ಶ್ಯಾಮಲ ಜಿ. ಭಾವೆ

Home/Birthday/ಶ್ಯಾಮಲ ಜಿ. ಭಾವೆ
Loading Events
This event has passed.

೧೪.೦೩.೧೯೪೧ ಉಭಯಗಾನ ವಿದುಷಿ ಎಂದೇ ಪ್ರಖ್ಯಾತಿ ಪಡೆದಿರುವ ಶಾಮಲ ಜಿ. ಭಾವೆಯವರು ಹುಟ್ಟಿದ್ದು ಬೆಂಗಳೂರು. ತಂದೆ ಗೋವಿಂದ ವಿಠ್ಠಲಭಾವೆ, ಗ್ವಾಲಿಯರ್ ಘರಾನಾ ಗಾಯಕರು, ತಾಯಿ ಲಕ್ಷ್ಮೀ ಗೋವಿಂದ ಭಾವೆ, ಉತ್ತಮ ಗಾಯಕಿ. ಓದಿದ್ದು ಬಿ.ಎ. ಆನರ್ಸ್. ಮೂರನೆಯ ವಯಸ್ಸಿನಿಂದಲೇ ತಂದೆಯಿಂದಲೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ಪ್ರಾರಂಭ. ಜೊತೆಗೆ ಕರ್ನಾಟಕ ಸಂಗೀತದ ಕಲಿಕೆ-ಎ. ಸುಬ್ಬರಾವ್ ಮತ್ತು ಕುರುಡಿ ವೆಂಕಣ್ಣಚಾರ್ ರವರಲ್ಲಿ. ಎರಡು ಕ್ಷೇತ್ರಗಳಲ್ಲೂ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆ. ಉಭಯಗಾನ ವಿದುಷಿ ಎಂಬ ಹೆಗ್ಗಳಿಕೆ. ಆಕಾಶವಾಣಿ, ವಿಶ್ವವಿದ್ಯಾಲಯದ ವೇದಿಕೆಗಳು, ಶಾಸ್ತ್ರೀಯ ಸಂಗೀತ ಧ್ವನಿ ಮತ್ತು ಸಂಸ್ಕರಣದ ಪ್ರಾತ್ಯಕ್ಷಿಕೆ-ಸೋದಾಹರಣ ಭಾಷಣಗಳು. ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಗ್ವಾಲಿಯರ್ ಘರಾನ ಹಾಡುಗಾರಿಕೆ. ಸಾರ್ಕ್ ಸಮ್ಮೇಳನದ ಸಂಗೀತೋತ್ಸವ, ಮೈಸೂರು ದಸರ ಉತ್ಸವ, ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್, ಭಾರತ್ ಕಲ್ಚರ್ ಇಂಟಿಗ್ರೇಷನ್ ಸಂಗೀತೋತ್ಸವ, ಮಲ್ಲಿಕಾರ್ಜುನ ಮನಸೂರ್ ಸಂಗೀತೋತ್ಸವ, ಗ್ವಾಲಿಯರ್ ತಾನ್‌ಸೇನ್ ಸಂಗೀತ ಸಮಾರೋಹ್, ಮುಂಬೈನ ಸುರ್-ಸಿಂಗಾರ್ ಸಂಸದ್, ಸ್ವಾಮಿ ಹರಿದಾಸ್ ಸಂಗೀತೋತ್ಸವಗಳಲ್ಲಿ ಮತ್ತು ಅಮೆರಿಕಾ, ಇಂಗ್ಲೆಂಡ್, ಕೆನಡಾ, ಜರ್ಮನಿ, ಇಟಲಿ, ಫ್ರಾನ್ಸ್, ಶ್ರೀಲಂಕಾ, ಆಸ್ಟ್ರೇಲಿಯಾ ಮುಂತಾದೆಡೆ ನಡೆಸಿಕೊಟ್ಟ ಹಲವಾರು ಕಾರ್ಯಕ್ರಮಗಳು. ಭಕ್ತಿಗೀತೆಗಳು, ದಾಸಕೀರ್ತನೆ, ಭಜನ್, ಲಘು ಸಂಗೀತ, ಭಾವಗೀತೆಗಳ ನೂರಾರು ಧ್ವನಿಸುರಳಿ, ಸುವರ್ಣ ಭಾರತ, ಉತ್ಸವ ಭಾರತ, ಗೀತ ತರಂಗ, ವಚನ ಸುಧಾ ವಿಶಿಷ್ಟ ಧ್ವನಿಸುರಳಿಗಳು. ಸಂಗೀತ ನಿರ್ದೇಶಕಿಯಾಗಿ ಸ್ವರಸತ್ಕಾರ್, ಸ್ವರ-ಆನಂದ್, ಗಾಂಧಾರ ಮಂದಾಕಿನಿ ಸಂಸ್ಥೆಗಳ ಹುಟ್ಟು, ವಿದ್ಯಾರ್ಥಿಗಳಿಗೆ ತರಬೇತಿ. ಕೆಲವರ್ಷ ರಾಜ್ಯ ಸಂಗೀತ, ಅಕಾಡಮಿ ಅಧ್ಯಕ್ಷೆ. ಪ್ರಶಸ್ತಿ ಗೌರವಗಳು ಹಲವಾರು, ಉಭಯ ಗಾನವಿದುಷಿ, ಮುಂಬೈ ಕರ್ನಾಟಕ ಸಂಘದಿಂದ ಗಾನ ಕೋಗಿಲೆ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಸುರ್‌ಸಿಂಗಾರ್, ಸುರಮಣಿ ಪ್ರಶಸ್ತಿ, ನ್ಯೂಯಾರ್ಕ್‌ನ ಕೊಲಂಬಿಯಾ ವಿ.ವಿ.ಯ ನೈಟಿಂಗೇಲ್ ಆಫ್ ಇಂಡಿಯಾ, ಹೂಸ್ಟನ್ ವಿ.ವಿ.ಯ ಗೌರವ ಡಾಕ್ಟರೇಟ್ ಜೊತೆಗೆ ೯೭-೨೦೦೧ ರಾಜ್ಯ ಸಂಗೀತ-ನೃತ್ಯ ಅಕಾಡಮಿಯ ಅಧ್ಯಕ್ಷೆ ಪದವಿ.   ಇದೇ ದಿನ ಹುಟ್ಟಿದ ಕಲಾವಿದರು : ಬಸವರಾಜ ಸಿ. ಅಕ್ಕಿ – ೧೯೩೫ ಇಂದಿರಾ ಆರ್. – ೧೯೩೮

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top