ಷ್ಮಮ್ಮ ಇವರಲ್ಲಿ ನೃತ್ಯಾಭ್ಯಾಸ. ಅಹಮದಾಬಾದಿನ ಸಿ.ಎ. ಆಚಾರ್ಯರವರಿಂದ ಕಲಿತ ಕೂಚಿಪುಡಿ ನೃತ್ಯ, ಹಾಡುಗಾರಿಕೆಯನ್ನು ಇ.ಪಿ. ಅಲಮೇಲು, ಪ್ರಭಾಕೃಷ್ಣನ್‌, ಜಿ. ಚೆನ್ನಮ್ಮ, ಪಲ್ಲವಿ ಚಂದ್ರಸಿಂಗ್‌, ಭಾಗ್ಯ ಮುಂತಾದವರಿಂದ. ವಿದ್ವಾನ್ ಟಿ.ಎ.ಎಸ್. ಮಣಿಯವರಿಂದ ಮೃದಂಗ ಕಲಿಕೆ. ಹಲವಾರು ನೃತ್ಯನಾಟಕಗಳ ನಿರ್ದೇಶನ. ಕೆ.ಸಿ. ರಂಗಯ್ಯನವರ ರಾಮಾಯಣ, ತಿಪ್ಪಣ್ಣಾರ್ಯರ ಕಾಳಿಯ ಮರ್ಧನ, ಹನುಮದ್ವಿಲಾಸ, ಷಡಕ್ಷರ ಕವಿಯ ಕೋಳೂರು ಕೊಡಗೂಸು, ಗೀತಗೋವಿಂದ, ನೀಲಾಂಜನ ನೃತ್ಯ, ಗೀತ ಶಾಕುನ್ತಲ ಮುಂತಾದುವುಗಳು ಹಲವಾರು ಪ್ರದರ್ಶನ ಕಂಡ ನೃತ್ಯನಾಟಕಗಳು. ಟಿ.ವಿ.ಗಾಗಿ ನೆಕ್ಟರ್‌ ಇನ್‌ ದ ಸ್ಟೋನ್‌ ಸಾಕ್ಷ್ಯಚಿತ್ರ, ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌, ನೆಹರೂ ಸ್ಮಾರಕ ವಿದ್ಯಾಕೇಂದ್ರ, ಭಾರತ ವಿದ್ಯಾಮಂದಿರ, ಕಾರ್ಗಿಲ್‌ ಫಂಡ್‌, ಭೂಕಂಪ ನಿಧಿ ಮುಂತಾದವುಗಳಿಗೆ ಸಹಾಯಾರ್ಥ ಪ್ರದರ್ಶನ. ಬೆಂಗಳೂರು ಗಾಯನ ಸಮಾಜದಿಂದ ನೃತ್ಯವಿಶಾರದೆ, ಪಟ್ಟದಕಲ್ಲು ನೃತ್ಯೋತ್ಸವ ಪ್ರಶಸ್ತಿ, ಮಹಾಮಾಯ ಸ್ವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಹಲವಾರು ಸಂಘಸಂಸ್ಥೆಗಳಿಂದ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು: ಮುರಳೀಧರ ಎಚ್‌ – ೧೯೫೭ ಚಂದ್ರಹಾಸ ವೈ.ಜೆ – ೧೯೬೬ ಮಿತಾಮಿತ್ರ – ೧೯೭೩ ಆರ್‌. ವೆಂಕಟರಾಜು – ೧೯೭೯

* * *

Details

Date:
September 9
Event Category: