ಶೀಲಾಗೌಡ

Home/Birthday/ಶೀಲಾಗೌಡ
Loading Events

೦೯.೦೮.೧೯೫೭ ಚಿತ್ರಕಲೆಯಲ್ಲಿನ ಅಭಿವ್ಯಕ್ತಿಗಾಗಿ ಹೊಸ ಹೊಸ ಆಯಾಮಗಳನ್ನು ಶೋಧಿಸುತ್ತಿರುವ ಶೀಲಾಗೌಡರು ಹುಟ್ಟಿದ್ದು ಭದ್ರಾವತಿ. ತಂದೆ ಎಚ್‌.ಎಲ್‌. ನಾಗೇಗೌಡ, ತಾಯಿ ಲಕ್ಷ್ಮಮ್ಮ.  ಕೆನ್‌ಕಲಾಶಾಲೆ, ಬರೋಡ, ಕೋಲ್ಕತ್ತಾದ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯ ಮತ್ತು ಪ್ಯಾರಿಸ್‌ ಲಂಡನ್‌ ಮುಂತಾದೆಡೆಗಳಲ್ಲಿ ಚಿತ್ರ ಕಲಾಭ್ಯಾಸ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ಚಿತ್ರಕಲಾ ಪ್ರಪಂಚದಲ್ಲಿ ಅದ್ವಿತೀಯ ಸಾಧನೆ. ಹಲವಾರು ಕಡೆ ಸಾಂಘಿಕ ಪ್ರದರ್ಶನಗಳು, ಬೆಂಗಳೂರು, ಮುಂಬಯಿ, ನವದೆಹಲಿ, ಚೆನ್ನೈ, ಮುಂತಾದೆಡೆ ಹಲವಾರು ಬಾರಿ ನಡೆಸಿದ ಪ್ರದರ್ಶನಗಳಲ್ಲದೆ ವಿದೇಶಗಳಲ್ಲೂ ಪ್ರದರ್ಶನ. ಹೀಮಾ ಸಿವನೇಸನ್‌ ನೇತೃತ್ವದ ಮಲ್ಬೊರನ್‌ ಪ್ರದರ್ಶನ, ದೀಪಕ್‌ ಅನಂತ್‌ ನೇತೃತ್ವದ ಪ್ಯಾರಿಸ್‌ ಪ್ರದರ್ಶನ, ಸ್ವೀಡನ್ನಿನ ಬೊರಾಸ್‌ ಮ್ಯೂಸಿಯಂ, ಫಿಲಿಪ್‌ ವಗ್ನೇ ನೇತೃತ್ವದ ವಾಕಕ್‌ ಆರ್ಟ್‌ ಸೆಂಟರಿನ ಮಿನ್ನಪೋಲೀಸ್‌ನಲ್ಲಿ ಪ್ರದರ್ಶನ, ಮೆಕ್ಸಿಕೋ ಸಿಟಿ ಮ್ಯೂಸಿಯಂ, ಕೆನಡಾದ ವ್ಯಾಂಕೋವರ್ ನಲ್ಲಿ ಸಮಕಾಲೀನ ಪ್ರದರ್ಶನ ಲಂಡನ್‌, ಟೊಕಿಯೋ ಮುಂತಾದ ಪ್ರಮುಖ ಪ್ರದರ್ಶನಗಳಲ್ಲಿ ಪ್ರದರ್ಶಿಸಿದ ಚಿತ್ರ ರಚನೆಗಳು. ನ್ಯೂಯಾರ್ಕ್‌ನ ಪಿಕಾಸೋ ಆರ್ಟ್ ಗ್ಯಾಲರಿ, ಬೆಂಗಳೂರಿನ ಎಸ್‌.ಕೆ. ಇ, ಗ್ಯಾಲರಿ ಮತ್ತು ವೆಂಕಟಪ್ಪ ಆರ್ಟ್ ಗ್ಯಾಲರಿ, ಮುಂಬಯಿಯ ಚೆಮೌಲ ಗ್ಯಾಲರಿ, ಮೈಸೂರಿನ ಯಲವಾಲ ಗ್ಯಾಲರಿ ಮುಂತಾದೆಡೆ ನಡೆಸಿದ ಏಕವ್ಯಕ್ತಿ ಪ್ರದರ್ಶನಗಳು. ಮಿನ್ನೆಪೊಲೀಸ್‌, ಅಮೆರಿಕಾ, ಹಲವಾರು ಖಾಸಗಿ ವಸ್ತು ಸಂಗ್ರಹಾಲಯಗಳಲ್ಲಿ ಸಂಗ್ರಹಿತ. ವಿದ್ಯಾರ್ಥಿದೆಸೆಯಲ್ಲಿ ಕರ್ನಾಟಕದ ಲಲಿತಕಲಾ ಅಕಾಡಮಿ ವಿದ್ಯಾರ್ಥಿ ವೇತನವಲ್ಲದೆ ಲಂಡನ್ನಿನ ಇನ್‌ಲ್ಯಾಕ್‌ ಫೌಂಡೇಷನ್ನಿನ ವಿದ್ಯಾರ್ಥಿವೇತನ ಪಡೆದ ಹೆಗ್ಗಳಿಕೆ. ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ಭಾರತ ಸರ್ಕಾರದ ಫೆಲೋಷಿಪ್‌, ಲಂಡನನ್ನಿನ ಸೌತ್‌ಬೇ ಸಮಕಾಲೀನ ಕಲಾ ಗೌರವ, ಜಿ.ಎಸ್‌. ಶೆಣೈ ಪ್ರಶಸ್ತಿ ಮುಖ್ಯವಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ನಾರಾಯಣಸ್ವಾಮಿ ಜಿ – ೧೯೨೬ ಮಹಾಲಕ್ಷ್ಮೀ ಎಚ್.ಎಸ್‌ – ೧೯೩೯

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top