ಶೇಷಗಿರಿ ಹಾನಗಲ್‌

Home/Birthday/ಶೇಷಗಿರಿ ಹಾನಗಲ್‌
Loading Events

೧೦.೧೦.೧೯೨೨ ತಬಲವಾದನದಲ್ಲಿ ಪ್ರಯೋಗಶೀಲರೆನಿಸಿರುವ ಶೇಷಗಿರಿ ಹಾನಗಲ್‌ರು ಹುಟ್ಟಿದ್ದು ಧಾರವಾಡ. ತಂದೆ ಕೃಷ್ಣರಾವ್‌ ಹಾನಗಲ್‌, ತಾಯಿ ರಾಧಬಾಯಿ. ಹುಟ್ಟಿನಿಂದಲೇ ಪೋಲಿಯೋಗೆ ತುತ್ತಾಗಿ ವಿಕಲಚೇತನರಾಗಿದ್ದರೂ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಸಾಮಾನ್ಯ ಶಿಕ್ಷಣದಿಂದ ವಂಚಿತರಾದರೂ ಸಂಗೀತ ಕ್ಷೇತ್ರದಲ್ಲಿ ಹಾರ್ಮೋನಿಯಂ, ಪಿಟೀಲುವಾದನದ ಅಭ್ಯಾಸ ಮಾಡಿದ್ದರೂ ಕಡೆಗೆ ಆಯ್ದುಕೊಂಡದ್ದು ತಬಲವಾದನ. ಮಹಾರಾಷ್ಟ್ರದ ಪ್ರಸಿದ್ಧ ತಬಲವಾದಕರಾದ ನಾರಾಯಣರಾವ್‌ ಇಂದೋರಕರವರಲ್ಲಿ ತಬಲ ಶಿಕ್ಷಣ. ಮೊದಲ ಆಕಾಶವಾಣಿಯ ಕಾರ್ಯಕ್ರಮ ಮುಂಬಯಿ ಆಕಾಶವಾಣಿಯಿಂದ ಪ್ರಸಾರ. ೧೯೫೧ರಲ್ಲಿ ಧಾರವಾಡ ನಿಲಯದ ಕಲಾವಿದರಾಗಿ ನೇಮಕ. ಅಕ್ಕ ಗಂಗೂಬಾಯಿ ಹಾನಗಲ್‌, ಇವರ ಮಗಳು ಕೃಷ್ಣಾ ಹಾನಗಲ್‌ ಒಳಗೊಂಡಂತೆ ಸವಾಯಿ ಗಂಧರ್ವ. ಉಸ್ತಾದ್‌ ರೆಹಮತ್‌ ಖಾನ್‌, ಭಿಮಸೇನ್ ಜೋಶಿ, ಮಲ್ಲಿಕಾರ್ಜುನ್ ಮನಸೂರ, ಜಸ್‌ರಾಜ್‌, ಬಸವರಾಜ ರಾಜಗುರು ಮುಂತಾದವರಿಗೆ ನೀಡಿದ ತಬಲವಾದನದ ಸಹಕಾರ. ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗಿ. ನೇಪಾಳ, ಪಾಕಿಸ್ತಾನದಲ್ಲಿ ನಡೆದ ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ, ಕೆನಡಾ, ಅಮೆರಿಕಾ, ಭಾರತ ಉತ್ಸವಗಳಾದ ಫ್ರಾನ್ಸ್, ಜರ್ಮನಿ, ಲಂಡನ್‌, ಹಾಲೆಂಡ್‌, ದೇಶಗಳಲ್ಲಿ ನೀಡಿದ ಕಲಾಪ್ರದರ್ಶನ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಕೃಪಾ ಕುಟೀರ ಪ್ರಶಸ್ತಿ, ಹಿಂದೂಸ್ತಾನಿ ಕಲಾಕಾರ ಸಂಸ್ಥೆಯಿಂದ ನಾದಶ್ರೀ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಟಿತ ಕನಕ ಪುರಂದರ ಪ್ರಶಸ್ತಿ ಪುರಸ್ಕೃತರು.   ಇದೇದಿನಹುಟ್ಟಿದಕಲಾವಿದರು ಡಿ.ಕೆ. ಹೆಬಸೂರ – ೧೯೨೬ ಮಹಾದೇವ ಶೆಟ್ಟಿ – ೧೯೪೩ ಗೀತಾ ವಿಶ್ವನಾಥ್‌ – ೧೯೪೩ ಕಾಮತ್‌ ಎಂ.ಎಸ್. – ೧೯೪೭ ಲೋಹಾರ್‌ ಎಂ.ಬಿ. – ೧೯೪೭ ನೀರ್ನಳ್ಳಿ ಗಣಪತಿ – ೧೯೫೧

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top