ವಿ. ಸೀತಾರಾಮಯ್ಯ

Home/Birthday/ವಿ. ಸೀತಾರಾಮಯ್ಯ
Loading Events

೨-೧೦-೧೮೯೯ ೪-೯-೧೯೮೩ ಕನ್ನಡದ ನವೋದಯ ಸಾಹಿತಿಗಳಲ್ಲಿ ಒಬ್ಬರಾದ ವಿ. ಸೀತಾರಾಮಯ್ಯನವರು ಹುಟ್ಟಿದ್ದು ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ದೊಡ್ಡ ವೆಂಕಟಮ್ಮ. ಹೈಸ್ಕೂಲುವರೆಗೆ ಬೆಂಗಳೂರು, ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. ಪದವಿ, ೧೯೨೨ರಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ. ಲಾ ಕಲಿಯಲು ಬೊಂಬಾಯಿಗೆ ಪ್ರಯಾಣ. ಡೆಪ್ಯುಟಿ ಕಂಟ್ರೋಲರ್ ಆಫ್ ಕರೆನ್ಸಿ ಕಚೇರಿಯಲ್ಲಿ ದುಡಿದದ್ದು ಕೆಲಕಾಲ. ಶಾರದಾವಿಲಾಸ್ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭ. ವಿವಿಧ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಕಾರ‍್ಯನಿರ್ವಹಣೆ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ‍್ಯ ನಿರ್ವಹಿಸಿ ನಂತರ ನಿವೃತ್ತಿ. ನಿವೃತ್ತಿಯ ನಂತರ ಹೊನ್ನಾವರ ಕಾಲೇಜಿನಲ್ಲಿ ವಹಿಸಿಕೊಂಡ ಪ್ರಾಂಶುಪಾಲರ ಹುದ್ದೆ. ಪ್ರಬುದ್ಧ ಕರ್ನಾಟಕ ಸಂಪಾದಕರಾಗಿ, ಸಾಹಿತ್ಯ ಪರಿಷತ್ತಿನ ಕನ್ನಡ ನುಡಿ ಮತ್ತು ಪರಿಷತ್ ಪತ್ರಿಕೆಗಳ ಸಂಪಾದಕರಾಗಿ ಸಲ್ಲಿಸಿದ ಸೇವೆ. ಆಕಾಶವಾಣಿಯಲ್ಲಿ ಕಾರ‍್ಯಕ್ರಮ ನಿರ್ವಾಹಕರಾಗಿಯೂ ಕೆಲಕಾಲ. ಜೀವನದ ಉದ್ದಕ್ಕೂ ನಡೆಸಿದ ಅಧ್ಯಯನ, ಅಧ್ಯಾಪನ. ಕವನ ಸಂಕಲನಗಳು-ಗೀತಗಳು, ದೀಪಗಳು, ನೆರಳು-ಬೆಳಕು, ದ್ರಾಕ್ಷಿ-ದಾಳಿಂಬೆ, ಹೆಜ್ಜೆಪಾಡು, ಕದಂಬ, ಅರಲು-ಬರಲು, ಹಗಲು-ಇರುಳು. ಗದ್ಯಕೃತಿಗಳು-ಪಂಪಯಾತ್ರೆ, (ಪ್ರಥಮ ಕೃತಿ-ಪ್ರವಾಸಕಥನ) ಸೊಹ್ರಾಬ್- ರುಸ್ತುಂ, ಆಗ್ರಹ, ಅಭಿಜ್ಞಾನ ಶಾಕುಂತಲ ನಾಟಕ ವಿಮರ್ಶೆ, ಕರ್ನಾಟಕ ಕಾದಂಬರಿ, ಅಶ್ವತ್ಥಾಮನ್, ಭಾರತದ ರಾಜ್ಯಾಂಗ ರಚನೆ, ವ್ಯವಹಾರ ಧರ್ಮ, ಭಾರತದ ಐವರು ಮಾನ್ಯರು, ಕವಿಕಾವ್ಯ ದೃಷ್ಟಿ, ಶಿವರಾಮ ಕಾರಂತರು, ಬೆಳದಿಂಗಳು, ಶ್ರೀ ಶೈಲ ಶಿಖರ, ಸಾಹಿತ್ಯ ವಿಮರ್ಶೆಗಳಲ್ಲಿ ಅರ್ಥ ಮತ್ತು ಮೌಲ್ಯ, ಸೀಕರಣೆ, ಮಹನೀಯರು, ಕಾಲೇಜ್ ದಿನಗಳು, ಪ್ರಬಂಧ ಸಂಕಲನ. ಎರಡು ನಾಟಕಗಳು- ಆಗ್ರಹ ಮತ್ತು ಚ್ಯವನ. ವ್ಯಕ್ತಿಚಿತ್ರ-ಹಿರಿಯರು-ಗೆಳೆಯರು ಮುಂತಾದುವು. ಇಂಗ್ಲಿಷ್‌ನಲ್ಲಿ- ಮಹಾಕವಿಪಂಪ, ವೆಂಕಟಪ್ಪ, ಪುರಂದರದಾಸರು, ಎಂ. ವಿಶ್ವೇಶ್ವರಯ್ಯ, ವಾಲ್ಮೀಕಿ ರಾಮಾಯಣ, ಡಿ.ವಿ. ಗುಂಡಪ್ಪ, ಪಂಜೆ ಮಂಗೇಶರಾವ್. ಅನುವಾದಿತ-ರಿಸರ್ವಬ್ಯಾಂಕ್ ಆಫ್ ಇಂಡಿಯಾ, ಪಿಗ್ ಮೇಲಿಯನ್, ಮೇಜರ್ ಬಾರ್ಬರ ಸೇರಿ ೬೦ ಕೃತಿ ಪ್ರಕಟಿತ. ೧೯೫೪ರಲ್ಲಿ ಕುಮಟಾದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಕನ್ನಡನಾಡು ತೋರಿದ ಗೌರವ. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮೈಸೂರು ವಿ.ವಿ.ದ ಗೌರವ ಡಾಕ್ಟರೇಟ್, ಸಾಹಿತ್ಯಾಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥಗಳು- ರೂಪಾರಾಧಕ, ವಿ.ಸೀ, ವಿ.ಸೀ-ಎಪ್ಪತ್ತೊಂದು, ವಿ.ಸೀ, ವಿ.ಸೀ-೭೫, ವಿ.ಸೀತಾರಾಮಯ್ಯ, ಸಾರ್ಥಕ ಬದುಕು, ವಿ.ಸೀ. ನೂರರ ನೆನಪು.   ಇದೇ ದಿನ ಹುಟ್ಟಿದ ಸಾಹಿತಿಗಳು : ಅಣ್ಣಪ್ಪ – ೧೯೩೦ ಬಸವರಾಜನೆಲ್ಲಿಸರ – ೧೯೪೯ ಸುಲೋಚನಾರಾವ್ – ೧೯೬೧ ವೈ.ಕೆ. ಸಂಧ್ಯಾಶರ್ಮ – ೧೯೫೪ ಜಯಂತಿ ಮನೋಹರ್ – ೧೯೫೧

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top