ಶಾಂತಾ ಜಗದೀಶ್

Home/Birthday/ಶಾಂತಾ ಜಗದೀಶ್
Loading Events
This event has passed.

೨೯-೧-೧೯೪೯ ಗಾಯಕಿ, ಕವಯಿತ್ರಿ, ಸಮಾಜ ಸೇವಕಿ ಶಾಂತಾ ಜಗದೀಶ್ ಹುಟ್ಟಿದ್ದು ಮೈಸೂರಿನಲ್ಲಿ . ತಂದೆ ಬಿ.ಕೆ. ರಾಜಶೇಖರಯ್ಯ, ತಾಯಿ ಆರ್. ಸರ್ವಮಂಗಳಮ್ಮ. ವಿದ್ಯಾಭ್ಯಾಸವೆಲ್ಲವೂ ಮೈಸೂರಿನಲ್ಲೆ. ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಪದವಿ. ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಡಿಪ್ಲೊಮ ಇನ್ ಕನ್ನಡ ಮತ್ತು ಎಂ.ಎ. ಪದವಿ. ಜೆ.ಎಸ್.ಎಸ್. ಫಾರ‍್ಮಸಿ ಕಾಲೇಜಿನಿಂದ ಡಿಪ್ಲೊಮ ಇನ್ ಫಾರ‍್ಮಸಿ. ಆಕಾಶವಾಣಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೋಂದಾಯಿತ ಕಲಾವಿದೆ. ಪ್ರಾಥಮಿಕ ಶಾಲೆಯಲ್ಲಿ ತಿರುಕನ ಕನಸು ಪದ್ಯಕ್ಕೆ ರಾಗ ಸಂಯೋಜನೆ ಮಾಡಿ ಉಪಾಧ್ಯಾಯರಿಂದ ಪ್ರಶಂಸೆ. ಸಂಗೀತ ಕಾರ‍್ಯಕ್ರಮಗಳಂತೆ ಪೂರ್ಣ ಪ್ರಮಾಣದಲ್ಲಿ ವಚನಗಳನ್ನು ಹಾಡಿದ ದಾಖಲೆ. ಹಳಗನ್ನಡ ಪದ್ಯಗಳು, ಶಾಸನ ಪದ್ಯಗಳಿಗೂ ರಾಗ ಸಂಯೋಜನೆ. ವೇದಿಕೆಗಳಲ್ಲಿ  ವಾಚಿಸಿದ ಕವನಗಳಿಗೆ ಅಲ್ಲೇ ರಾಗ ಸಂಯೋಜನೆ. ಭಾವ ಸಂಪದ ವೇದಿಕೆಯ ಪ್ರಾರಂಭ. ಉದಯೋನ್ಮುಖರಿಗೆ ಅವಕಾಶ. ಅಭಿನವನಾದ-ಭಾವಗೀತೆಗಳು ; ಈಶ ಸುಧಾ ಭಕ್ತಿಗೀತೆಗಳು ; ಕವನೋತ್ಸವ-ಭಾವಗೀತೆಗಳು ; ಹೂಮಾಲೆ-ಕವಯಿತ್ರಿಯರ ರಚನೆಗಳು ; ಬೆಳಕಿನರಾಗ-ಭಾವಗೀತೆಗಳು ; ಸಿರಿಗನ್ನಡಂ ಗೆಲ್ಗೆ-ಕನ್ನಡ ನುಡಿಗೀತೆಗಳು ಧ್ವನಿ ಸುರುಳಿಗಳು ಭಾವಸಂಪದದ ಕೊಡುಗೆ. ಕುವೆಂಪು, ಬೇಂದ್ರೆ, ಪುತಿನ, ಜಿ.ಎಸ್.ಎಸ್., ಗೋಕಾಕ್, ಅಡಿಗ ಮುಂತಾದವರ ಕವನಗಳಿಗೆ ರಾಗ ಸಂಯೋಜನೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮ ವಚನಗಳ ಸುಶ್ರಾವ್ಯಗಾಯನ. ಜೊತೆಗೆ ಸಣ್ಣಕತೆಗಳು, ಲೇಖನಗಳು, ಕವಿತೆಗಳು. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ಭಾವಸಂಪದ ಸಂಸ್ಥೆಯಿಂದ ಹಲವಾರು ಕೃತಿ ಪ್ರಕಟಣೆ. ನಾನು-ನೀನು (ಕೊ.ಸು.ನರಸಿಂಹಮೂರ್ತಿ) ; ಭಾವದೀಪ (ದಾಕ್ಷಾಯಿಣಿರಾವ್) ; ಗುಚ್ಛ  (ಸುಮಿತ್ರ) ; ಗರಿಗೆದರಿದ ಗೀತೆ (ಮಾ.ವೆಂ.ಶ್ರೀನಾಥ್) ; ಚಿತ್ರಾಂಜಲಿ (ಶ್ಯಾಮಲಾಮೂರ್ತಿ) ; ಕುಸುಮಂಜಲಿ (ಎ. ಸತ್ಯವತಿ); ಅಮೃತಕಂಬನಿ (ಭುಜಂಗಾಚಾರ‍್ಯ) ; ಧ್ವನಿ (ನೀಲಾಂಬಿಕೆ) ಮುಂತಾದ ಇತರರ ಕವನ ಸಂಕಲನಗಳು. ಎರಡು ಸೆಳೆ, ಸ್ಪಂದನ, ಮೌಲ್ಯ ಸ್ವಂತ ಕೃತಿ ಪ್ರಕಟಣೆ. ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ತು, ಕುವೆಂಪು ಟ್ರಸ್ಟ್, ಜವಹರ್ ಟ್ರಸ್ಟ್, ತ್ರಿವೇಣಿ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ, ಗಾನಸುಧಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು. ಗೀತೆರಚನೆ ಗಾಯನದ ಜೊತೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ವಿನೀತಾ ರಾಮರಾವ್ – ೧೯೦೫ ವಿಜಯ ಶ್ರೀಧರ್ – ೧೯೪೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top