ಶಂಬಾ ಜೋಶಿ

Home/Birthday/ಶಂಬಾ ಜೋಶಿ
Loading Events
This event has passed.

೪-೧-೧೮೯೬ ಶಂಕರ ಬಾಳ ದೀಕ್ಷಿತ ಜೋಶಿಯವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲ ಹೊಸೂರು. ಬಾಲ್ಯದ ವಿದ್ಯಾಭ್ಯಾಸ ಗುರ್ಲ ಹೊಸೂರು. ಮಲಪ್ರಭ ಮಹಾಪೂರದಿಂದ ಊರು ನೀರಿನಿಂದಾವೃತ, ಚಿಕ್ಕಂದಿನಲ್ಲಿ ತಂದೆಯ ಸಾವು. ಧೃತಿಗೆಟ್ಟ ಬದುಕು, ಅಣ್ಣನ ಆಶ್ರಯ, ಪುಣೆಗೆ ಪಯಣ, ಪುರೋಹಿತನಾಗಲು ಅಣ್ಣನ ಉಪದೇಶ, ಓದಿನ ಹಠದಿಂದ ಪುನಃ ಧಾರವಾಡಕ್ಕೆ. ಟ್ರೈನಿಂಗ್ ಕಾಲೇಜಿನಲ್ಲಿ ರ್ಯಾಂಕ ಗಿಟ್ಟಿಸಿದ ವಿದ್ಯಾರ್ಥಿ. ಚಿಕ್ಕೋಡಿಯಲ್ಲಿ ಶಿಕ್ಷಕ ವೃತ್ತಿ. ಚಿಕ್ಕೋಡಿಯಿಂದ ಉಗರಗೋಳಕ್ಕೆ ವರ್ಗಾವಣೆ. ಓದಿನ ಹುಮ್ಮಸ್ಸು. ಮಹಾಕಾವ್ಯಗಳ ಅಧ್ಯಯನ, ಪಡೆನುಡಿಗಳಲ್ಲಿ ಆಸಕ್ತಿ, ಗೋವಿಂದ ಚುಳಕಿಯವರ ಸಹವಾಸ. ಓದಿನ ಹಂಬಲ. ಪುನಃ ಧಾರವಾಡಕ್ಕೆ ಪ್ರಯಾಣ. ಲೋಕಮಾನ್ಯ ತಿಲಕರ ದರ್ಶನ. ದೇಶಸೇವೆಯ ಹುಚ್ಚು. ಖಾದಿ, ಅಸ್ಪೃಶ್ಯೋದ್ಧಾರದ ಬಗ್ಗೆ ಪತ್ರಿಕೆಗಳಿಗೆ ಲೇಖನ. ಕರ್ಮವೀರ ಪತ್ರಿಕೆಯ ಸಂಪಾದಕತ್ವ. ಒಂದೆಡೆ ನಿಲ್ಲದ ಜೀವ, ಅಲೆದಾಟ. ಕರ್ನಾಟಕ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿ. ಕನ್ನಡ, ಮರಾಠಿ ಭಾಷೆಗಳಲ್ಲಿ ಅಧ್ಯಯನ-ಬರವಣಿಗೆ. ಕನ್ನಡ ಸಂಸ್ಕೃತಿ ಇತಿಹಾಸ, ಭಾಷೆ ಅಧ್ಯಯನಕ್ಕೆ ಮೊದಲ ಪ್ರಾಶಸ್ತ್ಯ.. ೧೯೧೫ರಿಂದ ೧೯೩೦ರವರೆಗೆ ಸಂಸ್ಕೃತ ಇಂಗ್ಲಿಷ್ ಅಧ್ಯಯನ. ೧೯೩೦-೬೯ರವರೆಗೆ ಅವಿಶ್ರಾಂತ ಬರವಣಿಗೆ. ಕರ್ನಾಟಕ ಇತಿಹಾಸ, ಕನ್ನಡ ಭಾಷಾಶಾಸ್ತ್ರ, ಜಾನಪದ ಸಾಹಿತ್ಯ, ಧಾರ್ಮಿಕ ಗ್ರಂಥಗಳ ಜೊತೆಗೆ ಹಲವಾರು ಗ್ರಂಥಗಳ ಅನುವಾದ. ಕಣ್ಮರೆಯಾದ ಕನ್ನಡ, ಮಹಾರಾಷ್ಟ್ರದ ಮೂಲ, ಕನ್ನಡದ ನೆಲೆ, ಕಂನುಡಿಯ ಹುಟ್ಟು, ಮಕ್ಕಳ ಒಡಪುಗಳು, ಸೌಂದರ್ಯ ವಿಚಾರ, ಸಾತತ್ಯ ಮತ್ತು ಸತ್ಯ, ಭಗವದ್‌ಗೀತೆ, ಶಿವರಹಸ್ಯ, ಹಾಲುಮತ ದರ್ಶನ, ಋಗ್ವೇದ ಸಾರ-ನಾಗ ಪ್ರತಿಮಾ ವಿಚಾರ, ಬುಧನ ಜಾತಕ ಮುಂತಾದ ಕೃತಿ ರಚನೆ. ಅರಸಿಬಂದ ಪ್ರಶಸ್ತಿಗಳು. ೧೯೮೧ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್. ಸದಾ ಅಧ್ಯಯನ ನಿರತರಾಗಿದ್ದ ಶಂಬಾರವರಿಗೆ ಅರ್ಪಿಸಿದ ಗೌರವ ಗ್ರಂಥ ‘ಅಧ್ಯಯನ’ ಇವರ ಕಣ್ಮರೆಯ ನಂತರ (೨೮.೯.೧೯೯೧) ಅರ್ಪಿಸಿದ ಗ್ರಂಥ ‘ಶಂಬಾ ಸ್ಮೃತಿ ಗಂಧ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಹೊ. ಶ್ರೀನಿವಾಸಯ್ಯ – ೧೯೨೫ ಈಶ್ವರ ಕಮ್ಮಾರ – ೧೯೩೩ ಭರತೇಶ – ೧೯೩೩ ಧೂಪದ ಎಂ.ಟಿ. – ೧೯೩೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top