ವೀಣೆ ವೆಂಕಟಗಿರಿಯಪ್ಪ

Home/Birthday/ವೀಣೆ ವೆಂಕಟಗಿರಿಯಪ್ಪ
Loading Events
This event has passed.

೨೬.೦.೧೮೮೭ ೩೦..೧೯೫೨ ಮೈಸೂರಿನ ವೀಣಾವಾದನದ ಝೇಂಕಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ವೆಂಕಟಗಿರಿಯಪ್ಪನವರು ಹುಟ್ಟಿದ್ದು ಹೆಗ್ಗಡದೇವನ ಕೋಟೆಯಲ್ಲಿ. ತಂದೆ ವೆಂಕಟರಾಮಯ್ಯ, ತಾಯಿ ನರಸಮ್ಮ. ಹನ್ನೊಂದು ತಿಂಗಳ ಮಗುವಾಗಿದ್ದಾಗಲೇ ಪಿತೃ ವಿಯೋಗ. ಅಣ್ಣ ಚಿಕ್ಕ ಸುಬ್ಬರಾಯರಲ್ಲಿ ದೊರೆತ ಆಶ್ರಯ. ಐದನೆಯ ವರ್ಷದಿಂದಲೇ ದೊಡ್ಡ ಸುಬ್ಬರಾಯರಿಂದಲೇ (ತಾತ) ವೀಣೆ ಪಾಠ ಪ್ರಾರಂಭ. ಚಿಕ್ಕ ಸುಬ್ಬರಾಯರಿಂದ ದೊರೆತ ಮಾರ್ಗದರ್ಶನ. ಶಿಸ್ತಿನಿಂದ ಕಲಿತು ವೀಣಾ ವಿದ್ವಾಂಸರೆಂದು ಗಳಿಸಿದ ಖ್ಯಾತಿ. ಮೈಸೂರು ಮಹಾರಾಜರಿಂದ ಆಸ್ಥಾನ ವಿದ್ವಾಂಸರಾಗಿ ನೇಮಕ. ಮಹಾರಾಜರ ಸ್ನೇಹಿತ, ಆಧ್ಯಾತ್ಮಿಕ ಗುರು, ಮಾರ್ಗದರ್ಶಿ ಎಲ್ಲವೂ ಎನ್ನುವಂತಹ ಆತ್ಮೀಯತೆ. ವೀಣೆ ಶೇಷಣ್ಣನವರಲ್ಲಿಯೂ ಮುಂದುವರೆದ ವೀಣೆಯ ಅಭ್ಯಾಸ. ಮೈಸೂರು ಮಹಾರಾಜರ ಪ್ರೋತ್ಸಾಹದಿಂದ ಕಲಿತ ಪಾಶ್ಚಾತ್ಯ ಸಂಗೀತ, ಪಿಯಾನೊ, ಕೆರಮಿಮ್ ವಾದನ ಕಲೆಯಲ್ಲೂ ಪಡೆದ ಪರಿಣತಿ. ಅರಮನೆಯ ಬ್ಯಾಂಡ್‌ಸೆಟ್‌‌ನ ನಿರ್ದೇಶಕರಾಗಿ ನೇಮಕ. ನವರಾತ್ರಿ ಸಂದರ್ಭದಲ್ಲಿ ನಡೆಯುವ ಸಂಗೀತೋತ್ಸವಕ್ಕೆ ಸಂಗೀತಗಾರರ ಆಯ್ಕೆಯ ಜವಾಬ್ದಾರಿ. ಆಸಕ್ತ, ಅವಕಾಶವಂಚಿತ ಮಕ್ಕಳೂ ಸಂಗೀತ ಕಲಿಯಲು ಮಹಾರಾಜರು ಮಾಡಿದ ಏರ್ಪಾಡು. ವೆಂಕಟ ಗಿರಿಯಪ್ಪನವರು