Loading Events

« All Events

  • This event has passed.

ಸಿ.ಎನ್‌. ಪಾಟೀಲ್‌

August 16

೧೬..೧೯೨೩ ೨೫..೨೦೦೭ ಚಿತ್ರಕಲೆ ಕಲಿತದಷ್ಟೇ ಅಲ್ಲದೆ ಚಿತ್ರಕಲಾಭ್ಯಾಸಕ್ಕಾಗಿ ಹಲವಾರು ಸಂಸ್ಥೆಗಳ ಸ್ಥಾಪನೆಯ ರೂವಾರಿಯಾದ ಪಾಟೀಲರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ನಿಟ್ಟೂರ ಗ್ರಾಮದಲ್ಲಿ. ತಂದೆ ನಿಂಗನಗೌಡ ದ್ಯಾಮನಗೌಡ ಪಾಟೀಲ, ತಾಯಿ ನಿಂಗಮ್ಮ. ಬಾಲ್ಯದಿಂದಲೇ ಬೆಳೆದ ಚಿತ್ರಕಲಾಭ್ಯಾಸ. ೧೧ ನೇ ವಯಸ್ಸಿನಲ್ಲಿಯೇ ಆಗಿನ ಮುಂಬಯಿ ರಾಜ್ಯದ ಮಂತ್ರಿಯಾಗಿದ್ದ ಸಿದ್ದಪ್ಪ ಕಂಬಳಿಯವರ ಭಾವಚಿತ್ರ ಬಿಡಿಸಿ ಪಡೆದ ಪ್ರಶಂಸೆ, ಪುರಸ್ಕಾರ. ಮುಂಬಯಿ ಜೆ.ಜೆ ಕಲಾಶಾಲೆಯಿಂದ ಪಡೆದ ಮುಂದುವರೆದ ಶಿಕ್ಷಣ. ಚಿತ್ರಕಲೆಯಲ್ಲಿ ರಾಜ್ಯಕ್ಕೆ ರ‍್ಯಾಂಕ್‌ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆ. ಗದುಗಿನ ವಿಜಯ ಕಲಾ ಮಂದಿರ, ಬಿಜಾಪುರದಲ್ಲಿ ಸಿದ್ದೇಶ್ವರ ಕಲಾಮಂದಿರ, ಹಾವೇರಿಯಲ್ಲಿ ಹವ್ಯಾಸಿ ಕಲಾಕೇಂದ್ರ ಸ್ಥಾಪಕರು. ಕೆಲವೆಡೆ ನಿರ್ದೇಶಕರ ಜವಾಬ್ದಾರಿ. ಮೈಸೂರು ದಸರಾ ಪ್ರದರ್ಶನದ ಕಲಾ ವಿಭಾಗ, ಲಲಿತ ಕಲಾ ಅಕಾಡಮಿಯ ಕಲಾ ಪ್ರದರ್ಶನ, ಚಿತ್ರಕಲಾ ಪರಿಷತ್ತಿನ ಕಲಾವಿದರ ಸಮಿತಿ, ಗದಗ ಬೋರ್ಡ್ ಸ್ಕೂಲಿನ ಸದಸ್ಯ, ಗದಗ ಜಿಲ್ಲಾ ಸ್ಕೌಟ್ಸ್ ಅಂಡ್‌ ಗೈಡ್‌ ಕಾರ್ಯದರ್ಶಿ ಕಮೀಷನರಾಗಿ ಸಲ್ಲಿಸಿದ ಸೇವೆ. ಸ್ಕೌಟ್ಸ್ ಮತ್ತು ಗೈಡ್‌ ಸಂಸ್ಥೆ ಸ್ಥಾಪಕ ಲಾರ್ಡ್ ವೊವೆಲ್‌ ಮತ್ತು ಬೆಡೆನ್‌ ಪೊವೆಲ್ಲರ ಚಿತ್ರ ಬಿಡಿಸಿದ ಖ್ಯಾತಿ. ಕರ್ನಾಟಕ ನಾಮಕರಣ ಸಂದರ್ಭದಲ್ಲಿ ರಾಜರಾಜೇಶ್ವರಿ ಚಿತ್ರಬಿಡಿಸಿ, ದೇವರಾಜ್‌ ಅರಸ್‌ ಮತ್ತು ಜಯಚಾಮರಾಜ ಒಡೆಯರಿಂದ ಸನ್ಮಾನ. ಚಿಕ್ಕಮ್ಮ, ರಾಷ್ಟ್ರವೀರ, ನಾಗರಿಕ, ಶಾಂತಿ ಸಾಮ್ರಾಟ ನಾಟಕಗಳ ನಿರ್ದೇಶನ. ಹಲವಾರು ನಾಟಕಗಳ ಕರ್ತೃ. ರಾಷ್ಟ್ರವೀರ ನಾಟಕಕ್ಕೆ ಕೇಂದ್ರ ಸರಕಾರದ ಪ್ರಶಸ್ತಿ. ಅಣ್ಣ ತಮ್ಮ, ಟಿಪ್ಪುಸುಲ್ತಾನ್‌, ದಸರಾ, ಬೂದಿ ಮುಚ್ಚಿದ ಕೆಂಡ, ಮಾಂಗಲ್ಯ ಭಾಗ್ಯ, ಗುರುಕಾಣಿಕೆ ನಾಟಕಗಳ ಪ್ರಮುಖ ಪಾತ್ರಧಾರಿ. ೪೩ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುವರ್ಣಪದಕ, ರಾಷ್ಟ್ರಪತಿಗಳಿಂದ ಪದಕ, ಪ್ರಶಸ್ತಿ, ರಾಜ್ಯಲಲಿತಕಲಾ ಅಕಾಡಮಿ ಪ್ರಶಸ್ತಿ, ಫೀಲ್ಡ್‌ಮಾ || ಕಾರ್ಯಪ್ಪನವರಿಂದ ದೊರೆತ ಪದಕ, ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು: ಎ.ಎಸ್‌. ಮೂರ್ತಿ – ೧೯೨೯ ಸೋಮಶೇಖರಗೌಡ – ೧೯೪೦

* * *

Details

Date:
August 16
Event Category: