Loading Events

« All Events

  • This event has passed.

ವೀರಕೇಸರಿ ಸೀತಾರಾಮಶಾಸ್ತ್ರಿ

November 4, 2023

೪-೧೧-೧೮೯೩ ೭-೧-೧೯೭೧ ಸಾಹಿತಿ, ಪತ್ರಿಕೋದ್ಯಮಿ, ರಾಜಕಾರಣಿ ಸೀತಾರಾಮಶಾಸ್ತ್ರಿಗಳು ಹುಟ್ಟಿದ್ದು ನಂಜನಗೂಡಿನಲ್ಲಿ. ತಂದೆ ನಾಗೇಶ ಶಾಸ್ತ್ರಿಗಳು, ತಾಯಿ ಪಾರ್ವತಮ್ಮ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ಶೃಂಗೇರಿಗೆ ಪಯಣ. ವಿದ್ವಾಂಸರಾದ ಮೂವರು ಸೋದರ ಮಾವಂದಿರ ಸಂಪರ್ಕ. ಗುರುಕುಲದಲ್ಲಿ ಪ್ರಾರಂಭಿಕ ಶಿಕ್ಷಣ. ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಸೀತಾರಾಮಶಾಸ್ತ್ರಿಗಳ ಸಹಪಾಠಿಗಳು. ಉದ್ಯೋಗಕ್ಕಾಗಿ ಹೊರಟಿದ್ದು ಬೆಂಗಳೂರಿಗೆ, ಶಂಕರ ಮಠದ ಅಕಾರಿಯಾಗಿ ಕೆಲಕಾಲ. ನಂತರ ಗೀರ್ವಾಣ ಭಾರತಿ ಸಂಸ್ಕೃತ ಮಹಾಲಯದಲ್ಲಿ ಅಧ್ಯಾಪಕ ವೃತ್ತಿ. ಗುರುಕುಲ ಶಿಕ್ಷಣ ಪದ್ಧತಿಯ ಅನುಷ್ಠಾನ. ಶಂಕರ ಮಠಕ್ಕೆ ಭೇಟಿ ನೀಡಿದ ರವೀಂದ್ರನಾಥ ಠಾಕೂರರಿಂದ ಗುರುಕುಲ ಶಿಕ್ಷಣ ಪದ್ಧತಿ ಪ್ರಶಂಸೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದ್ದ ಸಂದರ್ಭ. ಹಲವಾರು ರಾಷ್ಟ್ರ ನಾಯಕರ ಭೇಟಿ. ಮದನ ಮೋಹನ ಮಾಳವೀಯ, ಬಾಲಗಂಗಾಧರ ತಿಲಕ್, ಗಾಂಜಿ ಮುಂತಾದವರಿಂದ ರಾಷ್ಟ್ರಾಭಿಮಾನದ ತುಡಿತ. ಬೋಧನಾವೃತ್ತಿ ತೊರೆದು ಸರಕಾರಿ ಕೇಲಸ ಹಿಡಿದು ‘ಗ್ರಾಮಜೀವನ’ ಪತ್ರಿಕೆಯ ಸಂಪಾದಕತ್ವ. ಅದನ್ನೂ ತೊರೆದು ಕೇಸರಿ ಪತ್ರಿಕೆಯಿಂದ ಪ್ರಭಾವಿತರಾಗಿ ಪ್ರಾರಂಭಿಸಿದ ‘ವೀರಕೇಸರಿ’ ಪತ್ರಿಕೆ. ಮುಂದೆ ವೀರಕೇಸರಿ ಸೀತಾರಾಮ ಶಾಸ್ತ್ರಿಗಳೆನಿಸಿದರು. ಭಾಷೆ, ಸಾಹಿತ್ಯ, ತರ್ಕ, ಮೀಮಾಂಸೆಗಳಲ್ಲಿ ಆಳವಾದ ಪಾಂಡಿತ್ಯದಿಂದ ದೇಶಾಭಿಮಾನದ ಕೆಚ್ಚನ್ನು ಜನರಲ್ಲಿ ಮೂಡಿಸಲು ಬರೆಯುತ್ತಿದ್ದ ಹರಿತವಾದ ಲೇಖನಗಳು. ಚಿಂತಾಮಣಿ ಮಹಾಲಕ್ಷ್ಮಮ್ಮನವರ ಅಪಹರಣ, ಬೆಂಗಳೂರಿನ ಸುಲ್ತಾನ ಪೇಟೆಯ ವಿದ್ಯಾಗಣಪತಿ ಗಲಭೆ ಪ್ರಸಂಗಗಳ ನಿರ್ಭೀತ ವರದಿಯಿಂದ ಪತ್ರಿಕೆ ಗಳಿಸಿಕೊಂಡ ಜನಾನುರಾಗ. ಪತ್ರಿಕೋದ್ಯಮದಲ್ಲಿ ತೋರಿದ ಅಸಾಧಾರಣ ಪ್ರತಿಭೆ, ನ್ಯಾಯಾಲಯದಲ್ಲಿ ಹಲವಾರು ಬಾರಿ ಗಳಿಸಿದ ಜಯ. ಕೆಲಕಾಲ ನ್ಯಾಯ ವಿಧಾಯಕ ಸಭೆಯ ಸದಸ್ಯರಾಗಿಯೂ ಕಾರ್ಯ ನಿರ್ವಹಣೆ. ರಚಿಸಿದ ಬಹುತೇಕ ಕೃತಿಗಳು ಐತಿಹಾಸಿಕ ಕಾದಂಬರಿಗಳು. ಟುಪ್ಪು ಸುಲ್ತಾನನ ಸುತ್ತ ಹೆಣೆದ ಕಾದಂಬರಿ ‘ದೌಲತ್.’ ಆರು ಮುದ್ರಣ ಕಂಡ ಕಾದಂಬರಿ. ಶ್ರೀರಂಗರಾಯ, ನಗರದ ರಾಣಿ, ಬಿದನೂರರಾಣಿ, ಗೋಲ್ಕೊಂಡ ಪತನ, ರಾಜಪಂಜರ, ಅದಿಲ್‌ಷಾಹಿಯ ಕಡೆಯ ದಿನಗಳು, ಛತ್ರಪತಿ ಶಿವಾಜಿ ಮುಂತಾದ ಐವತ್ತಕ್ಕೂ ಹೆಚ್ಚು ಕೃತಿ ರಚಿಸಿದ ಶಾಸ್ತ್ರಿಗಳು ಕ್ಯಾನ್ಸರಿನಿಂದ ೭೭ನೇ ವಯಸ್ಸಿನಲ್ಲಿ ನಿಧನ.   ಇದೇ ದಿನ ಹುಟ್ಟಿದ ಸಾಹಿತಿ : ಕುಮಾರ ವೆಂಕಣ್ಣ – ೧೯೧೬

Details

Date:
November 4, 2023
Event Category: