Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ವೀರಣ್ಣ ರಾಜೂರ – ಕಣಜ

ವೀರಣ್ಣ ರಾಜೂರ

Home/Birthday/ವೀರಣ್ಣ ರಾಜೂರ
Loading Events

೪-೬-೧೯೪೭ ಸಾಹಿತಿ, ಸಂಶೋಧಕ ವೀರಣ್ಣ ರಾಜೂರರವರು ಹುಟ್ಟಿದ್ದು ಕೊಪ್ಪಳ ಜಿಲ್ಲೆಯ, ಕುಷ್ಟಗಿ ತಾಲೂಕಿನ ಬೆನಕನಾಳ. ತಂದೆ ಬಸಪ್ಪ, ತಾಯಿ ಫಕೀರಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಬೆನಕನಾಳ, ಹನುಮಸಾಗರ. ಕಾಲೇಜಿಗೆ ಸೇರಿದ್ದು ಜೆ.ಟಿ. ಕಾಲೇಜು ಗದಗ, ಬಿ.ಎ. ಪದವಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮತ್ತು ‘ಕನ್ನಡ ಸಾಂಗತ್ಯ ಸಾಹಿತ್ಯ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ. ಎಪಿಗ್ರಫಿಯಲ್ಲಿ ಡಿಪ್ಲೊಮ ಪದವಿ. ಪದವಿಯ ನಂತರ ಉದ್ಯೋಗ ಪ್ರಾರಂಭಿಸಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ ಸೇರಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ವಿವಿಧ ನೆಲೆಗಳಲ್ಲಿ ವಿವಿಧ ಸೇವೆ. ಹಲವಾರು ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಗಳಲ್ಲೂ ಭಾಗಿ. ಹಲವಾರು ವಿಚಾರ ಸಂಕಿರಣ, ವಿಶೇಷ ಉಪನ್ಯಾಸಗಳಲ್ಲಿ ಭಾಗಿ. ಇವರ ಮಾರ್ಗದರ್ಶನದಲ್ಲಿ ೭ ವಿದ್ಯಾರ್ಥಿಗಳು ಪಿಎಚ್.ಡಿ. ೮ ವಿದ್ಯಾರ್ಥಿಗಳು ಎಂ.ಫಿಲ್ ಪದವಿ ಗಳಿಸಿದರೆ ೯ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ರಚಿಸಿದ ಗ್ರಂಥಗಳು-ವಚನ ಅಧ್ಯಯನ, ಸ್ವರವಚನಗಳು, ವಿಚಾರ ಪತ್ನಿಯರು ಮೊದಲಾದ ೭ ಸಂಶೋಧನಾ ಕೃತಿಗಳು. ಅವಳೇ ಗಂಡ, ನಾನೆ ಹೆಂಣ್ತಿ, ಲವ್ ಅಂದ್ರೆ ಪ್ರೇಮ ಮುಂತಾದ ೧೨ ನಾಟಕಗಳು, ಹಾಲಭಾವಿ ವೀರಭದ್ರಪ್ಪನವರು, ಪಿ.ಬಿ. ಧುತ್ತರಗಿ-ಜೀವನಚರಿತ್ರೆ. ಸಿದ್ಧಲಿಂಗ ಶತಕ, ವಚನಾಮೃತಸಾರ, ವಚನಶಾಸ್ತ್ರ ಸಾರ, ಶಿವಯೋಗ ಪ್ರದೀಪಿಕೆ, ಭಕ್ತ್ಯಾನಂದ ಸುಧಾರ್ಣವ ಮೊದಲಾದ ೩೩ ಗ್ರಂಥಗಳ ಸಂಪಾದನೆ. ಸಮತಾ, ಕಥಾಶಾಲ್ಮಲಾ-ಕಥಾಸಂಕಲನಗಳು. ನಡುಗನ್ನಡ ಪಠ್ಯತರಂಗ, ಪ್ರಬಂಧ ಸಂಚಯ-ಪಠ್ಯಗ್ರಂಥಗಳು. ಜನಪದ ಸಾಹಿತ್ಯ ದರ್ಶನ, ಜಾನಪದ ಜಾಣ್ಮೆ, ಜನಪದ ಕಥೆಗಳು ಮೊದಲಾದ ಕೃತಿ ಸೇರಿ ಸುಮಾರು ೮೦ಕ್ಕೂ ಹೆಚ್ಚು ಗ್ರಂಥ ಪ್ರಕಟಣೆ. ಸಂದ ಗೌರವ ಪ್ರಶಸ್ತಿಗಳು-ಹುಬ್ಬಳ್ಳಿ ಮೂರು ಸಾವಿರ ಮಠ ಗ್ರಂಥ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಗೌರವ ಫೆಲೊಶಿಪ್, ಜ.ಚ.ನಿ. ಪ್ರಶಸ್ತಿ, ಫ.ಗು. ಹಳಕಟ್ಟಿ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಕುಷ್ಟಗಿ ತಾಲ್ಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಪ್ರಮುಖವಾದುವುಗಳು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top