೦೩.೦೧.೧೯೫೨ ಸಂಗೀತ ಕಲಾವಿದರ ಮನೆತನದಲ್ಲಿ ಬಳ್ಳಾರಿಯಲ್ಲಿ ಹುಟ್ಟಿದ ವನಮಾಲ ಕುಣಕರ್ಣಿಯವರ ತಾಯಿ ಪ್ರಸಿದ್ಧ ಸಂಗೀತ ಕಲಾವಿದೆ ಇಂದಿರಾಬಾಯಿ. ಹಲವಾರು ಬಾರಿ ಆಕಾಶವಾಣಿ ನಿಲಯದಿಂದ ಇವರು ಹಾಡಿದ ಭಾವಗೀತೆಗಳ ಕಾರ್ಯಕ್ರಮಗಳ ನೇರ ಪ್ರಸಾರ. ಹುಟ್ಟಿನಿಂದಲೇ ಕಿವಿಯ ಮೇಲೆ ಬೀಳುತ್ತಿದ್ದ ಗಾಯನಕ್ಕೆ ಮನ ಸೋತರು. ಕಲಿತದ್ದು ಭರತನಾಟ್ಯ. ಭರತನಾಟ್ಯದಲ್ಲಿ ಸಾಧಿಸಿದ್ದು ವಿದ್ವತ್. ನಾಟ್ಯ ಕೋವಿದ ವೆಂಕಟರಮಣಾಚಾರ್ಯ, ನಾಟ್ಯಚಾರ್ಯ ಶ್ರೀ ಕೃಷ್ಣಕುಮಾರ್ ಮುಂತಾದವರಲ್ಲಿ ಭರತನಾಟ್ಯದಲ್ಲಿ ಪಡೆದ ಶಿಕ್ಷಣ. ದಾವಣಗೆರೆಯ ನಾಟ್ಯಚಾರ್ಯ ಶ್ರೀನಿವಾಸ ಕುಲಕರ್ಣಿಯವರಲ್ಲಿ ೮ ವರ್ಷಗಳ ಕಾಲ ಪಡೆದ ವಿಶೇಷ ಶಿಕ್ಷಣ. ಅನೇಕ ತಂಡಗಳೊಂದಿಗೆ ನಾಡಿನಾದ್ಯಂತ ನೀಡಿದ ನೃತ್ಯ ಕಾರ್ಯಕ್ರಮಗಳು. ಕರ್ನಾಟಕ, ಆಂಧ್ರದ ಆದವಾನಿ ಮುಂತಾದೆಡೆಯಲ್ಲಿ ಯಶಸ್ವಿ ನೃತ್ಯ ಪ್ರದರ್ಶನ. ೧೯೭೭ರಲ್ಲಿ ನಾಟ್ಯ ಭಾರತಿ ಶಾಲೆಯ ಸ್ಥಾಪನೆ. ನಾಟ್ಯಚಾರ್ಯ ಕಲಾ ಪರಂಪರೆಯನ್ನು ಮುಂದುವರೆಸುವ ಛಲ. ಸುಮಾರು ೮೦೦ಕ್ಕು ಹೆಚ್ಚು ನೃತ್ಯ ಕಲಾವಿದರನ್ನು ನಾಟ್ಯಭಾರತಿ ಶಾಲೆ ರೂಪಿಸಿದ ಕೀರ್ತಿ. ಈ ಶಾಲೆಯಲ್ಲಿ ಭರತನಾಟ್ಯ, ಕಥಕ್, ಜಾನಪದ ಶೈಲಿಗಳ ನೃತ್ಯ ಪ್ರಕಾರಗಳನ್ನು ಕಲಿಯಲು ಅವಕಾಶ. ರಾಧಾಕೃಷ್ಣ, ದಶಾವತಾರ, ಮಯೂರ, ಹಾವಾಡಿಗ ನೃತ್ಯಗಳು ಈ ಶಾಲೆಯ ವಿಶಿಷ್ಟ ನೃತ್ಯ ಪ್ರದರ್ಶನಗಳು. ಕಲಾಶಾಲೆಯ ಮಹತ್ತರ ಸಾಧನೆಯನ್ನು ಇಂಡಿಯನ್ ಎಕ್ಸ್ಪ್ರೆಸ್, ಸಂಜೆವಾಣಿ, ಈ ನಾಡು (ತೆಲುಗು) ದಿ ಹಿಂದೂ, ಪ್ರಜಾವಾಣಿ, ಈ ನಮ್ಮ ಕನ್ನಡನಾಡು, ಸಂಯುಕ್ತ ಕರ್ನಾಟಕ ಪತ್ರಿಕೆಗಳಿಂದ ದೊರೆತ ಪ್ರಶಂಸೆ. ನಾಟ್ಯಭಾರತಿಯ ಶಿಷ್ಯರು ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮಗಳಿಗೆ ಸಂದ ಹಲವಾರು ಪ್ರಶಸ್ತಿಗಳು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಪ್ರತಿಷ್ಠಿತ ‘ಕರ್ನಾಟಕ ಕಲಾಶ್ರೀ’ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ‘ಮಯೂರ’, ನಾಟ್ಯ ಸರಸ್ವತಿ ಮುಂತಾದ ಬಿರುದುಗಳು. ಇದೇ ದಿನ ಹುಟ್ಟಿದ ಕಲಾವಿದರು : ರಾಜಕುಮಾರ್ ಕೆ. – ೧೯೬೨
* * *