Loading Events

« All Events

  • This event has passed.

ಸಂಗಮೇಶ್ವರ ಗುರವ

December 7, 2023

೧೯೩೧ ಶುದ್ಧ ಕಿರಾಣ ಶೈಲಿಯಲ್ಲಿ ಹಾಡುವ ವಿರಳ ಗಾಯಕರಾದ ಸಂಗಮೇಶ್ವರ ಗುರವ ರವರು ಹುಟ್ಟಿದ್ದು ಜಮಖಂಡಿಯಲ್ಲಿ. ತಂದೆ ಗಣಪತಿರಾವ್ ಗುರವ, ತಾಯಿ ನಂದೆವ್ವ. ಪ್ರಾರಂಭದಲ್ಲಿ ಅಬ್ದುಲ್ ಕರೀಂಖಾನರ ಗಾಯನದ ಅನುಕರಣೆ, ಜಮಖಂಡಿ ಸಂಸ್ಥಾನದ ಆಸ್ಥಾನ ಗಾಯಕರಾಗಿದ್ದ ತಂದೆಯಿಂದಲೇ ಸಂಗೀತದ ಪ್ರಥಮ ಪಾಠ. ಉದ್ಯೋಗ ಸೇರಿದ್ದು ಗಂಜೀ ಫ್ರಾಕ್ ಕಾರ್ಖಾನೆ. ಕೆಲಸ ಮುಗಿದ ತಕ್ಷಣ ಸಂಗೀತ ಕಲಿಕೆ. ಧಾರವಾಡದ ಆಕಾಶವಾಣಿ ಕಲಾವಿದರಾಗಿ ಹಲವಾರು ಕೇಂದ್ರಗಳಿಂದ ಹಾಡುಗಾರಿಕೆಯ ಪ್ರಸಾರ. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ವಿಭಾಗದ ನಿರ್ದೇಶಕರಾಗಿದ ಮಲ್ಲಿಕಾರ್ಜುನ ಮನಸೂರರಿಂದ ಸಂಗೀತದ ಅಧ್ಯಾಪಕರಾಗಿ ನೇಮಕ, ಸಾವಿರಾರು ವಿದ್ಯಾರ್ಥಿಗಳಿಗೆ ನೀಡಿದ ಸಂಗೀತ ಶಿಕ್ಷಣ. ಸುಪ್ರಸಿದ್ಧ ಮರಾಠಿ ಸಾಹಿತಿ ರಣಜಿತ್ ದೇಸಾಯಿಯವರು ತಮ್ಮ ಮನೆಯಲ್ಲಿ ಸೇರಿದ ಬೈಠರ್ ಸಂದರ್ಭದಲ್ಲಿ ಇವರ ಗಾಯನಮಟ್ಟಿ ಬೆರಳಲ್ಲಿದ್ದ ಉಂಗುರವನ್ನು ಇವರಿಗೆ ತೊಡಿಸಿ ಗಾಯಕನಿಗೆ ತೋರಿದ ಗೌರವ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಹಿರಾಬಾಯಿ ಬಡೋದಕರ ಮುಂತಾದವರಿಂದ ಪಡೆದ ಪ್ರಶಂಸೆ. ಭಕ್ತಿಪ್ರಧಾನವಾದ ಸಂಗೀತವೆಂದರೆ ಅಚ್ಚುಮೆಚ್ಚು. ವಚನಗಳು, ಅಭಂಗಗಳು, ಕಬೀರರ ಭಜನೆಗಳು, ದಾಸರ ಪದಗಳು ಎಲ್ಲದರಲ್ಲೂ ಹೊಮ್ಮುವ ಭಕ್ತಿರಸ. ಪುಣೆಯ ಸಂಗೀತ ಸಂಸ್ಥೆಯಿಂದ ಸೂರಸೇನ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಸಂಗೀತ ವಿದ್ವಾನ್ ಪದವಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು : ಅಶ್ವತ್ಥಾಚಾರಿ ಬಿ.ಕೆ. – ೧೯೩೨ ಆಚಾರ್ಯ ಪಿ.ಆರ್. – ೧೯೪೫ ರಾಘವ ನಂಬಿಯಾರ್ ಕೆ.ಎಂ. – ೧೯೩೨

* * *

Details

Date:
December 7, 2023
Event Category: