ಸಿ.ಕೆ. ತಾರಾ

Home/Birthday/ಸಿ.ಕೆ. ತಾರಾ
Loading Events

೧೯೩೩ ಕರ್ನಾಟಕ ಸಂಗೀತ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ಗಾಯಕಿ ಎನಿಸಿರುವ ಸಿ.ಕೆ. ತಾರಾ ರವರು ಹುಟ್ಟಿದ್ದು ಚಿತ್ರದುರ್ಗ. ತಂದೆ ಸಿ.ಎನ್. ಕೃಷ್ಣರಾವ್, ತಾಯಿ ರುಕ್ಮಿಣಿಬಾಯಿ, ಚಿಂತಲಪಲ್ಲಿ ಕೃಷ್ಣಮೂರ್ತಿ, ಎಂ.ಡಿ. ಪಾರ್ಥಸಾರಥಿ, ಎಸ್. ಕೃಷ್ಣಮೂರ್ತಿ, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಎ. ಕೃಷ್ಣಮಾಚಾರ್ ಇವರಲ್ಲಿ ಕರ್ನಾಟಕ ಸಂಗೀತ, ಎಚ್.ಕೆ. ನಾರಾಯಣ ಇವರಲ್ಲಿ ಸುಗಮ ಸಂಗೀತ ಶಿಕ್ಷಣ, ಆಕಾಶವಾಣಿ ಬಿ ಹೈ ದರ್ಜೆ ಕಲಾವಿದೆ. ಮೈಸೂರು ಆಕಾಶವಾಣಿ, ಬೆಂಗಳೂರು ಆಕಾಶವಾಣಿ, ದೂರದರ್ಶನದ ರಾಷ್ಟ್ರೀಯ ಜಾಲದಲ್ಲಿ ಹಲವಾರು ಬಾರಿ ಕಾರ್ಯಕ್ರಮ ಪ್ರಸಾರ. ಗೋಕುಲ ನಿರ್ಗಮನ, ಆಮ್ರಪಾಲಿ, ಗಿರಿಜಾ ಕಲ್ಯಾಣ ಸಂಗೀತ ರೂಪಗಳಲ್ಲಿ ಪಾತ್ರ ಮತ್ತು ನಿರ್ದೇಶನ. ಹರಿದಾಸರ ಕೀರ್ತನೆಗಳಿಗೆ, ಬಸವಣ್ಣ, ಅಕ್ಕಮಹಾದೇವಿ ವಚನಗಳಿಗೆ ಸ್ವಯಂ ರಾಗ ಸಂಯೋಜನೆ, ಮದರಾಸ್ ಮ್ಯೂಸಿಕ್ ಅಕಾಡಮಿ ಸಂಗೀತೋತ್ಸವದಲ್ಲಿ ಶ್ರೀ ಗೀತಗೋಪಾಲ ಸಂಗೀತ ರೂಪಕದ ಪ್ರದರ್ಶನ, ಪಡೆದ ಪ್ರಶಂಸೆ. ಮಲ್ಲೇಶ್ವರಂ ರಾಮಮಂದಿರ, ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ, ಶ್ರೀರಾಮನವಮಿ, ಗಣೇಶೋತ್ಸವಗಳಲ್ಲಿ ನಡೆಸಿಕೊಟ್ಟ ಸಂಗೀತ ಕಚೇರಿಗಳು ಹಲವಾರು ಧ್ವನಿಸುರಳಿಗಳಿಗೆ ರಾಗ ಸಂಯೋಜನೆ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಎರಡು ಬಾರಿ ಪ್ರಶಸ್ತಿ, ಧ್ವನಿ ಸುಗಮ ಸಂಸ್ಥೆಯಿಂದ, ಶುಭರಾಮ್ ಟ್ರಸ್ಟ್ ರಾಷ್ಟ್ರೀಯ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಗಾನ ಕಲಾಪರಿಷತ್ತಿನ ವಾರ್ಷಿಕ ಸಂಗೀತೋತ್ಸವ ಪ್ರಶಸ್ತಿ, ತ್ಯಾಗರಾಜ ಗಾನ ಸಭಾದಿಂದ ಸಂಗೀತ ಕಲಾಭೂಷಣ, ನಾದ ಜ್ಯೋತಿ ತ್ಯಾಗರಾಜ ಭಜನ ಸಭಾದಿಂದ ಕಲಾಜ್ಯೋತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಸಂತ ಶಿಶುನಾಳ ಷರಿಫ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು : ಸರೋಜ ಡಿ.ಆರ್. – ೧೯೩೨ ಶೋಭಾಗೋಪಾಲರಾವ್ – ೧೯೫೬ ಸಿದ್ಧರಾಮಯ್ಯ ಮಠಪತಿ – ೧೯೫೮ ದೀಪಕ್‌ಕುಮಾರ್ ಕಾಳೆ – ೧೯೬೮

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top