ವಿ.ಟಿ. ಕಾಳೆ

Home/Birthday/ವಿ.ಟಿ. ಕಾಳೆ
Loading Events
This event has passed.

೧೨.೦೨.೧೯೩೪ ಪ್ರಖ್ಯಾತ ಚಿತ್ರ ಕಲಾವಿದ ವಿ.ಟಿ. ಕಾಳೆಯವರು ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ. ತಂದೆ ತುಳಜಾರಾಮ, ತಾಯಿ ಭರಮವ್ವ. ಪ್ರಾಥಮಿಕ ಶಿಕ್ಷಣ ಹುನಗುಂದ. ಕಲಾ ಶಿಕ್ಷಣ ಗದುಗಿನ ಮುನಿಸಿಪಲ್ ಹೈಸ್ಕೂಲು. ಉಚ್ಚ ಕಲಾ ಶಿಕ್ಷಣ ವಿಜಯ ಕಲಾಮಂದಿರ, ಎಲಿಮೆಂಟರಿ ಮತ್ತು ಇಂಟರ್‌ಮೀಡಿಯೆಟ್ ಪೇಯಿಂಟಿಂಗ್ಸ್‌ನಲ್ಲಿ ಎರಡು ಮತ್ತು ಮೂರನೆಯ ರ್ಯಾಂಕ್. ಮುಂಬಯಿಯ ಜೆ.ಜೆ. ಕಲಾಶಾಲೆಯಿಂದ ಪಡೆದ ಡಿಪ್ಲೊಮ. ಉದ್ಯೋಗಕ್ಕಾಗಿ ಸೇರಿದ್ದು ಓದಿದ ವಿಜಯಾ ಕಲಾಮಂದಿರದಲ್ಲಿ ಚಿತ್ರಕಲಾ ಶಿಕ್ಷಕರಾಗಿ. ನಂತರ ಸಂಡೂರಿನ ವಸತಿ ಸಂಯುಕ್ತ ಕಿರಿಯ ಮಹಾ ವಿದ್ಯಾಲಯದಲ್ಲಿ ಕಲಾ ಶಿಕ್ಷಕರಾಗಿ, ನಿವೃತ್ತಿಯ ನಂತರವೂ ಅದೇ ಶಾಲೆಯಲ್ಲಿ ಶಿಕ್ಷಕರಾಗಿ ಮುಂದುವರೆದ ಸೇವೆ. ಉದ್ಯೋಗದ ಜೊತೆಗೆ ಕರ್ನಾಟಕದ ಹಲವಾರು ಸರಕಾರದ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗಿ. ಸಂಶೋಧನೆ ಮತ್ತು ತರಬೇತಿ ಕೇಂದ್ರ ಪಠ್ಯ ನವೀಕರಣ, ಅನೌಪಚಾರಿಕ ಶಿಕ್ಷಣದ ಪಠ್ಯ ಪುಸ್ತಕಗಳು, ಕೇಂದ್ರ ಸರಕಾರದ ಯೋಜನೆ ಶಿಕ್ಷಣಕ್ಕೆ ವ್ಯಾಪಕ ಅವಕಾಶ ಕಾರ್ಯಕ್ರಮ, ಕೇಂದ್ರ ಸರಕಾರದ ನೂತನ ಪಠ್ಯಕ್ರಮ ಮುಂತಾದುವುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹೊತ್ತ ಜವಾಬ್ದಾರಿ. ನಾಟಕ ರಚನಕಾರರಾಗಿ, ನಟರಾಗಿ, ಕಲಾ ನಿರ್ದೇಶಕರಾಗಿ, ಲೇಖಕರಾಗಿ ಪಾಲ್ಗೊಂಡ ಹಲವಾರು ಕಾರ್ಯಕ್ರಮಗಳು. ಕೇಪ್ ಸಲಹಾ ಸಮಿತಿಯ ಸದಸ್ಯರಾಗಿ, ಪಠ್ಯ ಪುಸ್ತಕಗಳ ಕಲಾವಿದ ಸದಸ್ಯರಾಗಿ, ಡ್ರಾಯಿಂಗ್ ಗ್ರೇಡ್ ಉಚ್ಚ ಕಲಾ ಪರೀಕ್ಷೆಗಳ ಪರೀಕ್ಷಕರಾಗಿ, ಧಾರವಾಡದ ಆರ್ಟ್ಸ್ ಸೊಸೈಟಿ ಸದಸ್ಯರಾಗಿ, ಕರ್ನಾಟಕ ಲಲಿತ ಕಲಾ ಅಕಾಡಮಿ ಸದಸ್ಯರಾಗಿ, ಹಲವಾರು ಸಾಂಸ್ಕೃತಿಕ ಸಂಸ್ಥೆಗಳ ಸಲಹಾ ಸಮಿತಿಯ ಸದಸ್ಯರಾಗಿ ಸಲ್ಲಿಸಿದ ಸೇವೆ. ಹಂಪಿ ಕಲಾಶಿಬಿರ, ವಿಶ್ವ ಕನ್ನಡ ಸಮ್ಮೇಳನ ಕಲಾಶಿಬಿರ, ಲಲಿತಕಲಾ ಅಕಾಡಮಿ ಕಲಾ ಶಿಬಿರ, ಬೀಳಗಿಯ ರಾಜ್ಯಮಟ್ಟದ ಕಲಾ ಶಿಬಿರಗಳಲ್ಲಿ ಪ್ರಮುಖ ಪಾತ್ರ. ಕರ್ನಾಟಕ ಲಲಿತ ಕಲಾ ಅಕಾಡಮಿ, ಮೈಸೂರು ದಸರ ವಸ್ತುಪ್ರದರ್ಶನ, ವಿಜಯ ಕಲಾಮಂದಿರದ ಸುವರ್ಣ ಮಹೋತ್ಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಛತ್ರಪತಿ ಶಿವಾಜಿ ರಾಜ್ಯ ಪ್ರಶಸ್ತಿ, ಅಮೋಘವರ್ಷ ನೃಪತುಂಗ ಪ್ರಶಸ್ತಿಯಲ್ಲದೆ ಪಂಚಾಕ್ಷರಿ ಗವಾಯಿಯವರ ವೀರೇಶ್ವರ ಪುಣ್ಯಾಶ್ರಮ, ವಿಜಯ ಮಹಂತೇಶ ಲಲಿತ ಕಲಾ ಅಕಾಡಮಿ, ಎಂ.ವೈ. ಘೋರ್ಪಡೆಯವರ ಅರಮನೆ, ಶಿವ ವಿಲಾಸ ಅರಮನೆ, ಪಾಕಿಸ್ತಾನ, ಲಂಡನ್, ಅಮೆರಿಕಾ ಮುಂತಾದ ಖಾಸಗಿ ಸಂಗ್ರಹಗಳಲ್ಲಿ ಇವರ ಕಲಾಕೃತಿಗಳು ಸಂಗ್ರಹೀತ, ಪ್ರಸ್ತುತ ಕರ್ನಾಟಕ ಲಲಿತ ಕಲಾ ಅಕಾಡಮಿಯ ಅಧ್ಯಕ್ಷರ ಜವಾಬ್ದಾರಿ.   ಇದೇ ದಿನ ಹುಟ್ಟಿದ ಕಲಾವಿದರು : ಹುಸೇನ ಬಾಬು ನಾದಾಫ್ – ೧೯೨೫ ದೇವರಾಜ ಕೆ. – ೧೯೪೦ ಜನಾರ್ಧನ್ ಇ.ಕೆ. – ೧೯೪೫

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top