೧-೫-೧೯೪೮ ಕವಯಿತ್ರಿ ಶಶಿಕಲಾರವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಸಿಂದಗಿ. ತಂದೆ ಸಿದ್ಧಲಿಂಗಯ್ಯ, ತಾಯಿ ಅನ್ನಪೂರ್ಣಾದೇವಿ. ಪ್ರಾಥಮಿಕ ವಿದ್ಯಾಭ್ಯಾಸ ಸಿಂದಗಿಯಲ್ಲಿ. ಕಾಲೇಜು ಕಲಿತದ್ದು ಬಿಜಾಪುರ, ಗುಲಬರ್ಗಾದಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ನಂತರ ವೃತ್ತಿ ಜೀವನ ಆರಂಭಿಸಿದ್ದು ಸಿಂದಗಿ ಜ್ಯೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ನಂತರ ಬೀದರ್ ಅಕ್ಕಮಹಾದೇವಿ ಪದವಿ ಕಾಲೇಜು, ಚಿಟಗುಪ್ಪ ಸರಕಾರಿ ಕಾಲೇಜು, ಗೋಕಾಕ್ ಕಾಲೇಜು ಬೆಳಗಾವಿ, ಕೆಲಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ. ಯಲಹಂಕ ಸರಕಾರಿ ಜ್ಯೂ. ಕಾಲೇಜು, ಬೆಂಗಳೂರಿನ ವಾಣಿವಿಲಾಸ ಕಾಲೇಜು, ಚಿಕ್ಕಮಗಳೂರಿನ ಸರಕಾರಿ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ, ಇದೀಗ ಶಹಾಪೂರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಣೆ. ಕೆಲಕಾಲ ಧಾರವಾಡದ ಪತ್ರಾಗಾರ ಇಲಾಖೆಯಲ್ಲಿ ಪತ್ರಪಾಲಕರಾಗಿ, ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯೆಯಾಗಿ, ಧಾರಾವಾಹಿ ಮತ್ತು ಚಲನಚಿತ್ರಗಳ ಆಯ್ಕೆ ಸಮಿತಿ, ಬೆಂಗಳೂರು ದೂರದರ್ಶನದ ಸದಸ್ಯೆಯಾಗಿ, ಪದವಿ ಪೂರ್ವ ಶಿಕ್ಷಣಾ ಮಂಡಳಿ, ಬೆಂಗಳೂರಿನ ಕನ್ನಡ ಪಠ್ಯ ಪುಸ್ತಕ ಸಮಿತಿಯ ಸದಸ್ಯೆಯಾಗಿ, ಅನೇಕ ಸಂಘ ಸಂಸ್ಥೆಗಳ ಧರ್ಮದರ್ಶಿಯಾಗಿ ಜವಾಬ್ದಾರಿಯುತ ಹೊಣೆ. ರಚಿಸಿದ ಕೃತಿಗಳು. ಕಾವ್ಯ-ಗುಬ್ಬಿಮನೆ, ಪ್ರಶ್ನೆ, ಜೀವ-ಸಾವುಗಳ ನಡುವೆ, ಹೆಂಗ ಹೇಳಲೆ ಗೆಳತಿ, ಮಧ್ಯಂತರದ ಒಂದು ಗದ್ಯಗೀತೆ, ಬಟ್ಟ ಬಯಲಲ್ಲಿ ನಿಂತು, ಒಂಚೂರು ನೆಲ-ಒಂಚೂರು ಮುಗಿಲು. ವ್ಯಕ್ತಿಚಿತ್ರ-ಶ್ರೀ ಗುರುಸಿದ್ದೇಶ್ವರ ಚರಿತ್ರೆ, ಅಪ್ಪ ಮತ್ತು ಮಣ್ಣು, ಕೋಡಿಕೊಪ್ಪ ಮಠದ ಬಸವರಾಜ ಶಾಸ್ತ್ರಿಗಳು. ಸಂಪಾದಿತ-ಆಧುನಿಕ ಕನ್ನಡ ಕವನಗಳು, ಸಂವೇದನೆಗಳು, ಪ್ರಣಯಿನಿ, ರಾಘವಾಂಕ, ಗಾಂ ಎಂಬ ಹೆಸರು, ಕುಂಕುಮ ಭೂಮಿ, ಕುಸುಮಾಂಜಲಿ, ಜೊತೆಗೆ ಹಲವಾರು ಸಂಭಾವನೆ ಗ್ರಂಥಗಳಿಗೆ ಬರೆದ ಲೇಖನಗಳು. ಮುನ್ನುಡಿ, ಬೆನ್ನುಡಿ ಪ್ರಸ್ತಾವನೆ. ವಿಚಾರ ಸಂಕಿರಣಗಳಲ್ಲಿ ಕಾವ್ಯ, ಕಮ್ಮಟ, ಕವಿಗೋಷ್ಠಿಗಳಲ್ಲಿ ಭಾಗಿ. ಆಕಾಶವಾಣಿ, ದೂರದರ್ಶನಗಳಲ್ಲಿ ಹಾಸ್ಯ ಕವಿಗೋಷ್ಠಿ, ಸಂವಾದ, ಪರಿಚಯ, ಚಿಂತನ ಕಾರ್ಯಕ್ರಮಗಳು. ಕಥೆ, ಕವಿತೆಗಳು ಹಿಂದಿ, ಉರ್ದು, ಮಲೆಯಾಳಂ ಭಾಷೆಗೆ ಅನುವಾದ. ಇತರ ಭಾಷೆಯಿಂದ ಕನ್ನಡಕ್ಕೆ ಇವರ ಭಾಷಾಂತರ. ಬೆಂಗಳೂರು, ಕರ್ನಾಟಕ, ಮಂಗಳೂರು, ಮಹಿಳಾ ವಿಶ್ವವಿದ್ಯಾಲಯ ಮುಂತಾದ ವಿ.ವಿ.ಗಳ ಪಿ.ಯು.ಸಿ. ಬಿ.ಎಸ್ಸಿ. ಬಿ.ಎ. ತರಗತಿಗಳಿಗೆ ಪಠ್ಯಪುಸ್ತಕಗಳಿಗೆ ಕಾವ್ಯ, ಗದ್ಯ ಮುಂತಾದವುಗಳ ಆಯ್ಕೆ. ಸಂದ ಗೌರವ ಪ್ರಶಸ್ತಿಗಳು-ಬಿ.ಸರೋಜದೇವಿ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದವು. ಇದೇ ದಿನ ಹುಟ್ಟಿದ ಸಾಹಿತಿಗಳು : ರಾಮಕೃಷ್ಣ ಎ.ಎಸ್ – ೧೯೨೫ ಚಿತ್ರಲೇಖ – ೧೯೪೫ ಸರಸ್ವತಿ ಚಿಮ್ಮಲಗಿ – ೧೯೪೮

