೨೩.೦೯.೧೯೩೮ ಸುಮಾರು ಮೂರು ತಲೆಮಾರಿಗೂ ಹೆಚ್ಚು ಸಂಗೀತ ವಿದ್ವಾಂಸರಿಂದ ಕೂಡಿದ ಮನೆತನದಲ್ಲಿ ಶಾಂತಾ ನರಸಿಂಹನ್ ಹುಟ್ಟಿದ್ದು ಬೆಂಗಳೂರು. ತಂದೆ ಬಿ. ಜನಾರ್ದನ ಅಯ್ಯಂಗಾರ್ ವೀಣಾ ವಿದ್ವಾಂಸರು. ತಾಯಿ ಪದ್ಮಾವತಮ್ಮ. ಎಂಟನೆಯ ವಯಸ್ಸಿನಿಂದಲೇ ತಂದೆಯಿಂದ ವೀಣೆಯ ಪಾಠ. ಎಂ. ಆರ್. ಶಂಕರಮೂರ್ತಿ ಮತ್ತು ಆರ್.ಕೆ. ಶ್ರೀಕಂಠನ್ರವರಿಂದ ಹಾಡುಗಾರಿಕೆಯ ಶಿಕ್ಷಣ. ಕನಕಪುರಂದರ ಪ್ರಶಸ್ತಿ ವಿಜೇತರಾದ ಅಣ್ಣ, ಎಂ.ಜೆ.ಶ್ರೀನಿವಾಸ ಅಯ್ಯಂಗಾರ್ಯರಿಂದ ವೀಣೆಯ ಕಲಿಕೆ. ೧೯೬೪ರಿಂದಲೂ ಬೆಂಗಳೂರು ಆಕಾಶವಾಣಿಯ ‘ಎ’ ಗ್ರೇಡ್ಕಲಾವಿದೆಯಾಗಿ ದಕ್ಷಿಣ ವಲಯ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗಿ. ಅನೇಕ ಬಾರಿ ದೂರದರ್ಶನದಿಂದಲೂ ಕಾರ್ಯಕ್ರಮ ಪ್ರಸಾರ. ಕರ್ನಾಟಕ ಸರಕಾರದ ಹಲವಾರು ಸಂಗೀತ ಕಚೇರಿಗಳಲ್ಲಿ ಹಾಡುಗಾರಿಕೆ. ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್ತು. ಶ್ರೀ ಕೃಷ್ಣ ಗಾನಸಭಾ, ರಾಮೋತ್ಸವ ಸಮಿತಿ ಅಲ್ಲದೆ ಶಿವಮೊಗ್ಗ, ಮೈಸೂರು, ದಾವಣಗೆರೆ, ಧರ್ಮಸ್ಥಳ ಸಂಗೀತೋತ್ಸವ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯು ಏರ್ಪಡಿಸಿದ್ದ ಬಿಜಾಪುರ ಸಂಗೀತೋತ್ಸವದಲ್ಲಿ ನಡೆಸಿಕೊಟ್ಟ ಕಚೇರಿ. ಚೆನ್ನೈನ ಮ್ಯೂಸಿಕ್ ಅಕಾಡಮಿ, ಕೊಯಮತ್ತೂರು, ತಿರುವನಂತಪುರದಲ್ಲಿ ಪ್ರಮುಖ ಕಾರ್ಯಕ್ರಮಗಳು. ಭಾರತೀಯ ವಿದ್ಯಾಭವನ ಲಂಡನ್, ತೆಲುಗು ಅಸೋಸಿಯೇಷನ್, ಲಂಡನ್, ಛೇಂಬರ್ ಆಫ್ ಮ್ಯೂಸಿಕ್ ಕನ್ಸರ್ಟ್ಸ್ ಮ್ಯಾಂಚೆಸ್ಟರ್; ನ್ಯೂಯಾರ್ಕಿನ ಕನ್ನಡ ಕೂಟ ಮುಂತಾದೆಡೆ ನೀಡಿದ ಸಂಗೀತ ಕಚೇರಿಗಳು. ಶ್ರೀ ತ್ಯಾಗರಾಜ ಭಜನ ಸಭಾದಿಂದ ಕಲಾ ಜ್ಯೋತಿ ಪ್ರಶಸ್ತಿ, ೨೦೦೪ ರಲ್ಲಿ ಕರ್ನಾಟಕ ಗಾನ ಕಲಾ ಪರಷತ್ತಿನಿಂದ ಪ್ರಶಸ್ತಿ, ೨೦೦೫ ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ಇದೇ ದಿನ ಹುಟ್ಟಿದ ಕಲಾವಿದರು ರೇವತಿ ಮೂರ್ತಿ – ೧೯೪೯ ಸಿದ್ಧರಾಜು ವಿ. – ೧೯೭೬
* * *