ಸಂಗೀತ ಕಟ್ಟಿ ಕುಲಕರ್ಣಿ

Home/Birthday/ಸಂಗೀತ ಕಟ್ಟಿ ಕುಲಕರ್ಣಿ
Loading Events

೦೭.೧೦.೧೯೭೦ ಪ್ರಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿಯವರು ಹುಟ್ಟಿದ್ದು ಧಾರವಾಡ. ತಂದೆ ಸಂಗೀತಪ್ರೇಮಿ ಡಾ. ಎಚ್‌.ಎ. ಕಟ್ಟಿ, ತಾಯಿ ಭಾರತಿ ಕಟ್ಟಿ, ದಸರಾ ಹಬ್ಬದ ಸರಸ್ವತಿ ಪೂಜೆಯಂದು ಹುಟ್ಟಿದ ಪ್ರತಿಭಾನ್ವಿತೆ. ಒಂದೂವರೆ ವರ್ಷದ ಮಗುವಾಗಿದ್ದಾಗಲೇ ರಾಗ, ತಾಳ, ಲಯಬದ್ಧವಾಗಿ ಹಾಡುವಕಲೆ ಕರಗತ. ನಾಲ್ಕು ವರ್ಷದವಳಾಗಿದ್ದಾಗ ಮನೆಗೆ ಬಂದ ಹಿಂದಿ ಚಿತ್ರ ನಿರ್ದೇಶಕರಾದ ನೌಷಾದ್ ಮುಂದೆ ಹಾಡಿ ಪಡೆದ ಪ್ರಶಂಸೆ. ಶೇಷಗಿರಿ ದಂಡಾಪುರ, ಪಂ. ಚಂದ್ರಶೇಖರ ಪುರಾಣಿಕ್‌ ಮಠವರಲ್ಲಿ ಪ್ರಾರಂಭಿಕ ಶಿಕ್ಷಣ. ಬಸವರಾಜ ರಾಜ ಗುರುಗಳಿಂದ ಕಿರಾಣ ಘರಾಣ ಗ್ವಾಲಿಯರ್‌ ಘರಾಣ ಶೈಲಿಯಲ್ಲಿ ೧೨ ವರ್ಷಗಳ ಸತತ ಅಭ್ಯಾಸ. ಕಿಶೋರಿ ಅಮೋನ್‌ಕರ್‌ರವರಲ್ಲಿ ಜೈಪುರ ಘರಾಣಪದ್ಧತಿ ಶಿಕ್ಷಣ. ಸುಗಮ ಸಂಗೀತ ಕ್ಷೇತ್ರಕ್ಕೆ ಸಿ.ಅಶ್ವತ್‌ರಿಂದ ಪರಿಚಯ. ೧೯೯೧ರಲ್ಲಿ ಉಪೇಂದ್ರ ಕುಮಾರ್‌ರ ಅಮರಪ್ರೇಮ ಚಲನಚಿತ್ರಕ್ಕಾಗಿ ಹಾಡುಗಾರಿಕೆ. ನಾಗಮಂಡಲ, ಅಮೆರಿಕಾ ಅಮೆರಿಕಾ ಮುಂತಾದ ಚಲನಚಿತ್ರಗಳ ಗಾಯಕಿ. ಹಿಂದೂಸ್ತಾನಿ ಸಂಗಿತವಷ್ಟೇ ಅಲ್ಲದೇ ಭಜನೆ, ವಚನ, ದಾಸವಾಣಿ,ಅಭಂಗ್‌, ಭಗವದ್ಗೀತೆ ಮತ್ತು ಜಾನಪದ ಗೀತೆ ಹಾಡಿ ಪಡೆದ ಪ್ರಸಿದ್ಧಿ. ಮಾಸ್ಟರ್‌ ರೆಕಾರ್ಡಿಂಗ್‌ ಕಂ, ಎಚ್‌.ಎಂ.ವಿ, ಲಹರಿ, ಸಂಗೀತ ಸಾಗರ್‌. ಮುಂತಾದ ಸಂಸ್ಥೆಗಳಿಂದ ಸಿ ಡಿ ಬಿಡುಗಡೆ. ಆಕಾಶವಾಣಿ, ದೂರದರ್ಶನದ ‘ಎ’ ಶ್ರೇಣಿ ಕಲಾವಿದೆ. ರಾಷ್ಟ್ರೀಯ ಜಾಲದಲ್ಲಿ ಹಲವಾರು ಕಾರ್ಯಕ್ರಮಗಳ ಬಿತ್ತರ. ಹೊರದೇಶಗಳಾದ ಯು ಕೆ, ಅಮೆರಿಕಾ, ಕೆನಡಾ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ಉತ್ತರ ಕ್ಯಾಲಿಫೋರ್ನಿಯಾ, ಅಟ್ಲಾಂಟ, ಸೆಯಿಂಟ್‌ಲೂಯಿಸ್‌, ಇಂಡಿಯಾನ, ಓಹಿಯೋ, ಪೆನ್ಸಿಲ್ವೇನಿಯಾ ಮುಂತಾದೆಡೆ ಕನ್ನಡ ಸಂಘಗಳ ಆಹ್ವಾನಿತ ಕಲಾವಿದೆಯಾಗಿ ನಡೆಸಿಕೊಟ್ಟ ಕಚೇರಿಗಳು. ಸಂಗೀತ ಭಾರತೀ, ಗಾನಕೋಗಿಲೆ ಬಿರುದು, ಸ್ವರ ಮಂದಾರ ಆಲ್ಬಮ್‌, ಆರ್ಯಭಟ ಪ್ರಶಸ್ತಿ, ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ, ಉದಯ ಟಿವಿ ನಾಕೌಟ್‌ಪ್ರಶಸ್ತಿ (ನಾಗಮಂಡಲ ಚಲನಚಿತ್ರಕ್ಕಾಗಿ), ಚಿತ್ರರಸಿಕರ ಸಂಘದ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇದಿನಹುಟ್ಟಿದಕಲಾವಿದರು ಪ್ರಭಾವತಿ ಚನ್ನಬಸಪ್ಪ – ೧೯೪೦ ಚಿಂದೋಡಿ ವಿಜಯಕುಮಾರ್ – ೧೯೭೦

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top