ಸಂ.ಗೋ. ಬಿಂದೂರಾಯರು

Home/Birthday/ಸಂ.ಗೋ. ಬಿಂದೂರಾಯರು
Loading Events
This event has passed.

೨೪-೧-೧೮೭೭ ೬-೯-೧೯೬೯ ಕಾವ್ಯವಾಚನದ ಮೂಲಕ ಮಹಾಭಾರತದ ಕಾಲಕ್ಕೆ ಕೇಳುಗರನ್ನು ಕೊಂಡೊಯ್ಯುತ್ತಿದ್ದ ಬಿಂದೂರಾಯರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳುಕಿನಲ್ಲಿ. ತಂದೆ ಗೋವಿಂದರಾಯರು, ತಾಯಿ ರಮಾಬಾಯಿ. ಪ್ರಾರಂಭಿಕ ಶಿಕ್ಷಣ ಚಿತ್ರದುರ್ಗ. ತರಗತಿಯಲ್ಲಿ ಕುಳಿತದ್ದಕ್ಕಿಂತ ಹರಿಕಥೆ, ಸಂಗೀತ ಕಚೇರಿಯಲ್ಲಿ ಕುಳಿತದ್ದೇ ಜಾಸ್ತಿ. ಶಿಕ್ಷಣದ ನಂತರ ಉದ್ಯೋಗಕ್ಕೆ ಸೇರಿದ್ದು ಅರಣ್ಯ ಇಲಾಖೆ. ಗಂಧದೆಣ್ಣೆ ಕಾರ್ಖಾನೆ, ವಸ್ತು ಪ್ರದರ್ಶನ ಶಾಖೆ, ಕೃಷ್ಣರಾಜೇಂದ್ರ ಮಿಲ್ ಹೀಗೆ ಹಲವಾರು ಕಡೆ ದುಡಿಮೆ. ನೌಕರಿ ನಿಮಿತ್ತ ಮೈಸೂರಿಗೆ ಸೇರಿದ ಮೇಲೆ ಸಾಹಿತ್ಯ-ಸಂಗೀತಗಳ ಸಂಪರ್ಕ ವಿದ್ವಾಂಸರ ಸಂಗೀತ ಕಚೇರಿ ಕೇಳುವ ಅವಕಾಶ. ಬೆಳೆದ ಸಂಗೀತ ಜ್ಞಾನ. ಕಾವ್ಯವಾಚನಕ್ಕೆ ಪ್ರಸಿದ್ಧರಾಗಿದ್ದ ಶಾಮಾಚಾರ್ಯರ ಬಳಿ ಸವಾಲು ಹಾಕಿ ಅಭ್ಯಾಸ ಮಾಡಿದ್ದು ಕುಮಾರವ್ಯಾಸ ಭಾರತದ ‘ಕೀಚಕವಧೆ’ ಪ್ರಸಂಗ. ಕೇಳುಗರಿಂದ ದೊರೆತ ಪ್ರಚಂಡ ಪ್ರಶಂಸೆ. ಬಿಂದೂರಾಯರಿಗೆ ಸಾಹಿತ್ಯ ದರ್ಶನಮಾಡಿದವರು ಬಿ.ಎಂ.ಶ್ರೀ, ಎಂ.ಆರ್.ಶ್ರೀ, ಟಿ.ಎಸ್. ವೆಂಕಣ್ಣಯ್ಯ, ಮಾಸ್ತಿ, ಡಿ.ವಿ.ಜಿ, ಮಾಸ್ತಿಯವರು ಮೈಸೂರಿನ ಸಬ್ ಡಿವಿಜನಲ್ ಆಫೀಸರಾಗಿದ್ದಾಗ ಪ್ರವಾಸ ಹೊರಟರೆ ಜೊತೆಯಲ್ಲೇ ಕರೆದೊಯ್ದು ಭಾರತವಾಚನ ಮಾಡಿಸಿ ಸಂತೋಷಿಸುತ್ತಿದ್ದರಂತೆ. ಕಾವ್ಯವಾಚನದಲ್ಲಿ ಮತ್ತಷ್ಟು ಜ್ಞಾನ ಸಂಪಾದಿಸಲು ಶ್ರೀ ಮಧ್ವಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯ, ಜಗನ್ನಾಥ ದಾಸರ ಹರಿಕಥಾಮೃತಸಾರ, ಕನಕದಾಸರ ಹರಿಭಕ್ತಸಾರ ಮುಂತಾದುವುಗಳ ಆಳವಾದ ಅಧ್ಯಯನ. ಕಾವ್ಯವಾಚನ ಕಲೆ ಶಾಶ್ವತವಾಗಿ ಉಳಿಸಲು, ಡಿ.ವಿ.ಜಿ.ಯವರು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ಗಮಕ ತರಗತಿಗಳ ಪ್ರಾರಂಭ. ಬಿಂದೂರಾಯರಿಂದ ಮೂರು ವರ್ಷ ಸತತವಾಗಿ ನಡೆದ ತರಗತಿ. ಹಲವಾರು ಶಿಷ್ಯರ ಉದಯ. ಶ್ರೀಮತಿ ಶಕುಂತಲಾಬಾಯಿ ಪಾಂಡುರಂಗರಾವ್ ಪ್ರಮುಖರು. ಗೌರವಿಸಿ ನೀಡಿದ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನಿಂದ ಮಾನಪತ್ರ ಅರ್ಪಿಸಿ ಸನ್ಮಾನ, ಮುಂಬಯಿಯ ಗಮಕ ಗೋಷ್ಠಿಯ ಅಧ್ಯಕ್ಷತೆ, ಇವರ ಕಾವ್ಯವಾಚನ ಕೇಳಿ “ಸಂಗೀತ ಬೆಡಗುಕಲೆ, ಗಮಕ ದೈವವನ್ನು ಪ್ರತ್ಯಕ್ಷೀಕರಿಸಿ ದರ್ಶನ ಮಾಡಿಸುತ್ತದೆ” ಎಂದು ವೀಣೆ ಶೇಷಣ್ಣನವರಿಂದ ಪ್ರಶಂಸಾ ನುಡಿ.   ಇದೇ ದಿನ ಹುಟ್ಟಿದ ಕಲಾವಿದರು : ಶೇಷಚಂದ್ರ ಎಚ್.ಎಲ್. – ೧೯೪೪ ಶಾಂತಾ ಪೋಟಿ – ೧೯೩೬ ರವೀಂದ್ರ ಶರ್ಮ ಟಿ. – ೧೯೬೩

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top