
- This event has passed.
ವಿ.ಜಿ. ಅಂದಾನಿ
November 28
೨೮.೧೧.೧೯೪೭ ಸಮಕಾಲೀನ ಚಿತ್ರಕಲೆಯಲ್ಲಿ ಪ್ರಖ್ಯಾತರಾಗಿರುವ ವಿ.ಜಿ. ಅಂದಾನಿಯವರು ಹುಟ್ಟಿದ್ದು ಗುಲಬರ್ಗಾ ಜಿಲ್ಲೆಯ ಕೀರಣಗಿಯಲ್ಲಿ. ತಂದೆ ಗುರಪ್ಪ, ತಾಯಿ ನೀಲಗಂಗವ್ವ. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಬೆಳೆದ ಆಸಕ್ತಿ. ಚಿತ್ರಕಲೆಯಲ್ಲಿ ಪಡೆದ ಡಿಪ್ಲೊಮ, ಬನಸ್ಥಲಿ ವಿದ್ಯಾಪೀಠದಿಂದ ಭಿತ್ತಿ ಚಿತ್ರಕಲೆಯಲ್ಲಿ ಪಡೆದ ವಿಶೇಷ ತರಬೇತಿ. ಧಾರವಾಡದ ಲಲಿತ ಕಲಾ ಅಕಾಡಮಿ, ವಿಶ್ವ ಕನ್ನಡ ಸಮ್ಮೇಳನ, ಸಾರ್ಕ್ ಸಮ್ಮೇಳನ, ಗುಲಬರ್ಗಾದ ಗ್ರಾಫಿಕ್ ಕಾರ್ಯಗಾರ, ಭುವನೇಶ್ವರದ ಲಲಿತಕಲಾ ಅಕಾಡಮಿ, ಜಮ್ಮು ಮತ್ತು ಕಾನ್ಪುರದ ಕಲಾಶಿಬಿರಗಳು, ಹೈದರಾಬಾದಿನ ವೆಂಕಟೇಶ್ವರ ಲಲಿತ ಕಲಾ ಕಾಲೇಜ್, ಚಿಕ್ಕಮಗಳೂರಿನಲ್ಲಿ ನಡೆದ ಎಂ.ಎಸ್.ಐ.ಎಲ್. ರಾಷ್ಟ್ರೀಯ ಶಿಬಿರ, ಲಲಿತಕಲಾ ಅಕಾಡಮಿಯ ಶ್ರೀರಂಗಪಟ್ಟಣದ ಶಿಬಿರಗಳಲ್ಲಿ ಭಾಗಿ. ಕಾಲೇಜ್ ಎ ವಿಷುಯಲ್ ಆರ್ಟ್ಸ್ ಸ್ಥಾಪಕ ಪ್ರಾಂಶುಪಾಲರಾಗಿ, ದೃಶ್ಯ ಕಲಾಮಂದಿರದ ಪ್ರಾಂಶುಪಾಲರಾಗಿ, ರಾಜ್ಯ ಕಲಾ ಶಿಕ್ಷಣ ಪಠ್ಯಪುಸ್ತಕ ಸಮಿತಿ, ತಿರುಪತಿಯ ಪದ್ಮಾವತಿ ವಿವಿ.ದ ಪಠ್ಯಕ್ರಮ ಸಮಿತಿ, ಗುಲಬರ್ಗಾ, ಬೆಂಗಳೂರು ವಿ.ವಿ.ದ ಸಮಿತಿ, ಗುಲಬರ್ಗಾ ವಿ.ವಿ.ದ ಸೆನೆಟ್, ಕಲಾ ಸಂಸ್ಥೆಗಳ ಸಮುದಾಯ, ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ – ತಂಜಾವೂರು, ನಾಗಪುರಗಳ ಕಾರ್ಯನಿರ್ವಾಹಕ ಮಂಡಲಿ ಸದಸ್ಯರಾಗಿ ಸಲ್ಲಿಸಿದ ಸೇವೆ. ಗುಲಬರ್ಗಾ ವೈದ್ಯಕೀಯ ಕಾಲೇಜ್, ದೆಹಲಿಯ ಕರ್ನಾಟಕ ಭವನ, ರಾಜ್ಯ ಪ್ರವಾಸೋದ್ಯಮ ಇಲಾಖೆ, ರಾಯಚೂರಿನ ಚಿತ್ರಕಲಾ ಶಾಲೆ, ಕೋಲ್ಕತ್ತಾದ ರವೀಂದ್ರ ಕಲಾನಿಕೇತನ ಮೈಸೂರಿನ ಜಾನಪದ ವಸ್ತುಸಂಗ್ರಹಾಲಯ ಮುಂತಾದೆಡೆ ಸಂಗ್ರಹಿತ. ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ, ಚಿತ್ರಕಲಾ ಪರಿಷತ್‌ನ ೩ನೇ ಅಖಿಲಭಾರತ ಪ್ರದರ್ಶನ, ಹೈದರಾಬಾದಿನ ಆರ್ಟ್ ಸೊಸೈಟಿ, ಕೇಂದ್ರ ಸರಕಾರದ ಫೆಲೋಷಿಪ್, ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಹಾಗೂ ಕೇಂದ್ರ ಲಲಿತಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಇದೇ ದಿನ ಹುಟ್ಟಿದ ಕಲಾವಿದರು ರಾಮಚಂದ್ರಮೂರ್ತಿ ಎಸ್.ವಿ. – ೧೯೨೩ ಲಕ್ಷ್ಮೀನಾರಾಯಣ ಭಟ್ – ೧೯೩೮ ಪಿ.ಎ. ಗಿರಿಧರ್ – ೧೯೪೩ ಪೂರ್ಣ ಸುರೇಶ್ – ೧೯೪೭ ಜಗದೀಶ್ ಬಿ.ಡಿ. – ೧೯೫೫ ಅನುಪಮ ಚಂದ್ರಹಾಸ್ – ೧೯೬೯