ವಿದ್ವಾನ್ ಬಿ.ಎನ್. ಭೀಮರಾವ್

Home/Birthday/ವಿದ್ವಾನ್ ಬಿ.ಎನ್. ಭೀಮರಾವ್
Loading Events
This event has passed.

೨೭.೦೧.೧೯೨೭ ದೂರದರ್ಶನ ಹಳ್ಳಿ ಮನೆಮನೆಯನ್ನೂ ಪ್ರವೇಶಿಸುತ್ತಿರುವಾಗ ಜನಪದ ಕಲೆಗಳು ಮೂಲೆ ಗುಂಪಾಗುತ್ತಿರುವುದು ಸಹಜ. ಒಂದು ಕಾಲದಲ್ಲಿ ಹರಿಕಥೆಯೇ ಪ್ರತಿಯೊಂದು ಹಳ್ಳಿ, ನಗರದ ಬಡಾವಣೆಯ ಮನರಂಜನೆಯ ಕಾರ್ಯಕ್ರಮಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡ ಕಾರ್ಯಕ್ರಮ. ಹೀಗೆ ಹರಿಕಥೆಯನ್ನೇ ನಂಬಿಕೊಂಡು ಜೀವನ ಕಾಲಕ್ಷೇಪ ಮಾಡುತ್ತಿರುವವರಲ್ಲಿ ಅತಿ ಪ್ರಮುಖರಾದವರೆಂದರೆ ವಿದ್ವಾನ್ ಬಿ.ಎನ್. ಭೀಮರಾವ್. ಹುಟ್ಟಿದ್ದು ಕೊರಟಗೆರೆ ತಾಲ್ಲೂಕಿನ ಸೋಂಪುರ. ತಂದೆ ನರಸಪ್ಪ, ತಾಯಿ ಲಕ್ಷ್ಮೀದೇವಿ. ಪ್ರಾರಂಭಿಕ ಶಿಕ್ಷಣ ಗೌರಿಬಿದನೂರು. ಎಸ್.ಎಸ್.ಎಲ್.ಸಿ.ಯಲ್ಲಿ ಮೊದಲದರ್ಜೆ. ಟಿ.ಸಿ.ಎಚ್. ತರಬೇತಿ ಪಡೆದ ನಂತರ ಮಧುಗಿರಿಯ ಹೆಣ್ಣುಮಕ್ಕಳ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯ ವೃತ್ತಿ ಪ್ರಾರಂಭ. ತುಮಕೂರು, ಕೋಲಾರ ಜಿಲ್ಲೆಯಲ್ಲಿ ಉಪಾಧ್ಯಾಯರಾಗಿ ಸಲ್ಲಿಸಿದ ಸೇವೆ. ಜೊತೆಗೆ ರೂಢಿಸಿಕೊಂಡದ್ದು ಹರಿಕಥಾ ಕೀರ್ತನೆಯಿಂದ ನಡೆಸಿದ ಕಾಲಕ್ಷೇಪ. ಭೀಮೇಶದಾಸರೆಂದೇ ಪಡೆದ ಖ್ಯಾತಿ. ಕೇರಳದ ಕಾಸರಗೋಡು ಜಿಲ್ಲೆಯ ಆನಂದಾಶ್ರಮದ ಸಚ್ಛಿದಾನಂದ ಸ್ವಾಮೀಜಿ, ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ, ಸಂತ ಭದ್ರಗಿರಿ ಅಚ್ಯುತದಾಸರು, ವಿಶ್ವಶಾಂತಿ ಆಶ್ರಮದ ಶ್ರೀ ಕೇಶವದಾಸರು, ಶ್ರೀ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಳದವರು, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದವರು, ಕದ್ರಿ ಮಂಜುನಾಥ ದೇವಾಲಯದವರು, ಶೃಂಗೇರಿ ಮಠದ ಆಡಳಿತಾಧಿಕಾರಿಗಳು, ಉಡುಪಿಯ ವಿಶ್ವೋತ್ತಮ ತೀರ್ಥ ಶ್ರೀಪಾದರು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು, ಮಂಗಳೂರಿನ ನಲ್ಲಿಕಾಯಿ ರಾಘವೇಂದ್ರ ಮಠದವರು, ಕಟೀಲು ದುರ್ಗಾ ಪರಮೇಶ್ವರಿ ದೇವಳದವರು, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ, ಆಂಧ್ರ ಪ್ರದೇಶದ ಅಗಳಿ ಮುಂತಾದ ಕಡೆಗಳಲ್ಲಿ ನಡೆಸಿದ ಹರಿಕಥಾ ಕಾರ್ಯಕ್ರಮಗಳು. ಸಂದ ಪ್ರಶಸ್ತಿ ಗೌರವ, ಬಿರುದುಗಳು ಹಲವಾರು.  ಕೊಡಗು, ಉಡುಪಿ, ಉತ್ತರ ಕನ್ನಡದ ಕಥಾಸಕ್ತರಿಂದ ಕರೆ. ದತ್ತಾತ್ರೇಯ ಅವತಾರ, ರಾಘವೇಂದ್ರ ವಿಜಯ, ಚಂದ್ರಹಾಸ, ಮಯೂರ ಧ್ವಜ, ಶಮಂತಕಮಣಿ, ಸುಧನ್ವ, ಕೃಷ್ಣರಾಯಭಾರ, ಸತ್ಯನಾರಾಯಣ ಮಹಿಮೆ, ಕನ್ನಿಕಾ ಪರಮೇಶ್ವರಿ ಅವತಾರ, ಗಿರಿಜಾ ಕಲ್ಯಾಣ, ಮಹಿಷಾಸುರ ಮರ್ಧಿನಿ, ಗಣೇಶ ಮಹಿಮೆ ಸೇರಿದಂತೆ ಹರಿಕಥಾ ಕಾರ್ಯಕ್ರಮವನ್ನು ಇಂದಿನ ಜನತೆ ಮೆಚ್ಚುವಂತೆ ನಿರೂಪಿಸುವಲ್ಲಿ ತೋರಿದ ಜಾಣ್ಮೆ, ಮಕ್ಕಳು ಹಾರ್ಮೋನಿಯಂ, ತಬಲ ಸಾಥಿಯಾಗಿ, ಸ್ವತಂತ್ರವಾಗಿ ನಡೆಸುತ್ತಿರುವ ಹರಿಕಥಾ ಕಾರ್ಯಕ್ರಮಗಳು.   ಇದೇ ದಿನ ಹುಟ್ಟಿದ ಕಲಾವಿದರು : ರಾಮಾ ಧ್ಯಾನಿ – ೧೯೫೯

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top