Loading Events

« All Events

  • This event has passed.

ಸಮೇತನಹಳ್ಳಿ ರಾಮರಾಯರು

November 24

೨೪-೧೧-೧೯೧೭ ೫-೧೦-೧೯೯೯ ಐತಿಹಾಸಿಕ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದ ರಾಮರಾಯರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಮೇತನ ಹಳ್ಳಿ. ತಂದೆ ಶ್ರೀನಿವಾಸರಾವ್, ತಾಯಿ ರುಕ್ಮಿಣಿಯಮ್ಮ. ಪ್ರಾರಂಭಿಕ ಶಿಕ್ಷಣ ಬೋದನ ಹೊಸಹಳ್ಳಿ, ಮೈಸೂರು, ದೊಡ್ಡಬಳ್ಳಾಪುರ. ಬೆಂಗಳೂರು ಸೆಂಟ್ರಲ್ ಹೈಸ್ಕೂಲಿನಿಂದ ಎಸ್.ಎಸ್.ಎಲ್.ಸಿ. ಉದ್ಯೋಗಕ್ಕಾಗಿ ಸೇರಿದ್ದು ವೈಮಾನಿಕ ಕಚೇರಿಯಲ್ಲಿ, ಸೈನಿಕ ಕಚೇರಿಯಲ್ಲಿ ಕೆಲಕಾಲ, ನಂತರ ಸೇರಿದ್ದು ಮೈಸೂರು ಸರಕಾರದ ಆರೋಗ್ಯ ಇಲಾಖೆಯಲ್ಲಿ ಸ್ಯಾನಿಟರಿ ಇನ್‌ಸ್ಪೆಕ್ಟರಾಗಿ. ಬೆಂಗಳೂರು ಪುರಸಭೆ, ಹಾಸನ ಪುರಸಭೆ, ಬ್ಯೂರೊ ಆಫ್ ಮಲೇರಿಯಾಲಜಿ ಮುಂತಾದ ಕಡೆ. ಸೀನಿಯರ್ ಹೆಲ್ತ್ ಇನ್‌ಸ್ಪೆಕ್ಟರಾಗಿ ಮಧುಗಿರಿ ಪುರಸಭೆ, ಪಾಂಡವಪುರ ಆರೋಗ್ಯ ಕೇಂದ್ರ, ನಂಜನಗೂಡು ತಾಲ್ಲೂಕು, ಹೊಸಕೋಟೆ ಆರೋಗ್ಯಕೇಂದ್ರ, ಹೀಗೆ ಹಲವೆಡೆ ಸೇವೆ ಸಲ್ಲಿಸಿ ನಿವೃತ್ತಿ. ಬೆಳೆದ ಸಾಹಿತ್ಯದ ಒಲವಿನಿಂದ ರಚಿಸಿದ ಕೃತಿಗಳು ಹಲವಾರು. ಭೀಷ್ಮ ಸಂಕಲ್ಪ, ತಲಕಾಡುಗೊಂಡ, ಮಹಾಶ್ವೇತೆ, ಶಿಲ್ಪಸಂಗೀತ, ದ್ರೋಹಾಡಂಬರ, ಶ್ರೀಕೃಷ್ಣ ಮಾನಸ ಮುಂತಾದ ಹತ್ತು ನಾಟಕಗಳು. ಎಲೆ ಮರೆಯಹೂ, ಮೊನೆಗಾರ, ನೃತ್ಯ ಸರಸ್ವತಿ, ಯದುವೊಡೆಯ, ಸಿರಿಯಲದೇವಿ ಮೊದಲ್ಗೊಂಡು ಒಂಬತ್ತು ಕಾದಂಬರಿಗಳು. ಕಥಾಸಂಕಲನಗಳು – ಸ್ವರ್ಗ ಸೋಪಾನ, ಪ್ರಾಣವೀಣೆ, ಈಸಬೇಕು. ಗೀತನಾಟಕ-ರಾಸಲೀಲೆ. ಮಹಾಕಾವ್ಯ-ಶಾಕುಂತಲಾ. ಅನುವಾದ – ಟಿಪ್ಪು ಸುಲ್ತಾನ. ಆತ್ಮಕಥೆ-ಕೋಟೆಮನೆ ಮುಂತಾದ ೨೯ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ. ಎಲೆಮರೆಯಹೂ ಪ್ರೌಢಶಾಲಾ ತರಗತಿಗೆ, ತಲಕಾಡುಗೊಂಡ ನಾಟಕ ಬಿ.ಎ, ಬಿ.ಎಸ್‌ಸಿ ತರಗತಿ ಮತ್ತು ಪಿ.ಯು. ತರಗತಿಗೆ ಸವತಿ ಗಂಧವಾರಣೆ ಕಾದಂಬರಿ ಬಿಕಾಂ ತರಗತಿಗೆ, ನಾಟ್ಯಮಂದಾರ ನಾಟಕ ಬಿ.ಎ. ತರಗತಿಗೆ ಪಠ್ಯಪುಸ್ತಕಗಳಾಗಿ ಆಯ್ಕೆ. ಸಂದ ಪ್ರಶಸ್ತಿ ಗೌರವಗಳು ಹಲವಾರು. ಶಿಲ್ಪಸಂಗೀತ, ಶ್ರೀಕೃಷ್ಣ ದರ್ಶನ ಕೃತಿಗಳಿಗೆ ಕ.ಸಾ.ಪ.ದಿಂದ ಪ್ರಶಸ್ತಿ, ತಲಕಾಡುಗೊಂಡ, ಸ್ವರ್ಗಸೋಪಾನ, ಶಾಕುಂತಲಾ ಕೃತಿಗಳಿಗೆ ಕರ್ನಾಟಕ ಸರಕಾರದಿಂದ ಪ್ರಶಸ್ತಿ, ಪರಶುರಾಮ ಕಾದಂಬರಿಗೆ ವಿಶ್ವೇಶ್ವರಯ್ಯ ಸ್ಮಾರಕ ಪ್ರತಿಷ್ಠಾನ ಪ್ರಶಸ್ತಿ. ಇವರ ಶ್ರೀಮತಿಯವರ ಹೆಸರಿನಲ್ಲಿ ಸಾಹಿತ್ಯ ಪರಿಷತ್ತಿನಲ್ಲಿ ದತ್ತನಿ ಸ್ಥಾಪನೆ. ಇವರ ಹೆಸರಿನಲ್ಲಿ ಬಿ.ಎಂ.ಶ್ರೀ. ಪ್ರತಿಷ್ಠಾನ ಮತ್ತು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಸ್ಥಾಪಿಸಿದ ದತ್ತಿನಿಗಳು. ೧೯೯೮ರಲ್ಲಿ ಬಂಧುಮಿತ್ರರು ಅರ್ಪಿಸಿದ ಗೌರವ ಗ್ರಂಥ ‘ರಾಸದರ್ಶನ.’

Details

Date:
November 24
Event Category: