Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಸಂತ ಸಚ್ಚಿದಾನಂದ ದಾಸ್ – ಕಣಜ

ಸಂತ ಸಚ್ಚಿದಾನಂದ ದಾಸ್

Home/Birthday/ಸಂತ ಸಚ್ಚಿದಾನಂದ ದಾಸ್
Loading Events

೨೭.೦೨.೧೯೪೯ ಗಮಕಿ, ಕಥಾಕೀರ್ತನಕಾರ, ಅಧ್ಯಾತ್ಮ ಮಾರ್ಗದರ್ಶಿ ಸಚ್ಚಿದಾನಂದ ದಾಸ್‌ರವರು ಹುಟ್ಟಿದ್ದು ಹಾಸನ ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅತ್ತಿಗೋಡು ಗ್ರಾಮ. ತಂದೆ ಉಪಾಧ್ಯಾಯ, ಗಮಕಿ, ಕೀರ್ತನಕಾರರಾದ ಬಿ.ಎಸ್. ಶ್ರೀನಿವಾಸಯ್ಯ, ತಾಯಿ ಕನಕಲಕ್ಷ್ಮಮ್ಮ. ಓದಿದ್ದು ಎಸ್.ಎಸ್.ಎಲ್.ಸಿ. ವರೆಗೆ. ೯ನೇ ವಯಸ್ಸಿನಿಂದಲೇ ಗಮಕ ಕಲೆ ಅಭ್ಯಾಸ. ತಂದೆಯವರಿಂದಲೇ ಪ್ರಥಮ ಪಾಠ. ಕೀರ್ತನೆ ಹಾಗೂ ಗಮಕ ಕಲೆಯ ಸಾಂಪ್ರದಾಯಿಕ ಶಿಕ್ಷಣ. ಕೊಣನೂರು ಸೀತಾರಾಮಶಾಸ್ತ್ರಿಗಳಿಂದ ಕೀರ್ತನೆಯ ಸ್ಫೂರ್ತಿ. ೧೨ನೇ ವಯಸ್ಸಿಗೆ ರಾಜ್ಯಮಟ್ಟದ ಗಮಕ ಸ್ಪರ್ಧೆಯಲ್ಲಿ, ಚಿತ್ರಕಲಾ ಸಂಘದವರಿಂದ ಪಡೆದ ಪ್ರಥಮ ಬಹುಮಾನ, ಗಮಕ ಮತ್ತು ಕೀರ್ತನೆಯಲ್ಲಿ ಹೆಸರುಗಳಿಸಿದ್ದ ಅಣ್ಣ ಬಿ.ಎಸ್. ಪಾಂಡುರಂಗರವರೊಡನೆ ಗಮಕ ಜುಗಲಬಂದಿ ಕಾರ್ಯಕ್ರಮ. ಕೆ.ಆರ್. ನಗರ ಸಹೋದರರೆಂದೇ ಪ್ರಸಿದ್ಧಿ. ೧೯೮೦ರಲ್ಲಿ ಅಖಿಲ ಕರ್ನಾಟಕ ಕೀರ್ತನಕಾರರ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಡನೆ, ಕೃಷ್ಣರಾಜನಗರದಲ್ಲಿ ಅದ್ದೂರಿಯಾಗಿ ಆಯೋಜಿಸಿದ ಕೀರ್ತಿ, ಶ್ರೀ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೆಂಗಲ್ ಹನುಮಂತಯ್ಯ, ಭದ್ರಗಿರಿ ಸರ್ವೋತ್ತಮ ದಾಸರು, ಗೋಪಿನಾಥ ದಾಸರು (ಪ್ರಭಾತ್ ಕಲಾವಿದರು) ಹಂಡೆ ಗುರು ವೇದವ್ಯಾಸರು, ಶಿವಲಿಂಗಸ್ವಾಮಿ ಹಿರೇಮಠ್ ಮುಂತಾದ ಮುಖ್ಯ ಅತಿಥಿಗಳ ಉಪಸ್ಥಿತಿ. ಅಧ್ಯಾತ್ಮಿಕ ಬದುಕಿನತ್ತ ಕೊಂಡೊಯ್ಯಲು ಕೆ.ಆರ್. ನಗರದಲ್ಲಿ ಶ್ರೀ ರಾಮಾನಂದಾಶ್ರಮ ಅಧ್ಯಾತ್ಮಿಕ ಕೇಂದ್ರ (ದಾಸಪೀಠ) ಚಾರಿಟಬಲ್ ಟ್ರಸ್ಟ್ ಸ್ಥಾಪನೆ, ಗಣಪತಿ, ಸುಬ್ರಹ್ಮಣ್ಯ, ಶ್ರೀರಾಮ, ಶಿವ ಪಾರ್ವತಿ ದೇವರ ಪ್ರತಿಷ್ಠಾಪನೆ. ಆಶ್ರಮದಲ್ಲಿ ಗಮಕ ಪಾಠಶಾಲೆ, ಕೀರ್ತನ ಕಲಾಸಂಘ, ಎಚ್.ಎನ್.ಆರ್. ವಿದ್ಯಾಸಂಸ್ಥೆಗಳ ಕಾರ್ಯಾರಂಭ. ಆಕಾಶವಾಣಿ, ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ ಮುಂತಾದುವುಗಳಲ್ಲಿ ನಡೆಸಿಕೊಟ್ಟ ಹರಿಕಥಾ, ಗಮಕ ಕಾರ್ಯಕ್ರಮಗಳು. ಪರಕಾಲ ಮಠದ ಶ್ರೀ ಶ್ರೀ ಯವರಿಂದ ಕೀರ್ತನ ಶಿರೋಮಣಿ ಬಿರುದು. ಕೀರ್ತನ ಚತುರ, ಕೀರ್ತನ ಕೇಸರಿ, ಗಮಕ ಶಿರೋಮಣಿ, ಜ್ಯೋತಿಷ್ಯರತ್ನ ಮುಂತಾದ ಇತರ ಬಿರುದುಗಳು. ಹರಿಹರ, ಗುಲಬರ್ಗಾ, ತುಮಕೂರು, ದೆಹಲಿ ಬಿರ್ಲಾ ಭವನ ಮುಂತಾದೆಡೆಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top