ರಾಷ್ಟ್ರಕವಿ ಗೋವಿಂದ ಪೈ

Home/Birthday/ರಾಷ್ಟ್ರಕವಿ ಗೋವಿಂದ ಪೈ
Loading Events
This event has passed.

೨೩.೩.೧೮೮೩ ೬.೯.೧೯೬೩ ‘ತಾಯಬಾರ ಮೊಗವತೋರ ಕನ್ನಡಿಗರ ಮಾತೆಯೆ…’ ಈ ಪದ್ಯವನ್ನು ಯಾರು ತಾನೆ ಕೇಳಿಲ್ಲ. ಈ ಪದ್ಯದ  ಅರ್ಥವಂತಿಕೆಯ ಸೆಳೆತಕ್ಕೊಳಗಾಗಿ ಚಲನಚಿತ್ರ ಒಂದರಲ್ಲೂ ಅಳವಡಿಸಿಕೊಂಡು ಕನ್ನಡಿಗರೆಲ್ಲ ಹಾಡಿ ಸಂತೋಷಿಸಿದರು. ಈ ಗೀತೆ ಬರೆದ ಕವಿಯೇ ಮಂಗಳೂರು ಗೋವಿಂದ ಪೈಗಳು. (ಎಂ. ಎಂದರೆ ಮಂಜೇಶ್ವರ ಅಲ್ಲ ಎಂದು ಅವರೇ ಸಮಜಾಯಿಷಿ ನೀಡಿದ್ದಾರೆ) ಮಂಗಳೂರು ಸಮೀಪದ ಮಂಜೇಶ್ವರದಲ್ಲಿ ಹುಟ್ಟಿದರು. ತಂದೆ ಮಂಗಳೂರು ತಿಮ್ಮಪೈಗಳು, ತಾಯಿ ದೇವಕಿಯಮ್ಮ. ಪ್ರಾಥಮಿಕದಿಂದ ಪದವಿಪೂರ್ವದವರೆವಿಗೂ ವಿದ್ಯಾಭ್ಯಾಸ ನಡೆದುದು ಮಂಗಳೂರಿನಲ್ಲೇ. ಬಿ.ಎ. ಪದವಿ ಪಡೆಯಲು ಮದರಾಸಿಗೆ ತೆರಳಿದರು. ಜಾಣ ವಿದ್ಯಾರ್ಥಿ ಎನ್ನಿಸಿಕೊಂಡರು. ಬಿ.ಎ. ಪರೀಕ್ಷೆ ನಡೆಯುತ್ತಿದ್ದ  ಸಮಯದಲ್ಲೇ ತಂದೆಯವರ ಅಕಾಲ ಮರಣ. ಊರಿಗೆ ಹಿಂದಿರುಗಿದರು. ಸಾಹಿತ್ಯದಲ್ಲಿ ವಿಶೇಷ ಒಲವು. ಪಂಜೆ ಮಂಗೇಶರಾಯರು ಇವರ ಗುರುಗಳು. ಇವರು ಬರೆದ ಮೊದಲ ಪದ್ಯ ಮಂಗಳೂರಿನ ‘ಸುವಾಸಿನಿ’ ಪತ್ರಿಕೆಯಲ್ಲಿ ಪ್ರಕಟ. ಸಾಹಿತ್ಯ ಸೃಷ್ಟಿ ಕಾವ್ಯದಿಂದ ಪ್ರಾರಂಭಿಸಿದರೂ ಸಂಶೋಧನೆ ಪೈಗಳ ಆಸಕ್ತ ಕ್ಷೇತ್ರ. ಅವರಿಗೆ ಜರ್ಮನ್, ಫ್ರೆಂಚ್, ಗ್ರೀಕ್, ಪರ್ಷಿಯನ್, ಇಟಾಲಿಯನ್, ಸಂಸ್ಕೃತ, ಪ್ರಾಕೃತ, ತಮಿಳು, ಕೊಂಕಣಿ, ತುಳು, ಮರಾಠಿ, ಹಿಂದಿ, ಬಂಗಾಲಿ ಮೊದಲಾದ ಭಾಷೆಗಳ ಮೇಲೆ ಪ್ರಭುತ್ವ. ಅಸಾಧಾರಣ ಜ್ಞಾಪಕಶಕ್ತಿಯಿಂದ ಈ ಭಾಷೆಗಳನ್ನುಪಯೋಗಿಸಿಕೊಂಡು ಮಾಡಿದ ಕನ್ನಡದ ಏಳ್ಗೆ. ಕವಿ, ಸಂಶೋಧಕ ಪ್ರಜ್ಞೆ ಮೇಳೈಸಿದ ಅಪೂರ್ವ ವ್ಯಕ್ತಿತ್ವ. ಭಕ್ತವಾಣಿ, ಗಿಳಿವಿಂಡು, ಗೋಲ್ಗೊಥ ಮುಂತಾದ ಕವನ ಸಂಗ್ರಹಗಳು, ಪಾರ್ಶ್ವನಾಥ ತೀರ್ಥಂಕರ, ಗೊಮ್ಮಟೇಶ್ವರ, ಭಗವಾನ್ ಬುದ್ಧ ಗ್ರಂಥಗಳು ನಾಟಕಗಳು. ಸಂಶೋಧನ ಸಂಪುಟ ಪ್ರಕಟಿತ. ಇವರ ಕನ್ನಡ ಕೊಡುಗೆಯನ್ನು ಪ್ರಶಂಸಿಸಿ ಮದರಾಸು ಸರಕಾರ ಕೊಡಮಾಡಿದ್ದು ರಾಷ್ಟ್ರಕವಿ ಬಿರುದು (೧೯೪೯). ಮುಂಬೈಯಲ್ಲಿ ನಡೆದ ೩೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ (೧೯೫೦) ಮುಂತಾದ ಗೌರವ ಪುರಸ್ಕಾರಗಳು. ಸೆಪ್ಟಂಬರ್ ೨೭, ೨೮, ೨೯ರಂದು ಮಂಗಳೂರಿನಲ್ಲಿ ಗಂಧದ ಹಾರ, ರೂ ೫೦೦೦೦/- ನಿ ಅರ್ಪಣೆ ಕಾರ‍್ಯಕ್ರಮಕ್ಕೆ ಮೊದಲೇ ಮರಣಿಸಿ ಕೊರಳ ಗಂಧದ ಹಾರ ನೆನಪಿನ ಮಾಲೆಯಾಗಿತ್ತು.   ಇದೇ ದಿನ ಹುಟ್ಟಿದ ಸಾಹಿತಿಗಳು : ದ.ಬಾ. ಕುಲಕರ್ಣಿ – ೧೯೧೬ ಆಚಾರ‍್ಯ. ಯು.ಕೆ.ವಿ. – ೧೯೩೫ ಸಿ.ಆರ್. ಗೋವಿಂದರಾಜು – ೧೯೬೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top