Loading Events

« All Events

  • This event has passed.

ವಿಶ್ವಂಭರ ಕೆ.ಎಸ್.

September 25, 2023

೨೫.೦೯.೧೯೪೦ ಚಿತ್ರಕಲೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವಂಭರರವರು ಹುಟ್ಟಿದ್ದು ಶಿವಮೊಗ್ಗ. ತಂದೆ ಕೆ.ಎಸ್. ಸೂರ್ಯನಾರಾಯಣರಾವ್, ತಾಯಿ ಲಕ್ಷ್ಮೀದೇವಿ. ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಬೆಳೆದ ಆಸಕ್ತಿ. ಕೋಲ್ಕತ್ತದ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ಪಡೆದ ಸ್ನಾತಕ ಪದವಿ. ಸಂಗೀತದಲ್ಲಿ ಡಿಪ್ಲೊಮೊ. ಗದಗಿನ ಸ್ನಾತಕೋತ್ತರ ಕಾಲೇಜು, ಪಣಜಿಯ ಕಾಲೇಜು, ಬೆಂಗಳೂರಿನ ಚಿತ್ರಕಲಾ ಪರಿಷತ್‌ ಮುಂತಾದೆಡೆ ಪ್ರಾಚಾರ್ಯರಾಗಿ, ಪ್ರಾಂಶುಪಾಲರಾಗಿ ಸಲ್ಲಿಸಿದ ಸೇವೆ. ರಾಷ್ಟ್ರೀಯ ಲಲಿತಕಲಾ ಅಕಾಡೆಮಿ ದೆಹಲಿ, ತಮಿಳುನಾಡಿನ ಕಲಾಸ್ಪರ್ದೆ, ಕರ್ನಾಟಕ ಲಲಿತಕಲಾ ಅಕಾಡೆಮಿ, ರಾಜಾಸ್ಥಾನದ ಲಲಿತಕಲಾ ಅಕಾಡೆಮಿ ಮುಂತಾದೆಡೆ ನಡೆದ ಕಲಾಸ್ಪರ್ಧೆಯ ತೀರ್ಪುಗಾರರು. ದೆಹಲಿಯ ರಾಷ್ಟ್ರೀಯ ಕಲಾಭವನ, ಮುಂಬಯಿ, ಚಂಡಿಗರ್, ಲಕ್ನೋ, ಗೋವಾ, ಜಯಪುರ, ಬೆಂಗಳೂರು, ಭೂಪಾಲ್, ಕೊಚಿನ್‌, ಬರೋಡ, ಚೆನ್ನೈ ಮುಂತಾದೆಡೆ ಸಾಂಘಿಕ ಪ್ರದರ್ಶನಗಳು. ಹೊರದೇಶಗಳಾದ ತೈವಾನ್, ಜಪಾನ್, ಅಮೆರಿಕಾ, ನ್ಯೂಯಾರ್ಕ್‌, ಕಾನ್ಸಾಸ್‌ಸ್ಟೇಟ್ ಯೂನಿರ್ವಸಿಟಿ ಮುಂತಾದೆಡೆಯಲ್ಲಿ ನಡೆಸಿಕೊಟ್ಟ ಏಕವ್ಯಕ್ತಿ ಪ್ರದರ್ಶನಗಳು. ದೆಹಲಿಯ ಲಲಿತಕಲಾ ಅಕಾಡೆಮಿ, ಭೂಪಾಲ್, ಉದಯಪುರ, ರಾಜಾಸ್ಥಾನ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಗೋವಾ, ಅಮೆರಿಕಾ, ಪೋಲೆಂಡ್, ಜಪಾನ್, ಈಜಿಪ್ಟ್ ಮುಂತಾದ ಕಲಾಸಂಗ್ರಹಗಳಲ್ಲಿ ಸಂಗ್ರಹಿತ. ಜಪಾನ್ ಪ್ರತಿಭಾ ಪುರಸ್ಕಾರ, ರಾಜಾಸ್ಥಾನದ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ದೆಹಲಿಯ ಮಾನವ ಸಂಪನ್ಮೂಲ ಇಲಾಖೆ, ಬೆಂಗಳೂರಿನ ಚಿತ್ರಕಲಾ ಪರಿಷತ್‌, ದೆಹಲಿಯ ಗಾರ್ಕಿ ಲಲಿತಕಲಾ ಅಕಾಡೆಮಿ, ಗೋವಾ ಕಲಾ ಅಕಾಡೆಮಿ ಮುಂತಾದೆಡೆಗಳಿಂದ ಸಂದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ನಾಗಣ್ಣ ಎಚ್‌.ಟಿ – ೧೯೨೨ ರಮಾಸದಾಶಿವ – ೧೯೫೨ ಲಲಿತಾ ಜಾಗೀರ್‌ದಾರ್‌ – ೧೯೫೪

* * *

Details

Date:
September 25, 2023
Event Category: