೧೪.೦೪.೧೯೨೮ ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಂಮಿಶ್ರಣ ಮಾಡಿ ವಿನೂತನ ಶೈಲಿಯನ್ನು ರೂಪಿಸಿದ ಶಂಕರ ಗೌಡರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೆಟ್ಟದೂರು. ಓದಿದ್ದು ಗುಲಬರ್ಗಾ ಸರಕಾರಿ ಪ್ರೌಢಶಾಲೆ. ಮದರಾಸು, ಮುಂಬಯಿ, ಚಿತ್ರಕಲಾ ಶಾಲೆ ಮತ್ತು ವಿಶ್ವಭಾರತಿ ಶಾಂತಿ ನಿಕೇತನದಿಂದ ಕಲಿತದ್ದು ಚಿತ್ರಕಲೆ. ರೇಖಾಚಿತ್ರ, ಜಲವರ್ಣ, ನೆರಳು ಬೆಳಕಿನ ಕಲೆ, ತೈಲವರ್ಣ, ಭಾವಚಿತ್ರ ಮುಂತಾದುವುಗಳಲ್ಲಿ ಸಾಧಿಸಿದ ಅದ್ವಿತೀಯ ಸಾಧನೆ. ೧೪ರ ವಯಸ್ಸಿನಲ್ಲಿಯೇ ಚಿತ್ರಿಸಿದ ಠಾಗೂರ್, ಮಹಾತ್ಮಾಗಾಂಧಿ, ಸುಭಾಷ್ ಚಂದ್ರರ ಭಾವಚಿತ್ರಗಳು. ವಿವಿಧ ಅಕಾಡಮಿ, ಸಂಘ ಸಂಸ್ಥೆಗಳೊಡನೆ ಒಡನಾಟ. ಕಲೆ, ಕೈಗಾರಿಕಾ, ಪರೀಕ್ಷಾ ಮಂಡಲಿ, ಕರ್ನಾಟಕ ವಸ್ತುಚಿತ್ರಕಲಾ ಸಂಗ್ರಹಾಲಯ, ಸ್ವರ-ಸಂಗಮ ಸಂಗೀತ ಶಿಕ್ಷಣ ಸಂಸ್ಥೆ, ಪ್ರಾಣ ಚೈತನ್ಯ ಚಿಕಿತ್ಸಾ ಕೇಂದ್ರ, ಪ್ರಸಾರ ಭಾರತಿ ಸಲಹಾ ಮಂಡಳಿ ಮುಂತಾದುವುಗಳಲ್ಲಿ ಸದಸ್ಯರಾಗಿ, ಸಲಹೆಗಾರರಾಗಿ, ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಆಯುರ್ವೇದ ಚಿಕಿತ್ಸಕರಾಗಿ ಹೃದಯ ಸಂಬಂಧಿ ರೋಗಗಳಿಗೆ ನೀಡಿದ ಚಿಕಿತ್ಸೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿ. ನಿಜಾಮ್ ಆಳ್ವಿಕೆಯ ದಬ್ಬಾಳಿಕೆಯಲ್ಲಿ ಕಾರಾಗೃಹವಾಸ. ವಿದ್ಯಾರ್ಥಿ ದೆಸೆಯಲ್ಲಿಯೇ ನಿಜಾಮರ ವಿರುದ್ಧ ನಡೆಸಿದ ಸಶಸ್ತ್ರ ಹೋರಾಟ. ಕರ್ನಾಟಕದಲ್ಲಿ ಚಿತ್ರಕಲಾ ಮಂಟಪ ಸ್ಥಾಪನೆ. ಹಲವಾರು ಸ್ಥಳಗಳಲ್ಲಿ ಕಲಾ ಪ್ರದರ್ಶನಗಳು. ಕೋಲ್ಕತ್ತಾದ ಯುವಜನ ಮೇಳ, ದೆಹಲಿಯ ಬಿರ್ಲಾ ಭವನ, ಕರ್ನಾಟಕ ಲಲಿತ ಕಲಾ ಅಕಾಡಮಿ, ಗುಲಬರ್ಗಾದ ಖಾಜಾ ಬಂದೆ ನವಾಜ್ ಶಿಕ್ಷಣ ಸಂಸ್ಥೆಯವರು ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗಿ. ಚೀನಾದ ತುನ್-ಹಾಂಗ್ ಗುಹೆಗಳ ಚಿತ್ರದ ಪ್ರತಿರೂಪ ತಯಾರಿಕೆ. ಅಖಿಲ ಭಾರತ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸೊಸೈಟಿ – ದೆಹಲಿ, ಬಸವೇಶ್ವರರ ಎಂಟನೆಯ ಶತಮಾನೋತ್ಸವ ಸಂದರ್ಭ, ಗುಲಬರ್ಗದ ಐಡಿಯಲ್ ಫೈನ್ ಆರ್ಟ್ಸ್ ಸಂಘ, ರಾಯಚೂರಿನಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ಲರಿಂದ, ಭಾರತೀಯ ಮೆಡಿಕಲ್ ಅಸೋಸಿಯೇಷನ್ನಿನವರಿಂದ ಸನ್ಮಾನ. ಕರ್ನಾಟಕ ಲಲಿತ ಕಲಾ ಅಕಾಡಮಿ, ರಾಜ್ಯೋತ್ಸವ ಪ್ರಶಸ್ತಿ, ರಾಯಚೂರು ಜಿಲ್ಲಾ ಗಣರಾಜ್ಯೊತ್ಸವ ಪ್ರಶಸ್ತಿ ಮತ್ತು ಗುಲಬಗಾ ವಿ.ವಿ.ದ ಗೌರವ ಡಾಕ್ಟರೇಟ್ ಪುರಸ್ಕಾರಗಳು ದೊರೆತಿವೆ. ಇದೇದಿನಹುಟ್ಟಿದಕಲಾವಿದರು ಎಚ್.ಎಸ್. ಇನಾಮತಿ : ೧೯೦೦ ಕಮಲಾಕ್ಷ. ಪಿ. – ೧೯೪೭ ಪ್ರತಿಭಾ ಟಿ.ಎಸ್. – ೧೯೬೫
* * *