ಶಾಂತಕವಿ

Home/Birthday/ಶಾಂತಕವಿ
Loading Events
This event has passed.

೧೫-೧-೧೮೫೬ ‘ಶಾಂತ ಕವಿ’ ಕಾವ್ಯನಾಮದ ಸಕ್ಕರಿ ಬಾಳಾಚಾರ‍್ಯರು ಹುಟ್ಟಿದ್ದು  ಸಾತೇನಹಳ್ಳಿ. ತಂದೆ ರಾಜಗೋಪಾಲಾಚಾರ್ಯರಿಗೆ ಸಂಸ್ಕೃತ ಕಲಿಸುವಾಸೆ. ಶಾಂತಕವಿಗಳು ಅಯ್ಯನವರ ಶಾಲೆಯಲ್ಲಿ ಕಲಿತದ್ದು ಕನ್ನಡ. ಬಾಲ್ಯದಲ್ಲೇ ಜೈಮಿನಿ ಭಾರತ, ಮಹಾಭಾರತ ಪಠಣ. ತಾಯಿಯಿಂದ ಕಲಿತ ದಾಸರ ಪದಗಳು. ಧಾರ್ಮಿಕ ಕಾವ್ಯ, ದಾಸರ ಪದಗಳಿಂದ ಬಂದ ಸಾಹಿತ್ಯ ಪ್ರಜ್ಞೆ. ೧೪ರ ಹರೆಯದಲ್ಲೇ ರಾಣಿ ಬೆನ್ನೂರಿನಲ್ಲಿ ಮಾಸ್ತರಿಕೆ ಪ್ರಾರಂಭ. ನಿಷ್ಟಾವಂತರಾದ ಇವರಿಗೆ ಸಹೋದ್ಯೋಗಿಗಳಿಂದ ಕಿರುಕುಳ ಧಾರವಾಡದ ಜಿಲ್ಲೆಯಲ್ಲೆಲ್ಲಾ ವರ್ಗದ ಓಡಾಟ. ಹುಟ್ಟಿನಿಂದಲೇ ಬಂದ ನಾಟಕ ಕಲೆಯ ಬಗ್ಗೆ ಆಸ್ಥೆ. ಮೊದಲ ನಾಟಕ ‘ಉಷಾಹರಣ’ ಬರೆದದ್ದು ಹದಿನೇಳರ ಹರೆಯದಲ್ಲಿ. ಅರವತ್ತು ಮೂರಕ್ಕೂ ಹೆಚ್ಚು ನಾಟಕ, ಕಾವ್ಯಗಳ ರಚನೆ. ಮುಳಗುಂದದಲ್ಲಿ ಒಮ್ಮೆ  ಮರಾಠಿ ಶ್ಲೋಕ, ಹಾಡು ಉದ್ಧರಿಸಿ ಕೀರ್ತನೆ ಮಾಡಿದ ಶಾಸ್ತ್ರಿಯೊಬ್ಬರಿಂದ ಸವಾಲು. ‘ಮುಕುಂದ ದಾನಾಮೃತ’ ಕನ್ನಡದ ಕೃತಿ ರಚಿಸಿದ ಕೀರ್ತಿ. ಕನ್ನಡ ನಾಟಕ ಬಾವುಟ ಹಾರಿಸುವ ಉದ್ದೇಶದಿಂದ ಕಟ್ಟಿದ ನಾಟಕ ಮೇಳ. ಉಷಾಹರಣ ನಾಟಕ ಪ್ರದರ್ಶನ. ನಾಟಕದ ಪ್ರಥಮ ಗುರುಪಟ್ಟ. ಗದುಗಿನ ನಂಟು ಬೆಳೆಸಿದ ಶಾಂತಕವಿಗಳು ೧೮೭೪ರಲ್ಲಿ ಕರ್ನಾಟಕ ನಾಟಕ ಕಂಪನಿ ಕಟ್ಟಿದರು. ವತ್ಸಲಾಹರಣ, ಸುಧನ್ವವಧೆ, ಕೀಚಕವಧೆ, ಸುಂದರೋಪಸುಂದವಧೆ, ವಾಸಪ್ಪ ನಾಯಕನ ಫಾರ್ಸು ಮುಂತಾದ ನಾಟಕಗಳ ರಚನೆ. ಹಳೆ ಕಾವ್ಯ ಪರಂಪರೆಯ ಜೊತೆಗೆ ಆಧುನಿಕ ಭಾವಗೀತೆ ರಚನೆ. ಧಾರವಾಡದ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ಮುಗ್ಗಟ್ಟಿಗಾಗಿ ಕನ್ನಡದ ದಾಸಯ್ಯ ಹಾಡುಕಟ್ಟಿ ಹಾಡಿ-ಬೇಡಿ ಹಣ ಸಂಗ್ರಹ. ‘ರಕ್ಷಿಸು ಕರ್ನಾಟಕದೇವಿ’ ಮುಂಬೈ ಕರ್ನಾಟಕದ ನಾಡಗೀತೆಯಾಗಿ ಪ್ರಸಿದ್ಧಿ. ಸ್ವತಂತ್ರ ಕೃತಿಗಳ ಜೊತೆಗೆ ಕೆಲವು ಭಾಷಾಂತರಗಳು. ಜಯದೇವ ಕವಿಯ ಗೀತಗೋವಿಂದ ಆಧಾರಿತ ವಿರಹತರಂಗ; ಕಾಳಿದಾಸನ ಮೇಘದೂತ ಮತ್ತು ಪಾರ್ವತಿ ಪರಿಣಯದ ಭಾಷಾಂತರ. ರಚಿಸಿದ ಕೃತಿಗಳು ಸುಮಾರು ೭೦. ಹೋದೆಡೆಯಲ್ಲೆಲ್ಲಾ ಹೆಸರಿಗೆ ತಕ್ಕಂತೆ ಸಕ್ಕರೆ ಉಣಿಸಿದ ಕವಿ ಕಣ್ಮರೆಯಾದದ್ದು ೧೯೨೦ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಆರ್.ಸಿ. ಹಿರೇಮಠ – ೧೯೨೦-೩.೧೧.೧೯೯೮ ಗೋವಿಂದರಾಜು  – ೧೯೫೩ ಮಾನಸ – ೧೯೬೨ ಮಂದಾಕಿನಿ ನರಸಿಂಗರಾವ್-೧೯೩೫-೧೮.೯.೦೧

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top