ವಾಸಂತಿ ಪಡುಕೋಣೆ

Home/Birthday/ವಾಸಂತಿ ಪಡುಕೋಣೆ
Loading Events

೨೫-೫-೧೯೦೮ ೧-೪-೧೯೯೫ ವಾಸಂತಿದೇವಿಯವರು ಹುಟ್ಟಿದ್ದು ದೂರದ ಬರ್ಮಾದೇಶದ ಮಿಥಿಲದಲ್ಲಿ. ತಂದೆ ಅಣ್ಣಾಜಿರಾವ, ತಾಯಿ ರಾಧಾಬಾಯಿ. ಮನೆಮಾತು ಕೊಂಕಣಿ. ಸಾಂಪ್ರದಾಯಿಕವಾಗಿ ಶಾಲೆಗೆ ಹೋಗಿ ಕಲಿತದ್ದು ಪ್ರಾಥಮಿಕ ಶಾಲೆಯವರೆಗೆ ಮಾತ್ರ. ಓದಬೇಕೆಂಬ ಹಂಬಲವಿದ್ದರೂ ಹೆಣ್ಣುಮಕ್ಕಳ ಓದಿಗೆ ಸೌಕರ‍್ಯ ಕಡಿಮೆಯಿದ್ದ ಕಾಲ. ಬಾಲ್ಯ ವಿವಾಹ ಪದ್ಧತಿಗೆ ಹೆಚ್ಚು ಪ್ರಾಶಸ್ತ್ಯವಿದ್ದ ಕಾಲದಲ್ಲಿ  ಪಡುಕೋಣೆ ಶಂಕರರಾಯರೊಡನೆ ಮದುವೆ. ಪಣಂಬೂರಿನಲ್ಲಿ ಜೀವನ ಪ್ರಾರಂಭಿಸಿದ ವಾಸಂತಿ ದೇವಿಯವರದು ಅಹನ್ಯಹನಿ ಕಾಲಕ್ಷೇಪ. ಆದರೂ ಸಮಾಜ ಹಾಗೂ ಸುತ್ತಮುತ್ತಲ ಘಟನೆಗಳು ವಾಸಂತಿದೇವಿಯವರನ್ನು ಕಷ್ಟಗಳನ್ನೆದುರಿಸಲು ಛಲಗಾರ್ತಿಯನ್ನಾಗಿ ಮಾಡಿತು. ಸದಾ ಸಂಬಂಗಳ ಆಶ್ರಯದ ಬದುಕು. ಆಶ್ರಯದಾತರಿಂದ ಕೇಳುತ್ತಿದ್ದ ಬಿರುನುಡಿಗಳು. ಬದುಕುವುದರ ಜೊತೆಗೆ ಮಕ್ಕಳಿಗೆ ವಿದ್ಯೆ ಕಲಿಸಿ ಮುಂದೆ ತರಬೇಕೆಂಬ ಛಲ. ಮಗ ಗುರುದತ್ತನೊಡನೆ ಮೆಟ್ರಿಕ್ ಪರೀಕ್ಷೆ ಪಾಸು ಮಾಡಿದ ಛಲಗಾರ್ತಿ. ಹೊಲಿಗೆ ಕಸೂತಿಯಲ್ಲಿ ಪರಿಣತಿ. ಮಕ್ಕಳುಗಳಾದ ಗುರುದತ್ತ, ಆತ್ಮಾರಾಮ, ವಿಜಯ ಹಾಗೂ ಲಲಿತಾಲಾಜ್ಮಿ, ಕಲ್ಪನಾ ಲಾಜ್ಮಿ ಮೊಮ್ಮಗಳು. ಮಕ್ಕಳಿಗೆ ಬರೇ ತಾಯಿಯಾಗದೆ ಗೆಳತಿ, ಗುರು, ಮಾರ್ಗದರ್ಶಿ ಎಲ್ಲವೂ. ಕನ್ನಡದಲ್ಲಿ ಬರವಣಿಗೆ ಪ್ರಾರಂಭಿಸಿದ ವಾಸಂತಿ ದೇವಿಯವರು ಮೊದಲು ಬರೆದದ್ದು ಆರ್.