
- This event has passed.
ಶೇಷಗಿರಿ ಹಾನಗಲ್
October 10
೧೦.೧೦.೧೯೨೨ ತಬಲವಾದನದಲ್ಲಿ ಪ್ರಯೋಗಶೀಲರೆನಿಸಿರುವ ಶೇಷಗಿರಿ ಹಾನಗಲ್‌ರು ಹುಟ್ಟಿದ್ದು ಧಾರವಾಡ. ತಂದೆ ಕೃಷ್ಣರಾವ್ ಹಾನಗಲ್, ತಾಯಿ ರಾಧಬಾಯಿ. ಹುಟ್ಟಿನಿಂದಲೇ ಪೋಲಿಯೋಗೆ ತುತ್ತಾಗಿ ವಿಕಲಚೇತನರಾಗಿದ್ದರೂ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಸಾಮಾನ್ಯ ಶಿಕ್ಷಣದಿಂದ ವಂಚಿತರಾದರೂ ಸಂಗೀತ ಕ್ಷೇತ್ರದಲ್ಲಿ ಹಾರ್ಮೋನಿಯಂ, ಪಿಟೀಲುವಾದನದ ಅಭ್ಯಾಸ ಮಾಡಿದ್ದರೂ ಕಡೆಗೆ ಆಯ್ದುಕೊಂಡದ್ದು ತಬಲವಾದನ. ಮಹಾರಾಷ್ಟ್ರದ ಪ್ರಸಿದ್ಧ ತಬಲವಾದಕರಾದ ನಾರಾಯಣರಾವ್ ಇಂದೋರಕರವರಲ್ಲಿ ತಬಲ ಶಿಕ್ಷಣ. ಮೊದಲ ಆಕಾಶವಾಣಿಯ ಕಾರ್ಯಕ್ರಮ ಮುಂಬಯಿ ಆಕಾಶವಾಣಿಯಿಂದ ಪ್ರಸಾರ. ೧೯೫೧ರಲ್ಲಿ ಧಾರವಾಡ ನಿಲಯದ ಕಲಾವಿದರಾಗಿ ನೇಮಕ. ಅಕ್ಕ ಗಂಗೂಬಾಯಿ ಹಾನಗಲ್, ಇವರ ಮಗಳು ಕೃಷ್ಣಾ ಹಾನಗಲ್ ಒಳಗೊಂಡಂತೆ ಸವಾಯಿ ಗಂಧರ್ವ. ಉಸ್ತಾದ್ ರೆಹಮತ್ ಖಾನ್, ಭಿಮಸೇನ್ ಜೋಶಿ, ಮಲ್ಲಿಕಾರ್ಜುನ್ ಮನಸೂರ, ಜಸ್‌ರಾಜ್, ಬಸವರಾಜ ರಾಜಗುರು ಮುಂತಾದವರಿಗೆ ನೀಡಿದ ತಬಲವಾದನದ ಸಹಕಾರ. ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗಿ. ನೇಪಾಳ, ಪಾಕಿಸ್ತಾನದಲ್ಲಿ ನಡೆದ ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ, ಕೆನಡಾ, ಅಮೆರಿಕಾ, ಭಾರತ ಉತ್ಸವಗಳಾದ ಫ್ರಾನ್ಸ್, ಜರ್ಮನಿ, ಲಂಡನ್, ಹಾಲೆಂಡ್, ದೇಶಗಳಲ್ಲಿ ನೀಡಿದ ಕಲಾಪ್ರದರ್ಶನ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಕೃಪಾ ಕುಟೀರ ಪ್ರಶಸ್ತಿ, ಹಿಂದೂಸ್ತಾನಿ ಕಲಾಕಾರ ಸಂಸ್ಥೆಯಿಂದ ನಾದಶ್ರೀ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಟಿತ ಕನಕ ಪುರಂದರ ಪ್ರಶಸ್ತಿ ಪುರಸ್ಕೃತರು. ಇದೇದಿನಹುಟ್ಟಿದಕಲಾವಿದರು ಡಿ.ಕೆ. ಹೆಬಸೂರ – ೧೯೨೬ ಮಹಾದೇವ ಶೆಟ್ಟಿ – ೧೯೪೩ ಗೀತಾ ವಿಶ್ವನಾಥ್ – ೧೯೪೩ ಕಾಮತ್ ಎಂ.ಎಸ್. – ೧೯೪೭ ಲೋಹಾರ್ ಎಂ.ಬಿ. – ೧೯೪೭ ನೀರ್ನಳ್ಳಿ ಗಣಪತಿ – ೧೯೫೧
* * *