ಸುಕನ್ಯಾರಾಮ್‌ ಗೋಪಾಲ್

Home/Birthday/ಸುಕನ್ಯಾರಾಮ್‌ ಗೋಪಾಲ್
Loading Events

೧೩.೦೯.೧೯೫೭ ಕರ್ನಾಟಕ ಸಂಗೀತದ ವಾದನದ ಕಲೆಯಲ್ಲಿ ಪುರುಷ ಪ್ರಾಬಲ್ಯವನ್ನು ಮುರಿದು ಘಟಂ ಕಲಿತ ದೇಶದ ಮೊಟ್ಟ ಮೊದಲ ಮಹಿಳೆ ಎನಿಸಿರುವ ಸುಕನ್ಯಾರಾಮ್‌ ಗೋಪಾಲ್‌ರವರು ಹುಟ್ಟಿದ್ದು ಚನೈನಲ್ಲಿ. ತಂದೆ ಸುಬ್ರಹ್ಮಣ್ಯಂ, ತಾಯಿ ರಂಗನಾಯಕಿ. ಸಂಗೀತದ ಮನೆತನ. ೧೨ನೇ ವಯಸ್ಸಿನಿಂದಲೇ ಮೃದಂಗವಾದನ ಕಲಿಕೆ. ವಿಕ್ಕುವಿನಾಯಕಂರವರಿಂದ ಮೃದಂಗ ಮತ್ತು ಘಟಂ ಶಿಕ್ಷಣ. ವಿದ್ವಾನ್ ಗುರುಮೂರ್ತಿಯವರಿಂದ ಪಿಟೀಲು ಶಿಕ್ಷಣ. ಕರ್ನಾಟಕ ಸಂಗೀತದ ಹಲವಾರು ದಿಗ್ಗಜರಿಗೆ ನೀಡಿದ ಘಟಂ ಸಾಥಿ. ‘ಎ’ ದರ್ಜೆಯ ಆಕಾಶವಾಣಿ ಕಲಾವಿದೆ. ಹಲವಾರು, ಘಟಂ ಏಕವ್ಯಕ್ತಿ ಕಾರ್ಯಕ್ರಮಗಳು ಆಕಾಶವಾಣಿ ದೂರದರ್ಶನದಿಂದ ಪ್ರಸಾರ. ವಿಶಿಷ್ಟವಾದುದನ್ನು ಸಾಧಿಸಲು ಆರು ಘಟಂ ವಾದ್ಯಗಳನ್ನು ವಿವಿಧ ಶ್ರುತಿ – ಲಯಗಳಿಗೆ ಹೊಂದಿಸಿ ಜಲತರಂಗ್‌ರೀತಿ ನುಡಿಸಿ ‘ಘಟಂ ತರಂಗ್‌’ ನಲ್ಲಿ ಸಾಧಿಸಿದ ಕೀರ್ತಿ. ಹತ್ತು ಬೆರಳುಗಳನ್ನೂ ಉಪಯೋಗಿಸಿ ಮೃದು – ಮಧುರ ಸ್ವರ ಹೊರಡಿಸಬಲ್ಲ ಚಾಕಚಕ್ಯತೆ. ಹಾಡುಗಾರರು ಪಕ್ಕವಾದ್ಯವನ್ನು ಆಯ್ಕೆಮಾಡಿಕೊಳ್ಳುವಂತೆ ತಮ್ಮ ಪ್ರಮುಖ ಘಟಂ ವಾದನಕ್ಕೆ ಪಿಟೀಲು, ಮೃದಂಗ, ಕೊಳಲು, ತಬಲ, ಮೋರ್ಚಿಂಗ್ ನುಡಿಸಬಲ್ಲ ಸಮರ್ಥ ಮಹಿಳಾ ಕಲಾವಿದರನ್ನೇ ಆಯ್ಕೆಮಾಡಿ ನೀಡುತ್ತಿರುವ ‘ಸ್ತ್ರೀ ತಾಳ ತರಂಗ್‌’ ಇವರ ಮತ್ತೊಂದು ಸಾಧನೆ. ಏಕವ್ಯಕ್ತಿ ಘಟಂ ವಾದನ, ಸ್ತ್ರೀ ತಾಳತರಂಗ್‌ ಕಾರ್ಯಕ್ರಮವು ಯು.ಕೆ. ಅಮೆರಿಕಾ, ಫ್ರಾನ್ಸ್, ಜರ್ಮನಿ, ಸ್ವಿಜರ್‌ಲ್ಯಾಂಡ್‌, ಕೆನಡಾ ಮುಂತಾದೆಡೆ ಕಾರ್ಯಕ್ರಮ ನೀಡಿ ಬಾರಿಸಿದ ಜಯಭೇರಿ. ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಚೆನೈನ ನಾರದಗಾನ ಸಭಾದಿಂದ ಪ್ರಶಸ್ತಿ, ಮುಂಬಯಿಯ ಬಂದುಪ್‌ ಆರ್ಟ್ ಸೊಸೈಟಿಯಿಂದ ಲಯ ಕಲಾನಿಧಿ ಪ್ರಶಸ್ತಿ, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್‌ ರಾಗತರಂಗಿಣಿ ಪ್ರಶಸ್ತಿ, ಎಚ್‌.ವಿ. ಪುಟ್ಟಾಚಾರ್‌ ಸ್ಮಾರಕ ಪ್ರಶಸ್ತಿ, ಲಯಕಲಾ ಪ್ರತಿಭಾಮಣಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ರಘೋತ್ತಮ ಪುಟ್ಟಿ – ೧೯೧೪ ಗುಂಡಪ್ಪ ಎ.ಎಸ್‌ – ೧೯೩೯

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top