
- This event has passed.
ರೇವತಿ ನರಸಿಂಹನ್
November 22
೨೨.೧೧.೧೯೪೬ ನಾಟ್ಯಕ್ಷೇತ್ರದಲ್ಲಿ ವಿಶಿಷ್ಟ ಪರಂಪರೆಯನ್ನು ಕಾಯ್ದುಕೊಂಡು ಬಂದಿರುವ ರೇವತಿ ನರಸಿಂಹನ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪುರುಷೋತ್ತಮನ್, ತಾಯಿ ರಂಗನಾಯಕಿ, ಚಿಕ್ಕಂದಿನಿಂದಲೇ ನಾಟ್ಯರಂಗದತ್ತ ಒಲಿದ ಮನಸ್ಸು, ೯ನೇ ವಯಸ್ಸಿನಲ್ಲೇ ರಂಗಪ್ರವೇಶ. ಚೆನ್ನೈನ ಶ್ರೀಮತಿ ಕೌಸಲ್ಯರವರಿಂದ ಪ್ರಾರಂಭಿಕ ಶಿಕ್ಷಣ. ಪ್ರಖ್ಯಾತ ಭರತನಾಟ್ಯ ಪ್ರವೀಣ ವಳುವರ್ ರಾಮಯ್ಯ ಪಿಳ್ಳೆಯವರ ಪರಂಪರೆಯ ವಿಶಿಷ್ಟ ಶೈಲಿಯ ಅಳವಡಿಕೆ. ರಾಜ್ಯದ ರ‍್ಯಾಂಕ್ ವಿಜೇತೆ. ದೂರದರ್ಶನ ಕಲಾವಿದೆ. ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕಡೆ ನೃತ್ಯ ಪ್ರದರ್ಶನ. ಮೂರು ದಶಕಗಳಿಂದಲೂ ನಾಟ್ಯನಿಕೇತನದ ಮೂಲಕ ಶಿಷ್ಯರಿಗೆ ನೀಡುತ್ತಿರುವ ನೃತ್ಯ ಶಿಕ್ಷಣ, ಬಹುತೇಕ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು. ನುರಿತ ಕಲಾವಿದರುಗಳ ‘ಶಿವಗಾಮಿ’ ತಂಡದಿಂದ ನಾಟ್ಯರಂಗದ ಹಲವಾರು ಸಾಧ್ಯತೆಗಳ ಶೋಧ-ಪ್ರದರ್ಶನ. ದೇಶವಿದೇಶದ ಕಾರ್ಯಕ್ರಮಗಳಿಂದ ಗಳಿಸಿದ ಖ್ಯಾತಿ. ಅಂಧರ ಕಲ್ಯಾಣ ನಿಧಿ, ಅಂಗವಿಕಲರ ಕಲ್ಯಾಣಕ್ಕಾಗಿ ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳು. ಸಾಂಪ್ರದಾಯಿಕ ನೃತ್ಯ ನಾಟಕಗಳಿಗೆ ನಿರ್ದೇಶನ. ಸೀತಾಸ್ವಯಂವರ, ಕೃಷ್ಣ ವೈಭವಂ, ಕನ್ನಡ ಹಿರಿಮೆ, ದಶಾವತಾರ, ಕ್ರಿಸ್ತಕಿರಣ, ವಂದೇಮಾತರಂ, ವಿಜಯ ನಗರದ ವೈಭವ, ತುಂಟಕೃಷ್ಣ, ಡಿವಿಜಿಯವರ ಅಂತಃಪುರ ಗೀತೆ, ಭಾವಯಾಮಿ ರಘುರಾಮಂ, ವಿಠಲಚರಿತೆ, ನಾಚಿಯಾರ್, ಕನ್ನಗಿಯ ಕಾಲಂದುಗೆ ಮುಂತಾದುವುಗಳ ನೃತ್ಯಪ್ರದರ್ಶನದಿಂದ ಖ್ಯಾತಿ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ‘ಕರ್ನಾಟಕ ಕಲಾಶ್ರೀ’, ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು ಅಗರಿ ಶ್ರೀನಿವಾಸ ಭಾಗವತರು – ೧೯೦೬