ಶಂಕರ ಮೊಕಾಶಿ ಪುಣೇಕರ

Home/Birthday/ಶಂಕರ ಮೊಕಾಶಿ ಪುಣೇಕರ
Loading Events
This event has passed.

೮-೫-೧೯೨೮ ೧೧-೮-೨೦೦೪ ಇಂಗ್ಲಿಷ್, ಕನ್ನಡ, ಸಂಸ್ಕೃತ ಭಾಷೆಯ ವಿದ್ವಾಂಸ, ಸಂಗೀತ ವಿಮರ್ಶಕರಾದ ಪುಣೇಕರರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ರಾವಜಿರಾವ, ತಾಯಿ ಸುಂದರಾಬಾಯಿ. ವಿದ್ಯಾಭ್ಯಾಸ ನಡೆದುದೆಲ್ಲ ಹುಟ್ಟಿದೂರಿನಲ್ಲೇ. ಎನ್.ಕೆ. ಕುಲಕರ್ಣಿ, ಬಿ.ಎಂ.ಶ್ರೀ, ಪ್ರೊ. ಆರ್ಮೆಂಡೋ ಮೆನೆಜಿಸ್, ಗೋಕಾಕ್ ಮುಂತಾದವರ ಸಂಪರ್ಕದಿಂದ ಸಾಹಿತ್ಯದೆಡೆಗೆ ಸೆಳೆತ. ಬಿ.ಎ. ಪದವಿ ಗಳಿಸಿದ ನಂತರ ಉದ್ಯೋಗ. ಬಿಜಾಪುರ, ಕಾರವಾರ, ಧಾರವಾಡಗಳಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭ. ಪುನಃ ಓದಿನೆಡೆಗೆ ಹೊರಳಿ ಗಳಿಸಿದ ಎಂ.ಎ. ಪದವಿ. ಇಂಗ್ಲಿಷ್ ಕವಿ ಡಬ್ಲ್ಯು.ಟಿ. ಯೇಟ್ಸ್‌ನ ಕೊನೆಗಾಲದ ಕಾವ್ಯ ಕುರಿತು ರಚಿಸಿದ ಎರಡು ಗ್ರಂಥಗಳು. THE LATER PHASE IN THE DEVELOPMENT OF W.B.YEATS ಇವರಿಗೆ ಪಿಎಚ್.ಡಿ. ತಂದುಕೊಟ್ಟ ಮಹಾಪ್ರಬಂಧ. ಗಂಗವ್ವ-ಗಂಗಾಮಾಯಿ ಮೊಕಾಶಿಯವರಿಗೆ ಕೀರ್ತಿ ತಂದ ಕಾದಂಬರಿ. ಚಲನಚಿತ್ರವಾಗಿ, ಇವರು ರಚಿಸಿದ ಸಂಭಾಷಣೆಗೆ ಪ್ರಶಸ್ತಿ. ‘ನಟನಾರಾಯಣಿ’ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನಿತ ಕೃತಿ. ‘ಅವಧೇಶ್ವರಿ’- ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪಡೆದ ಕೃತಿ. ಇಂಗ್ಲಿಷ್‌ನಲ್ಲೂ ಕೃತಿ ರಚನೆ. ದಿ ಕ್ಯಾಪ್ಟಿವ್, ದಿ ಪ್ರಿಟೆಂಡರ್, ಎಪಿಸಲ್ ಟು ಡೇವಿಡ್‌ಮಕ್ ಕುಚಿಯಾನ್, ದಿ ಟೆಂಟ್ ಪೋಲ್, ಪ್ಯಾರಾಡೈಮ್ಸ್-ಕವನ ಸಂಕಲನಗಳು. ಋತು ಸಂಹಾರ, ಅವಧೂತ ಗೀತೆ-ಇಂಗ್ಲಿಷಿಗೆ ಭಾಷಾಂತರ. ಗೋಕಾಕರನ್ನು ಕುರಿತ ಇಂಗ್ಲಿಷ್ ಕೃತಿ ರಚನೆ. ಕುವೆಂಪು ಕುರಿತು ‘ಹಮಿಂಗ್ ಬರ್ಡ್’ ಇಂಗ್ಲಿಷ್ ಕೃತಿ ಪ್ರಕಟಣೆ. ವಿಮರ್ಶಾ ಗ್ರಂಥಗಳು-‘ಪಾಶ್ಚಾತ್ಯ ವಿಮರ್ಶಾ ಇತಿಹಾಸ’, ‘ಶ್ರೀ ಬೇಂದ್ರೆಯವರ ಕಾವ್ಯ ಮೀಮಾಂಸೆ’ ಮಹತ್ವದ ಗ್ರಂಥಗಳು. ಸಾಹಿತ್ಯ ಮತ್ತು ಅಭಿರುಚಿ-ಲೇಖನ ಸಂಗ್ರಹ. ಮಾಯಿಯ ಮೂರು ಮುಖಗಳು-ಕವನ ಸಂಕಲನ. ಡೆರಿಕ್ ಡಿಸೋಜ ಮತ್ತು ಇತರ ಕಥೆಗಳು-ಕಥಾ ಸಂಕಲನ. ವಿಪರ‍್ಯಾಸ ವಿನೋದ-ವಿಡಂಬನೆ. ಶ್ರೀ ಸಂಗೀತ ನಾಟ್ಯನಾಂದೀ-ಹಾಸ್ಯನಾಟಕ. ರಾಮಾಯಣ ದರ್ಶನಂ-ಇಂಗ್ಲಿಷಿಗೆ ಭಾಷಾಂತರಿಸಿದ ಹಿರಿಮೆ, ಹಲವಾರು ಕೃತಿಗಳ ರಚನೆ. ಪ್ರಶಸ್ತಿ ಗೌರವಗಳು-ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಚಲನಚಿತ್ರ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಚಿನ್ನದ ಪದಕದ ಗೌರವ, ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಹಿತ್ಯ ಬಹುಮಾನ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಜಿ.ಎಸ್. ಆಮೂರ – ೧೯೨೫ ರಘುಸುತ – ೧೯೩೯-೨೩.೧.೨೦೦೩ ಎಚ್.ಜೆ. ಲಕ್ಕಪ್ಪಗೌಡ – ೧೯೩೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top