ಸುಕನ್ಯಾ ಕಳಸ

Home/Birthday/ಸುಕನ್ಯಾ ಕಳಸ
Loading Events
This event has passed.

೧೩-೫-೧೯೬೦ ಹಾಸ್ಯಲೇಖಕಿ, ಕವಯಿತ್ರಿ ಸುಕನ್ಯಾ ಕಳಸರವರು ಹುಟ್ಟಿದ್ದು ಚಿಕ್ಕಮಗಳೂರಿನ ಕಳಸದಲ್ಲಿ. ತಂದೆ ಎಚ್.ಪುಟ್ಟದೇವರಯ್ಯ, ತಾಯಿ ನಾಗಮ್ಮ. ಹೈಸ್ಕೂಲುವರೆಗೆ ವಿದ್ಯಾಭ್ಯಾಸ ಕಳಸದಲ್ಲಿ. ಕಾಲೇಜು ವಿದ್ಯಾಭ್ಯಾಸ ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಮತ್ತು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ. ಪದವಿ ಗಳಿಸಿದ ನಂತರ ಉದ್ಯೋಗಕ್ಕೆ ಸೇರಿದ್ದು ಅಂಚೆ ಇಲಾಖೆಗೆ. ಶಾಲಾ ಕಾಲೇಜು ದಿನಗಳಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ಕಥೆ, ಕವನಗಳ ರಚನೆ. ತುಷಾರ ಪತ್ರಿಕೆಯಲ್ಲಿ ಪ್ರಕಟಿತ. ಉದ್ಯೋಗಕ್ಕೆ ಸೇರಿದ ಮೇಲೂ ಓದಿನ ಹಂಬಲದಿಂದ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದ ಎಂ.ಎ. ಪದವಿ. ೧೯೮೧ರಲ್ಲಿ ಅಂಚೆ ಇಲಾಖೆಗೆ ಸೇರಿದ ಇವರು ಸಾಹಿತ್ಯದಲ್ಲಿ ಹೆಚ್ಚು ಸಾಸಬೇಕೆಂಬ ಹಂಬಲದಿಂದ ೨೦೦೬ ಮಾರ್ಚ್‌ನಲ್ಲಿ  ಪಡೆದ ಸ್ವಯಂ ನಿವೃತ್ತಿ. ವೃತ್ತಿಯಿಂದ ವಿಶ್ರಾಂತಿ ಪಡೆದರೂ ಪ್ರವೃತ್ತಿಯಿಂದ ಸದಾ ಅವಿಶ್ರಾಂತರು ; ಒಂದಿಲ್ಲೊಂದು ಕಾರ‍್ಯ ಚಟುವಟಿಕೆಯಲ್ಲಿ ನಿರತರು. ಬಹುಮುಖ ಪ್ರತಿಭೆ-ಬಹುಮುಖಿ ಪ್ರವೃತ್ತಿ. ಇವರು ಬರೆದ ಭಾವಗೀತೆಗಳಿಗೆ ಎಚ್.ಆರ್. ಲೀಲಾವತಿಯವರಿಂದ ರಾಗ ಸಂಯೋಜನೆ, ಮಂಗಳೂರು ಆಕಾಶವಾಣಿಯಿಂದ ಪ್ರಸಾರ. ಹಲವಾರು ರಚನೆಗಳು ದೂರದರ್ಶನದಲ್ಲಿ ಪ್ರಸ್ತುತ. ನಾಟಕದಲ್ಲಿ ಅಭಿನಯ, ನಿರ್ದೇಶನದ ಅನುಭವ. ಜಾನಪದ ಗೀತಗಾಯನದಲ್ಲಿ  ವಿಶೇಷ ಪರಿಶ್ರಮ. ಶಾಸ್ತ್ರೀಯ ಸಂಗೀತದಲ್ಲೂ  ಪರಿಣತಿ. ಹಲವಾರು ಭಾಷಣ, ಗಾಯನಗಳ ಸೋದಾಹರಣ ಕಾರ‍್ಯಕ್ರಮ. ಕಥೆ, ಕವನ, ನಗೆಲೇಖನಗಳು ತುಷಾರ, ತರಂಗ, ಸುಧಾ, ವನಿತ, ಪ್ರಜಾವಾಣಿ, ಕರ್ಮವೀರ, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿತ. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಇವರಿಗೆ ಹುಟ್ಟಿನಿಂದ ಬಂದ ಧೈರ‍್ಯ, ಸಾಹಸ ರಕ್ತಗತ. ಚಾರಣ ಇವರ ಮತ್ತೊಂದು ಹವ್ಯಾಸ. ಕುದುರೆಮುಖ ಶಿಖರ, ಕೊಡಚಾದ್ರಿ ಶಿಖರ, ಕೂಡ್ಲು ಜಲಪಾತ, ಹನುಮನಗುಂಡಿ ಜಲಪಾತ, ಅರಿಶಿನಗುಂಡಿ ಜಲಪಾತ, ಗಡಾಯಿ ಕಲ್ಲು ಮುಂತಾದ ಸ್ಥಳಗಳಿಗೆ ಹಲವಾರು ಬಾರಿ ಚಾರಣ, ಮಾರ್ಗದರ್ಶನ. ಪ್ರಥಮ ಕವನ ಸಂಕಲನ ‘ಗತದೊಂದಿಗೆ ಸ್ವಗತ’ ಮತ್ತು ‘ಭಾನುವಾರವೆಂದರೆ…’ ಮತ್ತು ಪ್ರಬಂಧ ಸಂಕಲನ ‘ಕಂಪ್ಯೂಟರ್ ಕುಟ್ಟಿ’ ಪ್ರಕಟಿತ. ವಿದ್ಯಾರ್ಥಿನಿ ದೆಸೆಯಲ್ಲಿಯೇ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದ ಇವರಿಗೆ ‘ಭಾನುವಾರವೆಂದರೆ…’ ಕವನ ಸಂಕಲನಕ್ಕೆ ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ ದೊರೆತಿದೆ. ಕೆಲವು ಕವನಗಳು ಸಾಹಿತ್ಯ ಅಕಾಡಮಿಯಿಂದ ಇಂಗ್ಲಿಷ್‌ಗೆ ಅನುವಾದ. ಕೃಷಿಕ ವಂಶದಲ್ಲಿ ಹುಟ್ಟಿದ್ದರಿಂದ ಕೃಷಿಯಲ್ಲೂ ಆಸಕ್ತಿ. ರುಡ್‌ಸೆಟ್, ಕೃಷಿ ವಿಶ್ವವಿದ್ಯಾಲಯದವರು ನಡೆಸಿದ ಶಿಬಿರಗಳಲ್ಲಿ, ಪುಷ್ಪ ಕೃಷಿ ಶಿಬಿರಗಳಲ್ಲಿ  ಭಾಗಿ. ಪುಷ್ಪ ಜೋಡಣೆ, ತೋಟಗಾರಿಕೆ ಎಂದರೆ ವಿಶೇಷ ಒಲವು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top