ಕಲ್ಯಾಣಮ್ಮನವರ ‘ಸರಸ್ವತಿ’ ಪತ್ರಿಕೆಗೆ. ಕೆಲಕಾಲ ಕಡೆಂಗೋಡ್ಲು ಶಂಕರಭಟ್ಟರ ಪತ್ರಿಕೆ ರಾಷ್ಟ್ರಬಂಧುವಿನಲ್ಲಿ ಕರಡು ತಿದ್ದುವ ಕೆಲಸ. ಬೆಂಗಳೂರಿನಲ್ಲಿದ್ದಾಗ ಹಿಂದಿ ಕಲಿತು, ಹಿಂದಿ ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ್ದು ಮಹಾತ್ಮಾಗಾಂಯವರಿಂದ ಪ್ರಶಸ್ತಿ ಸ್ವೀಕರಿಸಿದ ಅಸಾಮಾನ್ಯ ಮಹಿಳೆ. ಗಾಂಜಿಯವರಿಂದ ಪ್ರಭಾವಿತರಾಗಿ ಚಳವಳಿಯಲ್ಲೂ ಭಾಗಿ. ಮರಾಠಿ, ಹಿಂದಿ, ಬಂಗಾಲಿ, ತೆಲುಗು, ತಮಿಳು, ಇಂಗ್ಲಿಷ್, ಕನ್ನಡ-ಹೀಗೆ ಏಳು ಭಾಷೆಗಳಲ್ಲಿ ಓದುವ, ಬರೆಯುವ ಪಾಂಡಿತ್ಯ. ವಾಸಂತಿ ದೇವಿಯವರು ಬದುಕಿನ ಹಲವಾರು ವರ್ಷವನ್ನು ಮುಂಬಯಿಯಲ್ಲೇ ಕಳೆದರು. ರಾಷ್ಟ್ರೀಯ ಶಿಕ್ಷಣ ಶಾಲೆಯಲ್ಲಿ ಕೆಲಕಾಲ ಶಿಕ್ಷಕಿಯ ಕೆಲಸ. ಬಡಮಕ್ಕಳಿಗೆ ಪ್ರೀತಿಯಿಂದ ಕಲಿಸುವ ಕಾಯಕ. ಕನ್ನಡದಲ್ಲಿ ಕೃತಿ ರಚಿಸಿದ್ದು ಕಡಿಮೆ, ಆದರೆ ಮೌಲ್ಯಯುತ ಕೃತಿ ಮತ್ತು ಚಿತ್ರರಂಗಕ್ಕೆ ಗುರುದತ್ತನ ಕೊಡುಗೆ. ಮಿಥುನ ಲಗ್ನ, ಕರ‍್ಮಾಚಾರಿ, ಜೀವನ ಹೋರಾಟ ಪ್ರಮುಖ ಕೃತಿಗಳು. ಜೊತೆಗೆ ‘ನನ್ನ ಮಗ ಗುರುದತ್ತ’, ಗುರುದತ್ತನ ಬದುಕಿನ ಏರಿಳಿತಗಳನ್ನು ತಿಳಿಸುವುದಲ್ಲದೆ ಸಾರಸ್ವತ ಸಮಾಜದ ವಿಶಿಷ್ಟ ಚಿತ್ರಣದ ಕೃತಿ. ಚಿತ್ರರಂಗಕ್ಕೆ ಗುರುದತ್ತನನ್ನು ನೀಡಿದರೆ ಗುರುದತ್ತ ಪ್ಯಾಸಾ, ಕಾಗಜ್ ಕೆ ಪೂಲ್, ಚೌದವಿನ್ ಕಾ ಚಾಂದ್, ಸಾಹಿ ಬೀಬಿ ಔರ್ ಗುಲಾಮ್ ಮುಂತಾದ ಉತ್ತಮ ಚಿತ್ರ ನೀಡಿ ತಾಯಿ ಋಣ ತೀರಿಸಿದ ವ್ಯಕ್ತಿ. ಚಿತ್ರರಂಗ, ರಂಗಭೂಮಿ, ಸಾಹಿತ್ಯ, ಚಿತ್ರಕಲೆ ಬಗ್ಗೆ ವಿಶೇಷ ಆಸಕ್ತಿಯನ್ನಿಟ್ಟು ಕೊಂಡಿದ್ದ ವಾಸಂತಿ ದೇವಿಯರನ್ನು ೧೯೯೫ರ ಮೂರ್ಖರ ದಿನಾಚರಣೆಯ ದಿನ ವಿ ಕೊಂಡೊಯ್ದಿತು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ. ನಂಜಮ್ಮಣ್ಣಿ – ೧೯೨೭ ಲಲಿತಾ ಹೇಮಶೆಟ್ಟಿ – ೧೯೪೨ ಇಬ್ರಾಹಿಂ ಸಯೀದ್ – ೧೯೪೫ ಎಂ.ಎಸ್. ಪ್ರಭಾಕರ್ – ೧೯೪೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top