ವಾಸುದೇವ ಗಿರಿಮಾಜಿ

Home/Birthday/ವಾಸುದೇವ ಗಿರಿಮಾಜಿ
Loading Events
This event has passed.

೧೯-೩-೧೯೧೨ ೨೪-೮-೧೯೯೩ ವೃತ್ತಿ ರಂಗಭೂಮಿಯಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಗೌರಿನರಸಿಂಹಯ್ಯ, ಬಿ. ರಾಚಪ್ಪ, ಸಮುಖದ ಲಕ್ಷ್ಮೀಪತಿ ಶಾಸ್ತ್ರಿ, ಸೋಮಾಜಿರಾವ್ ಜೊತೆಗೆ ವಾಸುದೇವ ಗಿರಿಮಾಜಿಯೂ ಪ್ರಸಿದ್ಧರು. ತಂದೆ ಗೋವಿಂದರಾವ್ ಗಿರಿಮಾಜಿ, ತಾಯಿ ತುಂಗಮ್ಮ. ಸ್ವಯಂ ಕಲಾವಿದರು, ಕಲಾಪ್ರೇಮಿಗಳಾದ ತಂದೆಯೊಡನೆ ರಂಗ ತಾಲೀಮಿನ ಸ್ಥಳಕ್ಕೆ ಹೋಗುತ್ತಿದ್ದ ವಾಸುದೇವರಿಗೂ ರಂಗಭೂಮಿಯ ನಂಟು. ಲಿಟರರಿ ಅಂಡ್ ಡ್ರಮ್ಯಾಟಿಕ್ಸ್ ಅಸೋಸಿಯೇಷನ್ನಿನ ವಿದ್ಯಾರಣ್ಯ, ಲವ-ಕುಶ, ರಾಮದಾಸ ನಾಟಕಗಳಲ್ಲಿ ವಹಿಸಿದ ಬಾಲಕಲಾವಿದನ ಪಾತ್ರ. ಶಾಕುಂತಲ, ರಾಜವರ್ಮ-ಲೀಲಾವತಿ ನಾಟಕಗಳಲ್ಲಿ ಅಭಿನಯಿಸುವಾಸೆ. ತಂದೆಗೆ ಶಿವಮೊಗ್ಗಕ್ಕೆ ವರ್ಗ. ನಾಟಕದ ಹುಚ್ಚಿನಿಂದ ಮನೆಯಿಂದ ಪರಾರಿ. ಸಕಲೇಶಪುರದಲ್ಲಿ ನಾಟಕವಾಡುತ್ತಿದ್ದ ಪೀರ್ ಮಹಮದ್ ಕಂಪನಿಗೆ ಸೇರ್ಪಡೆ. ಪ್ರಮುಖ ಪಾತ್ರ ದೊರೆಯದೆ ನಿರಾಸೆ. ಕಂಪನಿಯಲ್ಲಿ ನಾಲ್ವಾರು ನಟರು ಕಂಪನಿ ಬಿಟ್ಟಿದ್ದರಿಂದ ರಾಮಾಯಣದಲ್ಲಿ ಸೀತೆ, ಸಂಸಾರ ನೌಕಾದಲ್ಲಿ ಸರಳ, ಗೌತಮಬುದ್ಧದಲ್ಲಿ ಯಶೋಧರ ಷಹಜಾನ್‌ನಲ್ಲಿ ನಾದಿರ್ ಮುಂತಾದ ಪಾತ್ರಗಳಿಂದ ದೊರೆತ ಮೆಚ್ಚುಗೆ. ಸಾಗರದಲ್ಲಿ ಗುಬ್ಬಿ ಕಂಪನಿ ಮೊಕ್ಕಾಂಮಾಡಿದಾಗ ಅಲ್ಲಿ ಸೇರ್ಪಡೆ. ಸದಾರಮೆ ನಾಟಕವನ್ನು ಚಲನಚಿತ್ರವಾಗಿಸಲು ಬೊಂಬಾಯಿಯಲ್ಲಿ ಚಿತ್ರೀಕರಣ. ಕುರುಕ್ಷೇತ್ರದಲ್ಲಿ ಗಾಂಧಾರಿ, ಶ್ರೀಕೃಷ್ಣನ ಪಾತ್ರ, ಗುಲೇಬಕಾವಲಿ, ಪ್ರಭಾಮಣಿ ವಿಜಯದಲ್ಲಿ ದೊರೆತ ಪಾತ್ರ. ಆಂಧ್ರದಲ್ಲೂ ಜಯಭೇರಿ. ರಾಜಮಂಡ್ರಿ, ಕಾಕಿನಾಡ, ಹೈದರಾಬಾದ್‌ಗಳಲ್ಲೂ ನಾಟಕ ಪ್ರದರ್ಶನ. ಚಲನಚಿತ್ರಾಸಕ್ತರಾಗಿ ನಡೆಸಿದ ಪತ್ರವ್ಯವಹಾರ. ರಾಮಾನುಜ ಹಿಂದಿ ಚಿತ್ರದಲ್ಲಿ ಅಭಿನಯಿಸಲು ಬಂದ ಕರೆ. ದೊರೆಯದ ಅವಕಾಶ. ದೊರೆತದ್ದು ಬಂಗಾಳಿ ಚಿತ್ರದ ಸಹಾಯಕ ನಿರ್ದೇಶಕರ ಹುದ್ದೆ. ಪಿ.ಸಿ. ಬರುವಾ ನಿಧನಾನಂತರ ಇರಾನ್-ಕಿ-ಏಕ್‌ರಾತ್ ಪೂರ್ಣ ನಿರ್ದೇಶನದ ಹೊಣೆ. ಹಲವಾರು ಚಿತ್ರಗಳ ನಾಯಕ, ಖಳ ನಾಯಕ, ನಾಗರಹೊಳೆ ಚಿತ್ರಕ್ಕೆ ಎಚ್.ವಿ. ಸುಬ್ಬರಾಯರೊಡನೆ ಕೆಲಸ. ಕರ್ನಾಟಕ ವಾಣಿಜ್ಯ ಮಂಡಲಿಯಿಂದ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು : ಎಂ.ಆರ್. ಗೌತಮ್ – ೧೯೨೪ ಸತ್ಯನಾರಾಯಣ ಎಂ.ಕೆ. – ೧೯೩೭ ರಾಜಶೇಖರ ಜೆ.ಎಂ. – ೧೯೬೫ ಪ್ರಭುಲಿಂಗಯ್ಯ ಬಿ.ಟಿ. – ೧೯೭೩

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top