Loading Events

« All Events

  • This event has passed.

ಸದಾನಂದ ಕನವಳ್ಳಿ

September 18, 2023

೧೮-೯-೧೯೩೫ ಸಾಹಿತ್ಯ, ಸಂಗೀತ, ಕ್ರೀಡಾ ಪ್ರೇಮಿ ಸದಾನಂದ ಕನವಳ್ಳಿಯವರು ಹುಟ್ಟಿದ್ದು  ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದಲ್ಲಿ. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವಿ. ಡಾ. ವಿ.ಕೃ. ಗೋಕಾಕ್ ಮತ್ತು ಅರಮೆಂಡೊ ಮೆನೆಜಿಸ್ ಶಿಷ್ಯತ್ವ. ಉದ್ಯೋಗಕ್ಕಾಗಿ ಸೇರಿದ್ದು ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜು. ವಿಜಾಪುರದಲ್ಲಿ ಉಪನ್ಯಾಸಕರಾಗಿ, ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ಕಾರ್ಯನಿರ್ವಹಿಸಿ ನಿವೃತ್ತಿ. ೧೯೯೧-೯೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಹೊತ್ತ ಜವಾಬ್ದಾರಿ. ಅಲ್ಪಾವಯಲ್ಲಿ ೧೧೦ ಪುಸ್ತಕಗಳ ಪ್ರಕಟಣೆಯ ದಾಖಲೆ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಕರ್ನಾಟಕ, ಗುಲಬರ್ಗಾ ವಿಶ್ವವಿದ್ಯಾಲಯ ಕಾಲೇಜುಗಳ ಪ್ರಾಚಾರ‍್ಯರು ಮತ್ತು ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ, ಧಾರವಾಡದ ಸಿತಾರ ರತ್ನ ರಹೀಮ್ ಖಾನ್ ಸಮಿತಿ ಅಧ್ಯಕ್ಷರಾಗಿ, ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷರಾಗಿ, ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಟ್ರಸ್ಟ್ ಸದಸ್ಯರಾಗಿ ನಿರ್ವಹಿಸಿದ ಜವಾಬ್ದಾರಿಗಳು. ಹಲವಾರು ಜೀವನ ಚರಿತ್ರೆಗಳು, ಸಂಪಾದಿತ, ಅನುವಾದಿತ ಕೃತಿಗಳ ರಚನೆ. ಅನುವಾದ- ವಾಣಿಜ್ಯ ಮತ್ತು ಬ್ಯಾಂಕಿಂಗ್, ರೊಮಿಲಾ ಥಾಪಸ್, ಭೀಮಸೇನ ಜೋಶಿ, ರಾಬರ್ಟ್ ಸಿವೆಲ್, ಮಿಥಿಲೆಯನ್ನಾಳಿದ ಕರ್ನಾಟರು, ಹಿಮಾಚಲವನ್ನಾಳಿದ ಸೇನರು, ವಿಜಯನಗರದ ಆರಂಭಿಕ ಇತಿಹಾಸ, ಸಾವಿಗೆ ಆಹ್ವಾನ ಮೊದಲಾದುವು. ಸಂಪಾದಿತ-ಲಕ್ಷ್ಮೇಶ್ವರದ ಇತಿಹಾಸದ ‘ಪುಲಿಗೆರೆ’, ವೀರಶೈವ ಸಾಹಿತ್ಯ ಸಮೀಕ್ಷೆ, ಪ್ರೊ. ಸ.ಸ. ಮಾಳವಾಡರ ‘ವ್ಯಾಸಂಗ’, ಡಾ. ಎಂ.ಎಂ. ಕಲಬುರ್ಗಿ ಯವರ ‘ಮಹಾಮಾರ್ಗ’. ಜೀವನಚರಿತ್ರೆ-ದೇಶಭಕ್ತ ಕೌಜಲಗಿ ಶ್ರೀನಿವಾಸರಾಯರು, ನಾಟಕ ಸಾರ್ವಭೌಮ, ಶಿರಹಟ್ಟಿ ವೆಂಕೋಬರಾಯರು, ನಾಟಕರತ್ನ ಗುಬ್ಬಿ ವೀರಣ್ಣ, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಮಲ್ಲಿಕಾರ್ಜುನ ಮನಸೂರ, ಸವಾಯಿ ಗಂಧರ್ವ, ಹುಕ್ಕೇರಿ ಬಾಳಪ್ಪ, ಕರ್ನಾಟಕದ ಹಿಂದೂಸ್ಥಾನಿ ಸಂಗೀತಗಾರರು. ಕ್ರೀಡೆ-ಒಲಿಂಪಿಕ್ಸ್ ನಡೆದು ಬಂದ ದಾರಿ ಮತ್ತು ಪರಿಸರದ ಬಗ್ಗೆ ಕೃತಿಗಳು. ಇಂಗ್ಲಿಷ್‌ನಲ್ಲಿ-QUEST FOR JUSTICE, MALLIKARJUNA MANASUR, KARNATAKA HINDUSTANI MUSICIANS. ಇದಲ್ಲದೆ ಪತ್ರಿಕೆಗಳಿಗೆ, ವಿಶ್ವಕೋಶಕ್ಕೆ ಬರೆದ ಹಲವಾರು ಲೇಖನಗಳು. ಕರ್ನಾಟಕ ರಾಜ್ಯ ಸಂಗೀತ, ನೃತ್ಯ ಅಕಾಡಮಿಯಿಂದ ಕಲಾವಿಮರ್ಶೆಗೆ ಪ್ರಶಸ್ತಿ, ರಾಣಿಬೆನ್ನೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಸಂದ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಜಿ.ಎಚ್. ನಾಯಕ್ – ೧೯೩೫ ಶಾರದಾ ತಿರುಮಲೈ – ೧೯೩೮ ಭಾಗ್ಯಲಕ್ಷ್ಮಿ. ಎನ್.ವಿ. – ೧೯೫೦

Details

Date:
September 18, 2023
Event Category: