೧೫.೦೯.೧೯೦೦ ೨೩.೧೧.೧೯೭೪ ರೂಪ ಶಿಲ್ಪದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದ ಬಸವಯ್ಯನವರು ಹುಟ್ಟಿದ್ದು ಮೈಸೂರಿನ ಮಂಡಿ ಮೊಹಲ್ಲದ ಸೊಪ್ಪಿನಕೇರಿಯಲ್ಲಿ. ತಂದೆ ಬೋರಯ್ಯ, ತಾಯಿ ನಿಂಗಮ್ಮ. ಕಡುಬಡತನದ ಜೀವನ. ಮಿಡ್ಲಸ್ಕೂಲ್ಗೆ ವಿದ್ಯೆ ಮುಕ್ತಾಯ. ಸೋಮನಾಥಪುರ ನೋಡಿಬಂದ ನಂತರ ಕಲಾವಿದನಾಗಬೇಕೆಂಬ ಹಂಬಲ. ಸ್ವಯಂಭುವಾಗಿ ಕಲಿತು ರಚಿಸಿದ ಮಣ್ಣಿನ ಗೊಂಬೆಗಳು. ಕಲಾಭಿರುಚಿಯನ್ನು ಗುರುತಿಸಿದ ರಾಮಕೃಷ್ಣನ್ರವರಿಂದ ಜಯಚಾಮರಾಜೇಂದ್ರ ಕಲಾ ಶಾಲೆಗೆ ಸೇರ್ಪಡೆ. ರೂಪ ಶಿಲ್ಪದಲ್ಲಿ ಪಡೆದ ಪರಿಣತಿ. ಮದರಾಸ್ ಸರಕಾರದಿಂದ ಹೈಯರ್ ಮಾಡಲಿಂಗ್, ಇಂಟರ್ಮೀಡಿಯೆಟ್ ಡ್ರಾಯಿಂಗ್, ಫ್ರೀ ಹ್ಯಾಂಡ್ ಪರೀಕ್ಷೆಗಳಲ್ಲಿ ಯಶಸ್ವಿ ಸಾಧನೆ. ಜಯ ಚಾಮರಾಜೇಂದ್ರ ಕಲಾಶಾಲೆಯಲ್ಲಿ ಮಾಡೆಲಿಂಗ್ ವಿಭಾಗದ ಅಧ್ಯಾಪಕರಾಗಿ ನೇಮಕ. ಜೆ.ಜೆ. ಸ್ಕೂಲಿನಲ್ಲಿ ಕಲಿಯುವ ಆಸೆಯಿಂದ ಸರಕಾರಿ ವಿದ್ಯಾರ್ಥಿ ವೇತನ ಪಡೆದು ಮುಂಬಯಿಗೆ ಪಯಣ. ಕಲಾ ಪ್ರತಿಭಾ ಪ್ರದರ್ಶನಕ್ಕೆ ಸಿಕ್ಕ ವಿಪುಲ ಅವಕಾಶ. ಬೆಂಗಳೂರು ನಗರ ಸಭೆಗಾಗಿ ಕೆಂಪೇಗೌಡ, ವಿಶ್ವೇಶ್ವರಯ್ಯನವರ ಪ್ರತಿಮೆಗಳ ರಚನೆಯಿಂದ ದೊರೆತ ಗೌರವ. ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ಲಾಸ್ಟರ್ ಕೃತಿ, ಯುವರಾಜರ ಮತ್ತು ಮಹಾರಾಣಿಯವರ ರೂಪಶಿಲ್ಪ, ದಿವಾನ್ಮಿರ್ಜಾ, ತಂಬೂಚೆಟ್ಟಿ, ವೀಣೆಶೇಷಣ್ಣ ಮೊದಲಾದವರ ಶಿಲ್ಪ ರಚನೆ. ಮದನ ಮೋಹನ ಮಾಳಿವೀಯ, ಲಜಪತರಾಯ್, ಲಾರ್ಡ್ವಿಲ್ಲಿಂಗ್ಡನ್, ಲೇಡಿವಿಲ್ಲಿಂಗ್ಡನ್ ಎದೆಮಟ್ಟದ ಚಂದ್ರಕಾಂತ ಶಿಲೆಯ ಶಿಲ್ಪರಚನೆಯಿಂದ ಗಳಿಸಿದ ಖ್ಯಾತಿ. ನಾಲ್ವಡಿ ಕೃಷ್ಣರಾಜ ಒಡೆಯರಿಂದ ಆಸ್ಥಾನ ಶಿಲ್ಪಿಯಾಗಿ ನೇಮಕ, ಮಹಾರಾಜರ ನಿಧನಾ ನಂತರ ಅಧಿಕಾರಿಗಳ ಕುತಂತ್ರದಿಂದ ಬೇಸತ್ತು, ಅನಾರೋಗ್ಯಕ್ಕೊಳಗಾಗಿ ಕರ್ನಾಟಕ ಕಳೆದುಕೊಂಡ ಅಪ್ರತಿಮ ರೂಪಶಿಲ್ಪ. ಇದೇ ದಿನ ಹುಟ್ಟಿದ ಕಲಾವಿದರು ವಾಸುದೇವಮೂರ್ತಿ – ೧೯೩೭ ಪ್ರಭಾಮಲ್ಲೇಶ್ – ೧೯೪೪ ಸಿ. ವರದರಾಜ – ೧೯೫೦
* * *