ವೈ.ಎಸ್. ಕೃಷ್ಣಮೂರ್ತಿ

Home/Birthday/ವೈ.ಎಸ್. ಕೃಷ್ಣಮೂರ್ತಿ
Loading Events
This event has passed.

೧೬.೦೨.೧೯೪೯ ಗಾಯಕ, ಕವಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ ವೈ.ಎಸ್. ಕೃಷ್ಣಮೂರ್ತಿಯವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಬಂಗಾರು ಪೇಟೆ. ತಂದೆ ವೈ.ಎಸ್. ಶ್ರೀನಿವಾಸ ಅಯ್ಯಂಗಾರ್, ತಾಯಿ ಸುಬ್ಬಲಕ್ಷ್ಮಮ್ಮ. ಓದಿದ್ದು ಎಸ್.ಎಸ್.ಎಲ್.ಸಿ. ವರೆಗೆ. ಉದ್ಯೋಗಕ್ಕಾಗಿ ಸೇರಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗುಮಾಸ್ತರಾಗಿ, ಬಾಲ್ಯದಿಂದಲೂ ಹಾಡುಗಾರಿಕೆಯತ್ತ ಒಲವು. ತಾಯಿ ಹಾಡುತ್ತಿದ್ದ ಹಾಡಿಗೆ ತಲೆದೂಗುತ್ತಾ, ತಾಳ ಹಾಕುತ್ತಾ ಅವರೊಟ್ಟಿಗೆ ದನಿಗೂಡಿಸುತ್ತಿದ್ದ ಹಾಡುಗಳು. ತಾವೂ ಬೆಳೆದು ಇತರರೂ ಬೆಳೆಯಲು ಅನುಕೂಲವಾಗುವಂತೆ ಕಟ್ಟಿದ್ದು ಸುಸ್ವರ ಕಲಾವೃಂದ. ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಕಲಾವೇದಿಕೆ, ವೇದಿಕೆಯಿಂದ ನಡೆಸಲ್ಪಟ್ಟ ನೂರಾರು ಕವಿಗೋಷ್ಠಿಗಳು, ಗಾಯನ ಕಾರ್ಯಕ್ರಮಗಳು, ಸ್ಪರ್ಧೆಗಳು. ಹಲವಾರು ಉದಯೋನ್ಮುಖ ಕಲಾವಿದರ ಬೆಳವಣಿಗೆಗೆ ಕಾರಣವಾದ ವೇದಿಕೆ. ಚಂದಕ್ಕಿ ಮಾಮ, ಬಂತು ಬಂತು ಭಾನುವಾರ ಧ್ವನಿಸುರಳಿಗಳ ಬಿಡುಗಡೆ, ಗಳಿಸಿದ ಅಪಾರ ಜನ ಮೆಚ್ಚುಗೆ. ಆಕಾಶವಾಣಿಗಾಗಿ ಚಿಲಿಚಿಲಿ, ಹಕ್ಕಿ ಬಳಗ, ಬಾಲ ಜಗತ್, ಬಾಲ ಗೋಪಾಲ, ಝೆಂಕಾರ ಮತ್ತು ದೂರದರ್ಶನಕ್ಕಾಗಿ ಚಿತ್ತಾರ, ನಾವು-ನೀವು, ಚಿಣ್ಣರ ಲೋಕ ಮುಂತಾದ ಕಾರ್ಯಕ್ರಮಗಳಿಗೆ ಸಾಹಿತ್ಯ ಹಾಗೂ ಸಂಗೀತದ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ಕಾರ್ಯಕ್ರಮಗಳು. ಹಲವಾರು ಸಾರ್ವಜನಿಕ ಸಂಘಸಂಸ್ಥೆಗಳ ವೇದಿಕೆಗಳಲ್ಲಿ, ದೂರದರ್ಶನ, ಆಕಾಶವಾಣಿಯಲ್ಲಿ ನೀಡಿದ ಲಘುಸಂಗೀತ ಕಾರ್ಯಕ್ರಮ, ಸ್ವರಚಿತ ಇನ್ನೂರಕ್ಕೂ ಹೆಚ್ಚು ಕವಿತೆಗಳಿಗೆ ರಾಗ ಸಂಯೋಜನೆ, ನೂರಾರು ಕವಿಗೋಷ್ಠಿಗಳಲ್ಲಿ ಭಾಗಿ. ಸಂಗೀತದಷ್ಟೆ ಸಾಹಿತ್ಯದಲ್ಲೂ ಮಾಡಿದ ಸಾಧನೆ, ಕಾದಂಬಿನಿ, ಸುಸಂಸ್ಕೃತರು, ಕಂದನ ಕವನಮಾಲಿಕೆ, ಶಿಶುಗೀತ ಗುಚ್ಛ, ನಾಡಗೀತೆಗಳು, ಚಂದಕ್ಕಿಮಾಮ (ಶಿಶುಗೀತೆಗಳು), ಭಕ್ತಿಗೀತ ಮಾಲಿಕೆ, ಭಾವೈಕ್ಯತಾ ಗೀತೆಗಳು, ಅಂತರಂಗದ ಹಾಡು ಮುಂತಾದ ಕವನ ಸಂಗ್ರಹಗಳ ಪ್ರಕಟಣೆ. ನಾಟಕ-ಮಹಾನ್ ಅಶೋಕ ಪ್ರಕಟಿತ ಕೃತಿ. ನಾಡಿನ ಪ್ರಮುಖ ಪತ್ರಿಕೆಗಳಲ್ಲೆಲ್ಲಾ ಕವನಗಳ ಪ್ರಕಟಣೆ. ಹಿಂದಿ ಮತ್ತು ತೆಲುಗಿನಲ್ಲೂ ಕವನ ರಚನೆ. ಕನ್ನಡ ರಕ್ಷಣಾ ಬಳಗದವರಿಂದ ಕವಿರತ್ನ, ಕನ್ನಡ ಅಭಿವೃದ್ಧಿ ಬಳಗದವರಿಂದ ಕುವೆಂಪು ಶ್ರೀ, ಅಷ್ಟಗ್ರಾಮ ಸಂಘದಿಂದ ಪುರಸ್ಕಾರ, ಹಲವಾರು ಸಾಂಸ್ಕೃತಿಕ ವೇದಿಕೆಗಳಿಂದ ದೊರೆತ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು : ಅಂಕಯ್ಯ ಎಚ್.ಎಂ. – ೧೯೫೪ ರಾಮಸಿಂಗ್ ಟಿ.ಕೆ. – ೧೯೬೩ * * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top