ಸರಕಾರಿ ಟ್ರೈನಿಂಗ್ ಕಾಲೇಜು, ಮಹಾರಾಣಿ ಹೈಸ್ಕೂಲಿನಲ್ಲಿಯೂ ಅಧ್ಯಾಪಕರಾಗಿ ಸಲ್ಲಿಸಿದ ಸೇವೆ. ಭಾರತದಾದ್ಯಂತ ಪ್ರವಾಸ ಮಾಡಿ ನಡೆಸಿಕೊಟ್ಟ ವೀಣಾವಾದನ ಕಚೇರಿಗಳು. ತಿರುವಾಂಕೂರಿನ ದಿವಾನರಾಗಿದ್ದ ರಾಮಸ್ವಾಮಿ ಅಯ್ಯರ್‌ ರವರ ಮನೆಯಲ್ಲಿ ನಡೆದ ಕಚೇರಿ. ವೀಣಾವಿದುಷಿ ಮಹಾರಾಣಿ ಸೇತೂ ಪಾರ್ವತಿಬಾಯಿ ಯವರಿಂದ ವೀಣಾವಾದನ ಪ್ರಶಂಸೆ. ರತ್ನ ಖಚಿತವಾದ ತೋಡಾ ಖಲ್ಲತ್ತು ಸನ್ಮಾನ. ಜೋಧ್‌ಪುರದ ಸಂಗೀತ ಸಮ್ಮೇಳನದಲ್ಲಿ ಬಿಸ್ಮಿಲ್ಲಾ ಖಾನ್‌ ಮುಂತಾದವರಿಂದ ಪ್ರಶಂಸೆ. ವಜ್ರದುಂಗುರ, ಸಹಸ್ರಾರು ರೂಪಾಯಿ ಬಹುಮಾನ. ಕುಂಭ ಕೋಣದ ಶ್ರೀಗಳವರಿಂದ ವೈಣಿಕ ಶಿಖಾಮಣಿ ಬಿರುದು, ಎರಡು ಕೈಗಳಿಗೂ ತೊಡಿಸಿದ ಸುವರ್ಣ ಖಚಿತ ತೋಡಾ. ದಸರಾ ಮಹೋತ್ಸವದಲ್ಲಿ ವೈಣಿಕ ಪ್ರವೀಣರೆಂಬ ಬಿರುದು. ವಾಗ್ಗೇಯಕಾರರಾಗಿಯೂ ಪಡೆದ ಪ್ರಶಸ್ತಿ. ೩೦ ಮೇಳರಾಗಗಳಲ್ಲಿ ಕೃತಿ ರಚನೆ. ವರ್ಣಗಳು, ತಿಲ್ಲಾನ, ರಾಗಮಾಲಿಕೆ, ನಗ್ಮಗಳು (ಹಿಂದೂಸ್ತಾನಿ ಗತ್ತು) ಇವುಗಳ ರಚನೆಯ ವೈವಿಧ್ಯ. ಮೈಸೂರು ಮಹಾರಾಜರಿಂದ ಸಂಗೀತ ವಿಶಾರದ ಪ್ರಶಸ್ತಿ ಜೊತೆಗೆ ವಜ್ರಕೆಂಪನ ಗಂಡಭೇರುಂಡ ಪದಕವುಳ್ಳ ರತ್ನಹಾರ ಮುಂತಾದ ಗೌರವ ಪ್ರಶಸ್ತಿಗಳು.   ಇದೇದಿನಹುಟ್ಟಿದಕಲಾವಿದರು: ಶಿವಪ್ಪ ಎಚ್. ತರಲಘಟ್ಟಿ – ೧೯೨೭ ರಾಮಸ್ವಾಮಿ.ವಿ. – ೧೯೩೧ ರವೀಂದ್ರಕುಮಾರ್‌.ವಿ. – ೧೯೫೪ ಜಯಶ್ರೀ ಅರವಿಂದ್- ೧೯೫೫.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top