
ಸಿ. ಬಸವಲಿಂಗಯ್ಯ
July 29, 2024
೨೯.೭.೧೯೫೮ ರಂಗಭೂಮಿಯ ಸಂಪನ್ಮೂಲವ್ಯಕ್ತಿ, ನಟ, ಜಾನಪದ ಆಸಕ್ತ ಬಸವಲಿಂಗಯ್ಯ ಹುಟ್ಟಿದ್ದು ಬೆಂಗಳೂರು. ತಂದೆ ಚಿಕ್ಕಣ್ಣ, ತಾಯಿ ಚಿಕ್ಕಮ್ಮ, ಶಾಲಾ ಕಾಲೇಜು ದಿನಗಳಿಂದಲೂ ಜಾನಪದ, ರಂಗಭೂಮಿಯತ್ತ ಬೆಳೆಸಿಕೊಂಡ ಆಸಕ್ತಿ. ಹಲವಾರು ಪ್ರಸಿದ್ಧರ ನಿರ್ದೇಶನದ ನಾಟಕಗಳಲ್ಲಿ ಭಾಗಿ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪಡೆದ ಸ್ನಾತಕೋತ್ತರ ಪದವಿ. ರಂಗಾಯಣಕ್ಕಾಗಿ ಕುಸುಮಬಾಲೆ, ಪ್ರಪಂಚಪ್ರವಾಹ, ಗಾಂಧಿ V/S ಗಾಂಧಿ, ಟಿಪ್ಪುವಿನ ಕನಸುಗಳು ಮುಂತಾದವುಗಳ ನಿರ್ದೇಶನ. ಸಮುದಾಯ ತಂಡಕ್ಕಾಗಿ ಅಲ್ಲಮನ ಅದ್ಭುತ, ನ್ಯಾಯ, ಸತಿಯೊಡನೆ ಸಹಗಮನ, ಜೋಗತಿ ಕಲ್ಲು, ಏಕಲವ್ಯ, ತದ್ರೂಪಿ ಮುಂತಾದವುಗಳ ಜೊತೆಗೆ ಹಿಂದಿ, ತೆಲುಗು, ಅಸ್ಸಾಮಿ, ಮಲಯಾಳಂ ನಾಟಕಗಳ ನಿರ್ದೇಶನದ ಹೊಣೆ. ರಾಜ್ಯದ ವಿವಿಧೆಡೆ ರಂಗತರಬೇತಿ ಶಿಬಿರಗಳ ಸಂಘಟನೆ. ಹಲವಾರು ನಾಟಕಗಳ ವಿಚಾರ ಸಂಕಿರಣಗಳಲ್ಲಿ ಭಾಗಿ, ಹೈದರಾಬಾದ್ ದೂರದರ್ಶನದಿಂದ ಹಲವಾರು ನಾಟಕಗಳ ಪ್ರಸಾರ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಾಟಕೋತ್ಸವ, ರಂಗಶಿಬಿರಗಳ ಹೊಣೆ. ಎನ್.ಎಸ್.ಡಿ.ಯ ಪ್ರಾದೇಶಿಕ ಕೇಂದ್ರದ ಸಂಪನ್ಮೂಲ ಸಹಾಯಕ ನಿರ್ದೇಶಕ, ಮೈಸೂರು ರಂಗಾಯಣದ ನಿರ್ದೇಶಕರಾಗಿ, ನಾಟಕ ಅಕಾಡೆಮಿ ಸದಸ್ಯರಾಗಿ ಹೊತ್ತ ಜವಾಬ್ದಾರಿ. ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್, ಅಂಬೇಡ್ಕರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಇದೇ ದಿನ ಹುಟ್ಟಿದ ಕಲಾವಿದ ಉಮೇಶ್ ಕುಮಾರ್ ಕೆ.ಎಚ್ – ೧೯೪೯
* * *