Loading Events

« All Events

ವಿ. ರಾಮರತ್ನಂ

December 23

೧೯೧೭ ಸಂಗೀತಜ್ಞರಾದ ವಿ. ರಾಮರತ್ನಂ ರವರು ಹುಟ್ಟಿದ್ದು ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ. ತಂದೆ ವಿ. ಸುಬ್ಬರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳನ್ನು ಕೇಳಿ ಸಂಗೀತದಲ್ಲಿ ಹುಟ್ಟಿದ ಆಕರ್ಷಣೆ. ಡಿ. ಸುಬ್ಬರಾಮಯ್ಯ, ನಾರಾಯಣ ಸ್ವಾಮಿ ಭಾಗವತರ್, ಪಾಲ್ಘಾಟ್ ಸೋಮೇಶ್ವರ ಭಾಗವತರಲ್ಲಿ ಸಂಗೀತ ಪಾಠ. ಟಿ. ಚೌಡಯ್ಯನವರಲ್ಲಿ ಹತ್ತುವರ್ಷ ಶಿಷ್ಯವೃತ್ತಿ, ವಾಸುದೇವಾಚಾರ್ಯ, ಅರಿಯಾಕುಡಿ, ಚಂಬೈ ಮುಂತಾದ ದಿಗ್ಗಜರ ಸಂಗೀತ ಕಚೇರಿ ಆಲಿಕೆ. ಟಿ. ಚೌಡಯ್ಯನವರ ಅಯ್ಯನಾರ್ ಸಂಗೀತ ಶಾಲೆಯಲ್ಲಿ ಉಪಪ್ರಾಂಶುಪಾಲರಾಗಿ, ಮೈಸೂರು ವಿ.ವಿ.ದ ಲಲಿತಕಲಾ ಕಾಲೇಜಿನ ಸಂಗೀತ ವಿಭಾಗದ ರೀಡರ್, ಪ್ರೊಫೆಸರ್, ಪ್ರಾಂಶುಪಾಲರಾಗಿ, ಯು.ಜಿ.ಸಿ.ಯ ಎಮರಿಟಸ್ ಆಗಿ, ಆಯ್ಕೆ ಸಮಿತಿ, ಭಾರತ ಸರಕಾರದ ವೇತನ ಸಮಿತಿ ಮುಂತಾದುವುಗಳಲ್ಲಿ ಜವಾಬ್ದಾರಿಯ ಹುದ್ದೆ. ಮುಂಬಯಿ, ಮದರಾಸು, ಕೊಯಮತ್ತೂರು, ಬೆಂಗಳೂರು, ಮುಂತಾದೆಡೆ ಆಕಾಶವಾಣಿ ಎ ಶ್ರೇಣಿ ಕಲಾವಿದರಾಗಿ ನಡೆಸಿಕೊಟ್ಟ ಕಾರ್ಯಕ್ರಮಗಳು, ಸಂಗೀತ ದರ್ಪಣ, ಟಿ. ಚೌಡಯ್ಯನವರ ಕೃತಿಗಳು, ಕರ್ನಾಟಕ ಸಂಗೀತ ಸುಧಾ, ನೌಕಾಚರಿತ್ರೆ, ಪಲ್ಲಕ್ಕಿ ಸೇವಾ ಪ್ರಬಂಧಗಳು, ಕೀರ್ತನ ದರ್ಪಣ, ಕರ್ನಾಟಕ ಸಂಗೀತ ಕೃತಿ ರಚನ ಸಂಗ್ರಹ ಮುಂತಾದ ಗ್ರಂಥಗಳ ರಚನೆ. ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷತೆ-ಸಂಗೀತ ಕಲಾರತ್ನ ಬಿರುದು, ರಾಜ್ಯ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಮದರಾಸು ಮ್ಯೂಸಿಕ್ ಅಕಾಡಮಿ ಮುಂತಾದುವುಗಳಿಂದ ದೊರೆತ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು : ರಾಜಗೋಪಾಲನ್ ಎ.ಆರ್. – ೧೯೫೨ ವೇಣುಗೋಪಾಲ್ ಎಚ್.ಎಸ್. – ೧೯೫೮

* * *

Details

Date:
December 23
Event Category: