Loading Events

« All Events

  • This event has passed.

ವಿದ್ವಾನ್‌ ವಿ. ದೇಶಿಕಾಚಾರ್

August 29, 2023

೨೯.೦೮.೧೯೨೪ ಪ್ರಖ್ಯಾತ ವೇಣುವಾದಕರಾದ ದೇಶಿಕಾಚಾರ್ ರವರು ಹುಟ್ಟಿದ್ದು ಹಾಸನ ಜಿಲ್ಲೆಯ ದೊಡ್ಡಗದ್ದುವಳ್ಳಿ. ತಂದೆ ಆಸ್ಥಾನ ವಿದ್ವಾಂಸರಾಗಿದ್ದ ಎಂ. ವೆಂಕಟೇಶ ಅಯ್ಯಂಗಾರ್ಯರು. ವೀಣೆ ಹಾಗೂ ಕೊಳಲು ವಾದಕರು. ತಾಯಿ ಸಂಗೀತ ಪ್ರೇಮಿ ಶ್ರೀರಂಗಮ್ಮ. ಅಣ್ಣ ವೀಣೆ ವಿದ್ವಾಂಸರಾದ ದೊರೆಸ್ವಾಮಿ ಅಯ್ಯಂಗಾರ್ಯರು. ಸಂಗೀತಗಾರರ ಮನೆತನದಲ್ಲಿ ಬೆಳೆದದ್ದರಿಂದ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ. ತಂದೆಯವರಿಂದಲೇ ಸಂಗೀತದ ಮೊದಲ ಪಾಠ. ಆಸ್ಥಾನ ವಿದ್ವಾಂಸರಾಗಿದ್ದ ವೀಣೆ ವೆಂಕಟಗಿರಿಯಪ್ಪನವರಲ್ಲಿ ಮುಂದುವರೆದ ವೀಣಾ ಶಿಕ್ಷಣ. ೧೯೪೮ರಲ್ಲಿ ಆಸ್ಥಾನ ವಿದ್ವಾಂಸರಾಗಿ ನೇಮಕ. ೧೬ ವರ್ಷಗಳ ಸತತ ಸೇವೆ. ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಪ್ರೊಫೆಸರಾಗಿ ನೇಮಕ. ಪೂರ್ಣಾವಧಿ ಸೇವೆಯ ನಂತರ ನಿವೃತ್ತಿ. ದೂರದರ್ಶನ ಹಾಗೂ ಆಕಾಶವಾಣಿಯಲ್ಲಿ ನೀಡಿದ ಹಲವಾರು ಕಾರ್ಯಕ್ರಮಗಳು. ಆಕಾಶವಾಣಿಯ ರಾಷ್ಟ್ರೀಯ ಜಾಲದಲ್ಲಿ ಕಾರ್ಯಕ್ರಮ ಪ್ರಸಾರ. ೧೯೮೭ ರಲ್ಲಿ ರಷ್ಯಾದಲ್ಲಿ ನಡೆದ ಭಾರತ ಉತ್ಸವದಲ್ಲಿ, ೧೯೯೦ ರಲ್ಲಿ ಜರ್ಮನಿಯಲ್ಲಿ ನಡೆದ ಭಾರತ ಉತ್ಸವದಲ್ಲಿ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರ ನೇತೃತ್ವದಲ್ಲಿ ಪಂಚವೀಣಾಗಾಯಕರಲ್ಲೊಬ್ಬರಾಗಿ ನೀಡಿದ ಕಾರ್ಯಕ್ರಮ. ಮೈಸೂರಿನ ಬಿಡಾರಂ ಕೃಷ್ಣಪ್ಪನವರ ರಾಮಮಂದಿರ, ಬೆಂಗಳೂರಿನ ಗಾಯನ ಸಮಾಜ, ಮಲ್ಲೇಶ್ವರಂ ಸಂಗೀತ ಸಭಾ, ಕರ್ನಾಟಕ ಗಾನ ಕಲಾ ಪರಿಷತ್‌, ಚೆನ್ನೈ, ಮ್ಯೂಸಿಕ್‌ ಅಕಾಡಮಿ, ದೆಹಲಿ, ಮುಂಬಯಿಯಲ್ಲಿ ನೀಡಿದ ಕಾರ್ಯಕ್ರಮ. ಚೆನ್ನೈ ಮ್ಯೂಸಿಕ್‌ ಅಕಾಡಮಿ ಪ್ರಶಸ್ತಿ, ಬೆಂಗಳೂರಿನ ಮ್ಯೂಸಿಕ್‌ ಅಕಾಡಮಿಯಿಂದ ಟಿ. ಚೌಡಯ್ಯ ಪ್ರಶಸ್ತಿ, ಮೈಸೂರಿನ ಸರಸ್ವತಿ ಗಾನ ಕಲಾ ಮಂದಿರದ ವೇಣು ಗಾನ ವಿದ್ಯಾವಾರಿಧಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಕರ್ನಾಟಕ ಕಲಾತಿಲಕ, ಕರ್ನಾಟಕ ಗಾನ ಕಲಾ ಪರಿಷತ್ತಿನ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮತ್ತು ಗಾನ ಕಲಾಭೂಷಣ ಮುಂತಾದ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದ ಎಸ್‌. ಆನಂದರಾವ್‌ – ೧೯೫೯

* * *

Details

Date:
August 29, 2023
Event Category: