ವೀರೇಶ ಗುತ್ತಲ

Home/Birthday/ವೀರೇಶ ಗುತ್ತಲ
Loading Events
This event has passed.

೨೩.೦೪.೧೯೫೬ ಧಾರವಾಡ ಜಿಲ್ಲೆಯಲ್ಲಿ ಸಾಕ್ಷರತಾ ಆಂದೋಲನ ಕೈಗೊಂಡು, ಬೀದಿ ನಾಟಕಗಳ ಮೂಲಕ ಜನತೆಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿರುವ ವೀರೇಶ ಗುತ್ತಲ ರವರು ಹುಟ್ಟಿದ್ದು ಹಾವೇರಿ ತಾಲೂಕಿನ ಕಿತ್ತೂರ ಎಂಬ ಗ್ರಾಮದಲ್ಲಿ. ತಂದೆ ಕೃಷ್ಣಪ್ಪ ಗುತ್ತಲ, ತಾಯಿ ಶಾರದಾಬಾಯಿ, ಬಿ.ಎ. ಪದವೀಧರ ನಾಗಿ ನೌಕರಿಗೆ ಸೇರಿದ್ದು, ಸರಕಾರಿ ಕೃಷಿ ಇಲಾಖೆಗೆ. ಸಮಾನ ಮನಸ್ಕರೊಡನೆ ಕಟ್ಟಿದ್ದು ಸ್ನೇಹಕಲಾವೃಂದ ರಂಗ ಸಂಸ್ಥೆ. ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಿದ ಹಲವಾರು ನಾಟಕಗಳು. ಶ್ರೀರಂಗರ ’ಏನಬೇಡಲಿ ನಿನ್ನ ಬಳಿಗೆ ಬಂದು’ , ಚಂಪಾ ರವರ ಕುಂಟ ಕುಂಟ ಕುರವತ್ತಿ, ಟಿಂಗಂಬುಡ್ಡಣ್ಣ, ಕೊಡೆಗಳು, ರಾಮನಾಥರ ಅರಹಂತ (ಐತಿಹಾಸಿಕ), ಜಿ.ಎಚ್. ರಾಘವೇಂದ್ರರ ಬಂಗಾರದಕೊಡ, ಬೇಲಿ ಮತ್ತು ಹೊಲ, ಸಿದ್ಧನಗೌಡ ಪಾಟೀಲರ ಕಫನ್, ಡಾ. ಬಸವರಾಜ ಕುಂಬಾರರ ಅಯ್ ಮುಂತಾದ ನಾಟಕಗಳಲ್ಲಿ ನಟನೆ ಮತ್ತು ನಿರ್ದೇಶನ. ತಾವೇ ರಚಿಸಿದ ನಾಟಕ ಧರ್ಮಯುದ್ಧ, ಮತ್ತು ಹುಲುಸು ಇವೆರಡು ನಾಟಕಗಳೂ ಪ್ರಕಟಗೊಂಡು ಹಲವಾರು ನಾಟಕ ತಂಡಗಳು ರಂಗ ಪ್ರದರ್ಶನ ಮಾಡಿದ ನಾಟಕಗಳು, ಬಂಡಾಯ ಸಾಹಿತ್ಯ ಸಂಘಟನೆ, ಇಫ್ಟಾ ಸಂಘಟನೆ, ಸಾಹಿತ್ಯ ಮಂಟಪ, ಕನ್ನಡ ಕ್ರಿಯಾ ಸಮಿತಿ ಮುಂತಾದುವುಗಳ ಸಕ್ರಿಯ ಕಾರ್ಯಕರ್ತ. ಬೀದಿ ನಾಟಕಗಳ ಮೂಲಕ ಸಾಕ್ಷರತಾ ಆಂದೋಲನಕ್ಕೆ ಒತ್ತುಕೊಟ್ಟು ಅಭಿನಯಿಸಿದ ನಾಟಕಗಳು. ಹುಚ್ಚ, ಕತ್ತಲಲ್ಲಿ ಕೂಗಪ್ಪ, ಟರ್‌ಬ್ಯಾ, ಕುರಿ ತೋಳಗಳ ನಡುವೆ ಮುಂತಾದುವು. ಅಡ್ಡಗೋಡೆ, ಗಗ್ಗಯ್ಯನ ಗಡಿಬಿಡಿ, ನಾ ಮೆಚ್ಚಿದ ಹುಡುಗಿ, ಸೈರಂದ್ರಿ ಮುಂತಾದ ಹಾಸ್ಯನಾಟಕಗಳ ಅಭಿನಯಕ್ಕೆ ಸಂದ ಜನಮನ್ನಣೆ. ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಜೋಗ್ ಮುಂತಾದೆಡೆ ನಿರಂತರವಾಗಿ ಪ್ರದರ್ಶಿಸಿದ ನಾಟಕಗಳು. ತಬರನ ಕಥೆ, ಮೂಡಲಮನೆ, ಬಾಳ ತಿರುವು, ಬಾಸ್ ಮೊದಲಾದ ಟಿ.ವಿ. ಧಾರಾವಾಹಿಗಳ ನಟ. ಹಾನಗಲ್ಲ ನಾಡಹಬ್ಬದಲ್ಲಿ ಹಾಸ್ಯನಟಪ್ರಶಸ್ತಿ, ಏಕಪಾತ್ರಾಭಿನಯಕ್ಕೆ ರಾಜ್ ಅಭಿಮಾನಿಗಳ ಸಂಘದಿಂದ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ನಟ ವಿಶಾರದ ಬಿರುದು ಮುಂತಾದುವುಗಳು. ಇದೇದಿನಹುಟ್ಟಿದಕಲಾವಿದರು: ಪದ್ಮ. ಟಿ.ಎನ್.- ೧೯೪೯ ರಾಘವೇಂದ್ರ.ಎಂ. – ೧೯೫೮ ಮಾಲಿನಿ – ೧೯೬೪ ಪೂರ್ಣಿಮಾ ಡಿ. ಸಾಗರ್‌ – ೧೯೭೮.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top