ಸುನೀತಿ ಕೃಷ್ಣಸ್ವಾಮಿ

Home/Birthday/ಸುನೀತಿ ಕೃಷ್ಣಸ್ವಾಮಿ
Loading Events
This event has passed.

೨೧-೫-೧೯೩೨ ೧೪-೮-೨೦೦೦ ಪ್ರಸಿದ್ಧ ಕಾದಂಬರಿಗಾರ್ತಿ ಸುನೀತಿ ಕೃಷ್ಣಸ್ವಾಮಿಯವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಸುಬ್ಬರಾವ್ ತಾಯಿ ಪಾರ್ವತಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಸರಕಾರಿ ಪ್ರಾಥಮಿಕ ಶಾಲೆ, ಮಹಿಳಾ ಸೇವಾ ಸಮಾಜ. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಉಪೇಕ್ಷೆ ಮಾಡುತ್ತಿದ್ದ ಕಾಲದಲ್ಲಿ ತಂದೆ ತಾಯಿಗಳಿಂದ ಓದಿಗೆ ಪ್ರೋತ್ಸಾಹ. ಬಿ.ಎ. ಪದವಿ ಪಡೆದದ್ದು ಬೆಂಗಳೂರಿನ ಮಹಾರಾಣಿ ಕಾಲೇಜಿನಿಂದ. ಎಳೆವೆಯಿಂದಲೇ ಸಾಹಿತ್ಯದ ಹುಚ್ಚು ಬೆಳೆಸಿಕೊಂಡು ಬರವಣಿಗೆ ಪ್ರಾರಂಭಿಸಿದ್ದು ಕೊರವಂಜಿ ಪತ್ರಿಕೆಯಿಂದ. ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಕಥೆಗಳು ಪ್ರಕಟಿತ. ಹೆಣ್ಣು ಭ್ರೂಣ ಒಂದನ್ನು ಗರ್ಭಪಾತ ಮಾಡಿ ತೆಗೆಸಿ ಬಿಡುವ ನಿರ್ಧಾರಕ್ಕೆ ತಾಯಿ ಬಂದಾಗ, ತಾಯಿಯೊಡನೆ ಸಂಭಾಷಣೆ ನಡೆಸುವ ಕಾಲ್ಪನಿಕ ವಸ್ತುವುಳ್ಳ ಕಥೆಯೊಂದು ಪ್ರಕಟಣೆಗೊಂಡಾಗ ಓದುಗರಿಂದ ದೊರೆತ ಅಗಾಧ ಪ್ರಶಂಸೆ. ಹಲವಾರು ಕಾದಂಬರಿಗಳ ರಚನೆ. ಮೊದಲ ಕಾದಂಬರಿ ‘ಅದೃಷ್ಟ ಚಕ್ರ’ ಇವರಿಗೆ ಬಹಳಷ್ಟು ಪ್ರಸಿದ್ಧಿ ತಂದ ಕೃತಿ. ಕನ್ನಡ ಪ್ರಭ ಪತ್ರಿಕೆಯಲ್ಲಿ ೧೯೬೯ರಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟಿತ. ಇವರ ಮತ್ತೊಂದು ಕಾದಂಬರಿ ‘ಪಚ್ಚೆಮನೆ’ ಇದೂ ಮೊದಲಿನ ಕಾದಂಬರಿಯಷ್ಟೇ ಓದುಗರನ್ನು ಆಕರ್ಷಿಸಿದ ಕಾದಂಬರಿ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ೧೯೭೨ರಲ್ಲಿ ಧಾರಾವಾಹಿಯಾಗಿ ಪ್ರಕಟಿತ. ಹಲವಾರು ವೃದ್ಧಾಶ್ರಮಿಗಳನ್ನು ಸಂದರ್ಶಿಸಿ, ವೃದ್ಧರ ಸಮಸ್ಯೆಗಳ ಬಗ್ಗೆ ಬರೆದ ಕಾದಂಬರಿ ‘ಸಂಧ್ಯಾಕಿರಣ.’ ಇದಲ್ಲದೆ ಸ್ಮೃತಿರಂಗ, ಮಂದಾರ, ಡಾಕ್ಟರ್ ರಮ್ಯ, ಗಿಣಿ-ರಾಗಿಣಿ-ವಿರಾಗಿಣಿ, ದೀಪಲಕ್ಷ್ಮಿ, ಮೃಗಜಲ, ಕಂದರದಿಂದ ಅಂಬರಕೆ ಪ್ರಕಟಿತ ಪ್ರಮುಖ ಕಾದಂಬರಿಗಳು. ಸಂಘ ಸಂಸ್ಥೆಗಳ ಸಾಂಸ್ಕೃತಿಕ ಕಾರ‍್ಯಕ್ರಮಗಳ ರೂವಾರಿ. ಹಲವಾರು ನಾಟಕಗಳನ್ನು ಬರೆದು, ನಿರ್ದೇಶಿಸಿ, ನಟಿಸಿದ ಕೀರ್ತಿ-ಆಕಾಶವಾಣಿಯ ವನಿತಾ ವಿಹಾರ ಕಾರ‍್ಯಕ್ರಮಗಳಲ್ಲಿ ಸುನೀತಾ ಕೃಷ್ಣಸ್ವಾಮಿಯವರ ಹಾಜರಿ ಅನಿವಾರ‍್ಯ. ಪ್ರಸಿದ್ಧ ಸಿನಿಮಾ ನಟ ರಾಜೇಶ್ ಜೊತೆಯಲ್ಲಿ ಮಹಿಷಾಸುರ ಮರ್ದಿನಿಯಲ್ಲಿ ದುರ್ಗಿಯಾಗಿ ನಟಿಸಿ ಗಳಿಸಿದ ಅಪಾರ ಯಶಸ್ಸು. ಕಥೆ ಕಾದಂಬರಿ ರಚನೆಯ ಜೊತೆಗೆ ಇವರಿಗೆ ದೊರೆತಿದ್ದ ಮತ್ತೊಂದು ವರವೆಂದರೆ ಸುಮಧುರ ಕಂಠ. ಹಲವಾರು ವರ್ಷ ಆಕಾಶವಾಣಿಯ ಶಾಸ್ತ್ರೀಯ ಸಂಗೀತ ಕಾರ‍್ಯಕ್ರಮಗಳಲ್ಲೂ  ಭಾಗಿ. ಕ್ಯಾನ್ಸರ್ ಪೀಡಿತರಾಗಿದ್ದರೂ ಕಿದ್ವಾಯ್ ಇನ್‌ಸ್ಟಿಟ್ಯೂಟ್ ಪತ್ರಿಕೆಗಾಗಿ ಹಲವಾರು ಲೇಖನಗಳನ್ನು ಬರೆದು ಕ್ಯಾನ್ಸರ್ ಪೀಡಿತರಿಗೆ ಧೈರ‍್ಯ ತುಂಬುತ್ತಿದ್ದ ಇವರು ೨೦೦೦ದ ಸ್ವಾತಂತ್ರ್ಯೋತ್ಸವ ಮುನ್ನಾದಿನ ವಿವಶರಾದರು.   ಇದೇ ದಿನ ಹುಟ್ಟಿದ ಸಾಹಿತಿ : ದೀಪಾಶ್ರೀನಿವಾಸ್ – ೧೯೫೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top